Advertisement

ನವ ಕದಿರಿನ ನವ ಚೈತನ್ಯದ ತೆನೆ ಹಬ್ಬ

10:40 AM Sep 10, 2019 | keerthan |

ಶಿರ್ವ: ಕ್ರೈಸ್ತರ ಪವಿತ್ರ ಹಬ್ಬಗಳಲ್ಲಿ ಒಂದಾದ ಮೊಂತಿ ಫೆಸ್ಟ್‌ ಇಂದು ಸಂಭ್ರಮದಲ್ಲಿ ನಡೆಯುತ್ತಿದೆ.  ಹೊಸ ತೆನೆಯನ್ನು ಮನೆಗೆ ತರುವ ತೆನೆ ಹಬ್ಬ ಇದಾಗಿದ್ದು, ಮಾತೆ ಮೇರಿಯ ಹುಟ್ಟುಹಬ್ಬ  ಇದಾಗಿದ್ದು, ಕ್ರೈಸ್ತರ ಮನೆಗಳಲ್ಲಿ ಸಂಭ್ರಮ ಮೂಡಿದೆ.

Advertisement

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೆನೆ ಹಬ್ಬವನ್ನು ಸಂತಸ ಸಡಗರದಿಂದ ಆಚರಿಸಲಾಗುತ್ತಿದೆ. ಬೆಳಗಿನ ಜಾವ ಚರ್ಚ್‌ ಗೆ ತರಳಿ ಪೂಜೆ ಸಲ್ಲಿಸುತ್ತಾರೆ. ಚೆಂದದ ಬಟ್ಟೆ ತೊಟ್ಟು, ಕೈಯಲ್ಲಿ ಬಣ್ಣ ಬಣ್ಣದ ಹೂವುಗಳನ್ನು ಹಿಡಿದು ತರುವ ಮಕ್ಕಳಿಗೆ ಈ ಹಬ್ಬದ ಪ್ರಧಾನ ಆಕರ್ಷಣೆ. ನಂತರ ಮೆರವಣಿಗೆಯಲ್ಲಿ ಹೊಸ ತೆನೆಯನ್ನು ಹಿಡಿದು ಪೂಜೆ ಸಲ್ಲಿಸಲಾಗುತ್ತದೆ. ಹೀಗೆ ಅಲ್ಲಿ ಆಶೀರ್ವಚಿಸಲ್ಪಟ್ಟ ಭತ್ತದ ತೆನೆಗಳನ್ನು ಮನೆಗೆ ತಂದು, ಹೊಸ ಬೆಳೆಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ, ಹಾಲು ಅಥವಾ ಪಾಯಸದಲ್ಲಿ ಹಾಕಿ ಸೇವಿಸುತ್ತಾರೆ.

ಈ ದಿನದ ಮತ್ತೊಂದು ವಿಶೇಷವೆಂದರೆ ಇಂದು ಮಾಂಸಹಾರಿ ನಿಷಿದ್ಧ. ಇಂದಿನ ದಿನ ಹಲವು ಬಗೆಯ ತರಕಾರಿಗಳ ಪದಾರ್ಥ ತಯಾರಿಸಿ ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ.

ಶಿರ್ವ ಆರೋಗ್ಯ ಮಾತಾ ದೇವಾಲಯದಲ್ಲಿ ರವಿವಾರ ತೆನೆಹಬ್ಬದ ಸಂಭ್ರಮದಿಂದ ನಡೆಯಿತು. ರೆ.ಫಾ.ಡೆನ್ನಿಸ್ ಡೇಸಾ ನೇತ್ರತ್ವದಲ್ಲಿ ಬಲಿಪೂಜೆ ಸಹಿತ ಧಾರ್ಮಿಕ ಆಚರಣೆಗಳು ನಡೆದವು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು.

Advertisement

Advertisement

Udayavani is now on Telegram. Click here to join our channel and stay updated with the latest news.

Next