ಲಕ್ನೋ: ಮದುವೆಯಾಗಿ ಏಳೇ ದಿನದಲ್ಲಿ ನವವಧುವೊಬ್ಬರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿರುವುದು ವರದಿಯಾಗಿದೆ.
ಘಟನೆ ಹಿನ್ನೆಲೆ: ಫೆ.3 ರಂದು(ಶುಕ್ರವಾರ) ಯುವತಿಯ ವಿವಾಹ ಉರೈ ಮೂಲದ ವ್ಯಕ್ತಿಯೊಂದಿಗೆ ಆಗಿತ್ತು. ಯುವತಿಯ ಪೋಷಕರು ಅದಾಗಲೇ ಮೃತಪಟ್ಟಿದ್ದು, ಸಹೋದರ ಮುಂದೆ ನಿಂತು ಅದ್ಧೂರಿಯಾಗಿ ವಿವಾಹ ಮಾಡಿಸಿಕೊಟ್ಟಿದ್ದರು. ಫೆ.4 ರಂದು (ಶನಿವಾರ) ಯುವತಿ ಎಲ್ಲಾ ಶಾಸ್ತ್ರದ ಬಳಿಕ ಗಂಡನ ಮನೆಗೆ ಬಂದಿದ್ದಳು.
ಮದುವೆಯ ಮೊದಲ ರಾತ್ರಿ ಪತಿ ಕಾಮೋತ್ತೇಜಕ ಮಾತ್ರೆಗಳನ್ನು(ವರ್ಧನೆ ಮಾತ್ರೆ) ಸೇವಿಸಿ ಪತ್ನಿ ಜೊತೆ ರಾಕ್ಷಸನಂತೆ ಸಂಭೋಗವನ್ನು ನಡೆಸಿದ್ದಾನೆ. ಪರಿಣಾಮ ಪತ್ನಿಯ ಖಾಸಗಿ ಅಂಗಕ್ಕೆ ತೀವ್ರವಾದ ಗಾಯಗಳಾಗಿವೆ.
ಪತ್ನಿ ಕಾನ್ಪುರದಲ್ಲಿ ಮದುವೆ ಸಮಾರಂಭವೊಂದಕ್ಕೆ ತೆರಳಿದ್ದ ವೇಳೆ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪತಿ ಲೈಂಗಿಕ ಉತ್ತೇಜನ ಮಾತ್ರೆಯನ್ನು ಸೇವಿಸಿ ಸಂಭೋಗ ನಡೆಸಿದ ಪರಿಣಾಮ ಮಹಿಳೆಯ ಖಾಸಗಿ ಅಂಗದಲ್ಲಿ ತೀವ್ರತರದ ಗಾಯಗಳಾಗಿದ್ದು, ಇದರಿಂದ ಸೋಂಕು ತಗುಲಿದೆ. ಫೆ.10 ರಂದು ಮಹಿಳೆ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.
ಮಹಿಳೆಯ ಸ್ಥಿತಿ ಹದಗೆಟ್ಟ ನಂತರ ಮಹಿಳೆಯನ್ನು ಸ್ತ್ರೀರೋಗತಜ್ಞರ ಬಳಿಗೆ ಕರೆದೊಯ್ಯಲಾಗಿದ್ದು,ಮಹಿಳೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗುವಷ್ಟು ದೌರ್ಜನ್ಯಕ್ಕೆ ಒಳಗಾಗಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ.
ಪತಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಹಿಳೆಯ ಸಹೋದರ ಪೊಲೀಸರಿಗೆ ಲಿಖಿತ ದೂರನ್ನು ಸಲ್ಲಿಸಿದ್ದಾರೆ. ಆರೋಪಿ ಪತಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿರುವುದಾಗಿ ವರದಿ ತಿಳಿಸಿದೆ.
ವಿಷಯ ತಿಳಿಯುತ್ತಿದ್ದಂತೆ ಪತಿ ಹಾಗೂ ಆತನ ಮನೆಯವರು ಊರು ಬಿಟ್ಟು ಹೋಗಿದ್ದಾರೆ ಎಂದು ವರದಿ ತಿಳಿಸಿದೆ.