Advertisement

“ಮೆಕುನು’ಬೆನ್ನಲ್ಲೇ ರಾಜ್ಯಕ್ಕೆ ಮುಂಗಾರು 

06:00 AM May 31, 2018 | Team Udayavani |

ನವದೆಹಲಿ: ಮೆಕುನು ಚಂಡಮಾರುತದ ಬೆನ್ನಲ್ಲೇ ಮೂರು ದಿನ ಮೊದಲೇ ಕೇರಳಕ್ಕೆ ಆಗಮಿಸಿರುವ ಮುಂಗಾರು, ಬುಧವಾರ ಕರ್ನಾಟಕವನ್ನೂ ಪ್ರವೇಶಿಸಿದೆ. ಈ ಬಗ್ಗೆ ಸ್ವತಃ ಭಾರತೀಯ ಹವಾಮಾನ ಇಲಾಖೆಯೇ ಹೇಳಿಕೆ ನೀಡಿದ್ದು, ಅರಬ್ಬಿ ಸಮುದ್ರದ ಮೂಲಕ ಕೇರಳ, ಕರಾವಳಿ ಕರ್ನಾಟಕ
ಮತ್ತು ರಾಜ್ಯದ ದಕ್ಷಿಣ ಒಳನಾಡಿಗೆ ಪ್ರವೇಶ ಮಾಡಿದೆ. ಹೀಗಾಗಿಯೇ ಬುಧವಾರ ಮಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ.

Advertisement

ಈ ಮಧ್ಯೆ, ಮುಂಗಾರು ಮಳೆಯ ಬಗ್ಗೆ ಮತ್ತೂಮ್ಮೆ ಭಾರತೀಯ ಹವಾಮಾನ ಇಲಾಖೆ ಖುಷಿಯ ಸುದ್ದಿ ನೀಡಿದೆ. ಈ ಬಾರಿ ಮುಂಗಾರು ಕೊರತೆ ಕಾಣಿಸುವುದಿಲ್ಲ. ಸಾಮಾನ್ಯ, ಅಂದರೆ ಶೇ.97 ರಷ್ಟು ಮಳೆಯಾಗಲಿದೆ. ಆದರೆ ದೇಶದ ಪೂರ್ವ ಮತ್ತು ಈಶಾನ್ಯ ಭಾಗಗಳಲ್ಲಿ ಮಾತ್ರ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಹಾ ನಿರ್ದೇಶಕ ಕೆ.ಜೆ. ರಮೇಶ್‌ ಹೇಳಿದ್ದಾರೆ.

2017ರಲ್ಲಿ ಶೇ.97ರಷ್ಟು ಮಳೆಯಾಗಿದ್ದರೆ, ಈ ವರ್ಷ ಅದಕ್ಕಿಂತ ಹೆಚ್ಚು ಮಳೆಯಾಗಲಿದೆ. ಜುಲೈನಲ್ಲಿ ದೀರ್ಘಾವಧಿ ಸರಾಸರಿ ಆಧಾರದಲ್ಲಿ ಶೇ. 101ರಷ್ಟು ಹಾಗೂ ಆಗಸ್ಟ್‌ನಲ್ಲಿ ಶೇ.94ರಷ್ಟು ಮಳೆಯಾಗಲಿದೆ. ಸಾಮಾನ್ಯವಾಗಿ ಶೇ 90-96ರಷ್ಟು ಮಳೆಯಾದರೆ ಸರಾಸರಿಗಿಂತ ಕಡಿಮೆ, ಶೇ.90 ಕ್ಕಿಂತ ಕಡಿಮೆ ಇದ್ದರೆ ಮಳೆ ಕೊರತೆ ಹಾಗೂ ಶೇ.96-104ರಷ್ಟು ಮಳೆಯಾದರೆ ಸಾಮಾನ್ಯ ಎಂದು ಪರಿಗಣಿಸಲಾಗುತ್ತದೆ. ಈ ಹಿಂದೆ ಶೇ. 97ಕ್ಕಿಂತ ಶೇ.5 ಹೆಚ್ಚು ಅಥವಾ ಕಡಿಮೆ ಮಳೆಯಾಗುವ ಸಾಧ್ಯತೆಯೂ ಇದೆ ಎಂದು ಹೇಳಿತ್ತು. ಆದರೆ ಈಗಿನ ವರದಿಯಲ್ಲಿ ಈ ದೋಷ ಅಂದಾಜನ್ನು ಶೇ. 4ಕ್ಕೆ ಇಳಿಸಲಾಗಿದೆ. ಅಂದರೆ ಶೇ. 97ಕ್ಕಿಂತ ಶೇ. 4 ಹೆಚ್ಚು ಅಥವಾ ಕಡಿಮೆ ಮಳೆಯಾಗಬಹುದು ಎಂದು ರಮೇಶ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next