ಬೆಳ್ತಂಗಡಿ: ದೇವರು ಪ್ರಕೃತಿಯ ಸೃಷ್ಟಿ ನಡೆಸಿದ ಬಳಿಕ ಮನುಷ್ಯನ ಸೃಷ್ಟಿ ಮಾಡಿದ. ಆದ್ದರಿಂದ ಮನುಷ್ಯನಿಗೆ ಅಗತ್ಯವಿರುವುದು ಎಲ್ಲವೂ ಈ ಪ್ರಕೃತಿಯಲ್ಲಿ ದೊರೆಯುತ್ತದೆ. ದೇವರ ಮುಂದೆ ನಾವೆಲ್ಲ ಒಂದೇ. ಅಗತ್ಯಕ್ಕಿಂತ ಹೆಚ್ಚಿನ ಆಹಾರದ ಬಳಕೆ ಮಾಡುವುದು ಬೇಡ. ಆಗ ಹಸಿವು ಮುಕ್ತ ಪ್ರಪಂಚ ನಿರ್ಮಾಣವಾಗುತ್ತದೆ. ಇತರರಿಗೆ ತಿನ್ನಲು ಇಲ್ಲದಂತೆ ಮಾಡಿ ನಾವು ತಿನ್ನುವುದು ಬೇಡ. ಇದ್ದುದನ್ನು ಹಂಚಿ ತಿನ್ನೋಣ ಎಂದು ಮಂಗಳೂರು ಜೆಪ್ಪುವಿನ ಸೈಂಟ್ ಆಂಟನಿ ಆಶ್ರಮದ ನಿರ್ದೇಶಕ ಫಾ| ಓನಿಲ್ ಡಿ’ಸೋಜಾ ಹೇಳಿದರು. ಅವರು ಶುಕ್ರವಾರ ಇಲ್ಲಿನ ಹೋಲಿ ರಿಡೀಮರ್ ಚರ್ಚ್‌ನ ವತಿಯಿಂದ ನಡೆದ ಕನ್ಯಾಮರಿಯಮ್ಮ ಜಯಂತಿ ಹಾಗೂ ತೆನೆ ಹಬ್ಬದ ಪ್ರಯುಕ್ತ ನಡೆದ ಮೆರವಣಿಗೆಗೆ ಮುನ್ನ ಮಾತನಾಡಿದರು. ಹೋಲಿ ರಿಡೀಮರ್ ಚರ್ಚ್‌ನ ಪ್ರಧಾನ ಧರ್ಮಗುರು ಫಾ| ಬೊನ್ವೆಂಚರ್ ನಜ್ರತ್, ಫಾ| ಅನಿಲ್ ಪ್ರಕಾಶ್ ಡಿ’ಸಿಲ್ವ, ಫಾ| ಮೆಲ್ವಿನ್ ಡಿ’ಸೋಜಾ, ಪಾಲನ ಸಮಿತಿ ಉಪಾಧ್ಯಕ್ಷ ಹೆನ್ರಿ ಲೋಬೋ, ಕಾರ್ಯದರ್ಶಿ ಪೌಲಿನ್ ರೇಗೋ ಮೊದಲಾದವರು ಉಪಸ್ಥಿತರಿದ್ದರು.
ಮಡಂತ್ಯಾರು: ಇಲ್ಲಿಯ ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ತೆನೆಹಬ್ಬ ಆಚರಿಸಲಾಯಿತು.
ಬಂಟ್ವಾಳದ ಲೊರೆಟ್ಟೊ ಮಾತಾ ಚರ್ಚ್‌ನಲ್ಲಿ ತೆನೆ ಹಬ್ಬ ನಡೆಯಿತು.
ಬಂಟ್ವಾಳ: ಲೊರೆಟ್ಟೊ ಮಾತಾ ಚರ್ಚ್‌ನಲ್ಲಿ ಸೆ. 8ರಂದು ಮಾತೆ ಮರಿಯಮ್ಮ ಜನ್ಮದಿನದ ಪ್ರಯುಕ್ತ ತೆನೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದು ಚರ್ಚ್ ಪ್ರಧಾನ ಧರ್ಮಗುರು ಚಾರ್ಲ್ಸ್ ಸಲ್ದಾನಾ, ದಿಲÅಜ್ ಸಿಕ್ವೇರಾ, ಚರ್ಚ್ ಧರ್ಮಗುರು ಎಲಿಯಾಸ್ ಡಿ’ಸೋಜಾರೊಂದಿಗೆ ಭಕ್ತಿಪೂರ್ವ ಸಂಭ್ರಮದಲ್ಲಿ ಕಾರ್ಯಕ್ರಮ ನಡೆಯಿತು. ಕನ್ಯಾಮಾತೆಯ ಮೂರ್ತಿಯನ್ನು ಮೆರ ವಣಿಗೆಯಲ್ಲಿ ತಂದಾಗ ಮಕ್ಕಳು ಹೂಗಳನ್ನು ಅರ್ಪಿಸಿದರು. ಚರ್ಚಿಗೆ ಒಳಪಟ್ಟ ವ್ಯಾಪ್ತಿಯ ಮನೆಗಳವರು ಹೊಂದಿದ ವಾಹನಗಳಿಗೆ ಪೂಜೆಯನ್ನು ಸಲ್ಲಿಸಿ ಆಶೀರ್ವಚಿಸಲಾಯಿತು.
ವಿಟ್ಲ ಶೋಕಮಾತೆಯ ಇಗರ್ಜಿಯಲ್ಲಿ ತೆನೆ ಹಬ್ಬದ ಆಚರಣೆ ನಡೆಯಿತು.