Advertisement

ಮನೆ ಬಾಗಿಲಿಗೆ ಮಾಸಾಶನ

01:29 PM Apr 21, 2020 | Suhan S |

ಗುಳೇದಗುಡ್ಡ: ಪಟ್ಟಣದಲ್ಲಿ ಅಂಚೆ ಇಲಾಖೆ ವತಿಯಿಂದ ಮೊಬೈಲ್‌ ಫೋಸ್ಟ್‌ ಆಫೀಸ್‌ ಆರಂಭಿಸಲಾಗಿದೆ. ವಾಹನದ ಮೂಲಕ ಗುಳೇದಗುಡ್ಡ ಅಂಚೆ ವ್ಯಾಪ್ತಿಯಲ್ಲಿ ಸಂಚರಿಸಿ ವೃದ್ಧಾಪ್ಯ, ವಿಧವಾ, ಅಂಗವಿಕಲರ ಮಾಸಾಶನವನ್ನು ಫಲಾನುಭವಿಗಳ ಮನೆ ಮನೆಗೆ ತಲುಪಿಸುವ ಕಾರ್ಯ ಕೈಗೊಂಡಿದೆ.

Advertisement

ವೃದ್ಧರು, ಅಂಗವಿಕಲರು, ವಿಧವೆಯರು ಮಾಸಾಶನ ಪಡೆಯಲು ಬ್ಯಾಂಕ್‌ಗೆ ಬರುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಬ್ಯಾಂಕ್‌ಗಳಲ್ಲಿನ ಜನದಟ್ಟಣೆ ಕಡಿಮೆಯಾಗಲಿದೆ. ಲಾಕ್‌ಡೌನ್‌ನಿಂದ ಜನರು ಮಾಸಾಶನ ಪಡೆಯಲು ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೊಬೈಲ್‌ ಪೋಸ್ಟ್‌ ಆಫೀಸ್‌ ಮೂಲಕ ಮಾಸಾಶನ ವಿತರಿಸಲಾಗುತ್ತಿದೆ.

ಕೇವಲ ಅಂಚೆ ಖಾತೆಯಲ್ಲದೇ, ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ ಗಳಲ್ಲಿ ಖಾತೆ ಹೊಂದಿರುವ ಫಲಾನುಭವಿಗಳಿಗೆ ಆಧಾರ್‌, ಹೆಬ್ಬಟ್ಟಿನ ಗುರುತು ಪಡೆದುಕೊಂಡು ಆಯಾ ಬ್ಯಾಂಕ್‌ ಖಾತೆಯಿಂದಲೇ ಮಾಸಾಶನ ವಿತರಿಸಲಾಗುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್‌ನ ಎಸ್‌.ಬಿ. ಖಾತೆ ಹೊಂದಿದವರಿಗೂ ಅವರ ಖಾತೆಯಿಂದ ಹಣ ನೀಡಲಾಗುತ್ತಿದೆ. ಎರಡು ದಿನಗಳಲ್ಲಿ 354 ಜನರಿಗೆ ಪಿಂಚಣಿ ವಿತರಿಸಲಾಗಿದೆ. ಪೋಸ್ಟ್‌ ಮಾಸ್ಟರ್‌ ಜಿ. ಕಾಶಿನಾಥ, ಬಸಯ್ಯ ಒಡೆಯರ, ಬಸಯ್ಯ ಸುರುಗಿಮಠ, ಮಹಾವೀರ ಹುಲ್ಲೊಳ್ಳಿ, ಅಶೋಕ ಉಣಚಗಿ, ಗ್ಯಾನಪ್ಪ ಮಾದರ ಅಂಚೆ ಸೇವಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next