Advertisement
ಜಿಲ್ಲೆಯ ಗುಬ್ಬಿ ತಾಲೂಕಿನ ಗೊಲ್ಲರಹಟ್ಟಿಗಳಲ್ಲಿ ಕರ್ನಾಟಕ ರಾಜ್ಯ ಕಾಡುಗೊಲ್ಲರ ಯುವಸೇನೆ ರಾಜ್ಯ ಹಾಗೂ ಜಿಲ್ಲಾ ಘಟಕ, ತುಮಕೂರಿನ ಬ್ರೈಟ್ ಫ್ಯೂಚರ್ ಫೌಂಡೇಷನ್, ವರದಕ್ಷಿಣೆ ವಿರೋಧಿ ವೇದಿಕೆ, ಸುವರ್ಣಯುಗ ಫೌಂಡೇಷನ್, ನಂದ ಗೋಕುಲ ಫೌಂಡೇಷನ್, ಸ್ನೇಹ ಸಮ್ಮಿಲನ ಫೌಂಡೇ ಷನ್ ಸಹಯೋಗದಲ್ಲಿ ಗೊಲ್ಲರಹಟ್ಟಿಗಳಲ್ಲಿ ಇರುವ ಮೌಡ್ಯಗಳು ಹಾಗೂ ಮಹಿಳೆಯರಲ್ಲಿ ಇನ್ನೂ ಇರುವ ಕೆಲವು ಸಂಪ್ರದಾಯಗಳ ನಿವಾರಣೆಗಾಗಿ ಏರ್ಪಡಿಸಿದ್ದ ಅರಿವಿನ ಜಾಥಾ ಕಾರ್ಯಕ್ರಮದಲ್ಲಿ ಗೊಲ್ಲರಹಟ್ಟಿ ಮಹಿಳೆಯರಿಗೆ ಜಾಗೃತಿ ಮೂಡಿಸಿದರು.
Related Articles
Advertisement
ಪುರುಷರು ಸಹಕಾರ ನೀಡಿ: ಜೆಡಿಎಸ್ ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ ಲಕ್ಷ್ಮಮ್ಮ ವೀರಣ್ಣಗೌಡ ಮಾತನಾಡಿ, ಸಂಪ್ರದಾಯಗಳನ್ನು ಬಿಡಲು ಮಹಿಳೆ ಯರು ಮುಂದೆ ಬರುತ್ತಾರೆ. ಇದಕ್ಕೆ ಪುರುಷ ವರ್ಗ ಸಹಕಾರ ನೀಡಬೇಕು. ಯಾವ ದೇವರು ಶಿಕ್ಷೆ ಕೊಡುವುದಿಲ್ಲ. ಎಲ್ಲಾ ಹೆಣ್ಣುಮಕ್ಕಳ ರೀತಿಯಲ್ಲಿಯೇ ಗೊಲ್ಲ ಸಮುದಾಯದ ಸಮುದಾಯದ ಹೆಣ್ಣುಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರುವಂತೆ ನೋಡಿ ಕೊಳ್ಳಬೇಕು. ಗ್ರಾಮಗಳಲ್ಲಿ ರಾಜಕೀಯ ಹೊರತು ಪಡಿಸಿ ಈ ಅರಿವಿನ ಕಾರ್ಯಕ್ರಮಕ್ಕೆ ಎಲ್ಲರೂ ಒಗ್ಗಟ್ಟಾಗಬೇಕು ಎಂದು ಹೇಳಿದರು.
ಜಾಗೃತಿ ಆಂದೋಲನ ಜಾಥಾವು ಹುಚ್ಚರಂಗಪ್ಪನ ಹಟ್ಟಿ, ನೆಲ್ಲೂರುಹಟ್ಟಿ, ದಿಬ್ಬದಹಳ್ಳಿಹಟ್ಟಿ, ಚೆನ್ನಿಹಟ್ಟಿಗಳಲ್ಲಿ ಸಂಚರಿಸಿತು. ಸಮಾಲೋಚನೆಯಲ್ಲಿ ಪ್ರತಿಕ್ರಯಿಸಿ ಮಾತನಾಡಿದ ಕೆಲವು ಮುಖಂಡರು ಈಗಾಗಲೇ ಕೆಲವು ಪದ್ಧ್ದತಿ ಕೈ ಬಿಡಲಾಗಿದೆ. ಉಳಿದಿರುವ ಸಂಪ್ರ ದಾಯಗಳ ಬಗ್ಗೆ ಶೀಘ್ರವೇ ಸಭೆ ಕರೆದು ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಚಿಕ್ಕಣ್ಣಸ್ವಾಮಿ ಕ್ಷೇತ್ರದ ಸಿ.ಶಿವಕುಮಾರಸ್ವಾಮಿ, ತುಮಕೂರು ತಾಪಂ ಸದಸ್ಯ ಎಸ್.ಕೆ.ಜಯಕೃಷ್ಣ, ಕರ್ನಾಟಕ ರಾಜ್ಯ ಕಾಡುಗೊಲ್ಲರ ಯುವಸೇನೆ ಅಧ್ಯಕ್ಷ ಜಿ.ವಿ.ರಮೇಶ್, ಕಾರ್ಮಿಕ ಹೋರಾಟಗಾರ ಗೌಡರಂಗಪ್ಪ, ರಾಜೇಶ್ವರಿ, ಚಿಕ್ಕಪ್ಪಯ್ಯ, ಉಪನ್ಯಾಸಕಿ ಲಾವಣ್ಯಉಮೇಶ್ ಜಿ.ಟಿ. ಗೋವಿಂದರಾಜು, ನೆಟ್ಟಿಕೆರೆ ದೇವಾಲಯದ ಅರ್ಚಕ ಮಹಾಲಿಂಗಪ್ಪ, ಈರೇಗೌಡ, ರಾಜಣ್ಣ, ಬಿ.ಕೆ.ರಾಜು, ಪ್ರಕಾಶ್, ಟಿ.ನಾಗರಾಜು, ಬೇಡಬಾಬು, ಮಹೇಶ್ ಸೇರಿದಂತೆ ಸ್ಥಳೀಯ ಮುಖಂಡರು ಕಾಡುಗೊಲ್ಲ ಯುವಸೇನೆ ಪದಾಧಿಕಾರಿಗಳು ಈ ಆಂದೋಲನದಲ್ಲಿ ಪಾಲ್ಗೊಂಡಿದ್ದರು.