Advertisement

ಮುಂಗಾರಿಗೆ ದಿನಗಣನೆ; ಕರಾವಳಿಯಲ್ಲಿ ಬಹು ನಿರೀಕ್ಷೆ

12:53 AM Jun 03, 2019 | Team Udayavani |

ಮಹಾನಗರ: ಈ ವಾರದಲ್ಲಿ ಕರಾವಳಿಗೆ ಮುಂಗಾರು ಆಗಮಿಸುವ ನಿರೀಕ್ಷೆ ಹೊಂದಲಾಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಕರಾವಳಿಯಲ್ಲಿ ಉತ್ತಮ ಮಳೆ ಸುರಿಯಲಿದೆ ಎಂದು ಈಗಾಗಲೇ ಹವಾಮಾನ ಸಂಸ್ಥೆಗಳು ತಿಳಿಸಿವೆ.

Advertisement

ದಕ್ಷಿಣ ಭಾರತದಲ್ಲಿ ಈ ಬಾರಿ ಮುಂಗಾ ರು ಉತ್ತಮವಾಗಿರಲಿದ್ದು, ಶೇ.93ರಷ್ಟು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಈಗಾಗಲೇ ಮುನ್ಸೂ ಚನೆ ನೀಡಿದೆ. ಅದೇ ರೀತಿ ಕಳೆದ ಕೆಲವು ದಿನಗಳ ಹಿಂದೆ ಸ್ಕೈಮೇಟ್ ಎಂಬ ಖಾಸಗಿ ಹವಾಮಾನ ಸಂಸ್ಥೆ ಕೂಡ ಇದೇ ರೀತಿ ಮಾಹಿತಿ ನೀಡಿದ್ದು, ಶೇ.93ರಷ್ಟು ಮಳೆ ಸುರಿಯಲಿದೆ ಎಂದು ಅಂದಾಜಿಸಿತ್ತು.

ದ.ಕ. ಜಿಲ್ಲೆಯಲ್ಲಿ ಕಳೆದ ವರ್ಷ ಮುಂಗಾ ರು ಉತ್ತಮವಾಗಿತ್ತು. ಜೂನ್‌ 1ರಿಂದ ಸೆಪ್ಟಂಬರ್‌ ಕೊನೆಯವರೆಗೆ ಜಿಲ್ಲೆಯಲ್ಲಿ ಸುರಿಯಬೇಕಾದ 3,441 ಮಿ.ಮೀ. ವಾಡಿಕೆ ಮಳೆಯಲ್ಲಿ 3,551 ಮಿ.ಮೀ. ಮಳೆ ಸುರಿದು ಶೇ.3ರಷ್ಟು ಮಳೆ ಪ್ರಮಾಣ ಹೆಚ್ಚಳವಾಗಿತ್ತು. ಉಡುಪಿ ಜಿಲ್ಲೆಯಲ್ಲಿ ಕೊಂಚ ಕಡಿಮೆ ಮಳೆಯಾಗಿದ್ದು, 4,017 ಮಿ.ಮೀ. ವಾಡಿಕೆ ಮಳೆಯಲ್ಲಿ 3,784 ಮಿ.ಮೀ. ಮಳೆ ಸುರಿದು ಶೇ. 7 ಮಳೆ ಕೊರತೆ ಇತ್ತು.

ಸಾಮಾನ್ಯವಾಗಿ ಮುಂಗಾರು ಋತುವಿ ನಲ್ಲಿ ಕರಾವಳಿ ಪ್ರದೇಶದಲ್ಲಿ 3,019 ಮಿ.ಮೀ. ವಾಡಿಕೆ ಮಳೆಯಾಗಬೇಕು. 2013ರಲ್ಲಿ 3,206 ಮಿ.ಮೀ. ಮಳೆ ಯಾಗಿತ್ತು. ಆದರೆ 2014ರಲ್ಲಿ 2,087 ಮಿ.ಮೀ ಮಳೆಯಾಗಿದ್ದು, 2015ರಲ್ಲಿ 2,241 ಮಿ.ಮೀ ಮಳೆಯಾಗಿದೆ. ಹಾಗೆ ಯೇ 2016ರಲ್ಲಿ 2,403 ಮಿ.ಮೀ ಮಳೆ ಯಾಗಿದ್ದು ಮತ್ತು 2017ರಲ್ಲಿ 2579 ಮಿ.ಮೀ ಮಳೆಯಾಗಿದೆ. ಆದರೆ, ಕಳೆದ ವರ್ಷ ಉತ್ತಮ ಮಳೆಯಾಗಿದ್ದು, 3,104 ಮಿ.ಮೀ. ಮಳೆಯಾಗಿದೆ. ಇದರೊಂದಿಗೆ ಶೇ.3ರಷ್ಟು ಮಳೆ ಹೆಚ್ಚಳವಾಗಿದೆ.

ಜಿಲ್ಲೆಯಲ್ಲಿ ಎನ್‌ಡಿಆರ್‌ಎಫ್‌ ಸಜ್ಜು
ಮುಂಗಾರು ಮುಂಜಾಗ್ರತೆಗೆಂದು ದ.ಕ. ಜಿಲ್ಲೆಯಲ್ಲಿ ರಾಷ್ಟ್ರೀಯ ವಿಪತ್ತುದಳ ಈಗಾಗಲೇ ಸಜ್ಜಾಗಿದೆ. ಆಂಧ್ರ ಪ್ರದೇ ಶದ ಗುಂಟೂರಿನ ಎನ್‌ಡಿಆರ್‌ಎಫ್‌ 10ನೇ ಬೆಟಾಲಿಯನ್‌ನಿಂದ 50 ಮಂದಿ ಈಗಾಗಲೇ ಆಗಮಿಸಿದ್ದು, ಸದ್ಯ ಪಣಂ ಬೂರಿನ ಸಿಐಎಸ್‌ಎಫ್‌ ಘಟಕದಲ್ಲಿ ಕ್ಯಾಂಪ್‌ ಮಾಡಿದೆ. ಮಳೆಗಾಲದಲ್ಲಿ ಸಂಭವಿ ಸಬಹುದಾದ ಪ್ರಾಕೃತಿಕ ವಿಕೋಪ ಸಂದರ್ಭ ರಕ್ಷಣೆಗೆ ಅಗತ್ಯವಿರುವ ಉಪಕರಣ ಈ ತಂಡದಲ್ಲಿದ್ದು, ಪ್ರಥಮ ಚಿಕಿತ್ಸೆ ಮೆಡಿಕಲ್ ಕಿಟ್, 3 ಮಂದಿ ಮುಳುಗು ತಜ್ಞರು, ಬೋಟ್, ಲೈಫ್‌ಜಾಕೆಟ್, ಲೈಫ್‌ಬಾಯ್‌, ಜನರೇಟರ್‌, ಮರ-ಕಾಂಕ್ರಿಟ್ ಕತ್ತರಿಸುವ ಸಾಧನ, ಡ್ರಿಲ್ಲಿಂಗ್‌ ಮೆಷಿನ್‌ ಸೇರಿದಂತೆ ಇನ್ನಿತರ ಉಪಕರಣಗಳಿವೆ. ಜಿಲ್ಲೆಯಲ್ಲಿ ಮೆಸ್ಕಾಂ, ಅರಣ್ಯ ಇಲಾಖೆ ಸಹಿತ ಇನ್ನಿತರ ಇಲಾಖೆಗಳು ಕೂಡ ಮುಂಗಾರು ಮುಂಜಾ ಗ್ರತೆಗೆಂದು ಪ್ರತ್ಯೇಕ ತಂಡವನ್ನು ರಚಿಸಿವೆ.

Advertisement

ಶ್ರೀಲಂಕಾಕ್ಕೆ ಇಂದಿನಿಂದ ಮುಂಗಾರು
ನೈಋತ್ಯ ಮಾರುತಗಳು ಅರಬ್ಬಿ ಸಮುದ್ರದ ದಕ್ಷಿಣ ತುದಿಯಲ್ಲಿದ್ದು, ಸೋಮವಾರ ಅಪರಾಹ್ನ ಶ್ರೀಲಂಕಾ ತಲುಪ ಲಿದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ. ಅರಬ್ಬಿ ಸಮುದ್ರದಲ್ಲಿ ಗಾಳಿಯ ವೇಗ ತೀವ್ರವಾದರೆ ಜೂ. 6ರ ವೇಳೆಗೆ ಮುಂಗಾ ರು ಕೇರಳ ತಲುಪುವ ಸಂಭವ ಇದೆ.

ಕಳೆದ ಬಾರಿಯ ಮಾನ್ಸೂನ್‌ನಲ್ಲಿ ದ.ಕ. ಜಿಲ್ಲೆಯ ಪೈಕಿ ಸುಳ್ಯ ತಾಲೂಕಿನಲ್ಲಿ ಅತೀ ಹೆಚ್ಚು ಮಳೆಯಾಗಿತ್ತು. 3,188 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ, 3,659 ಮಿ.ಮೀ.. ಮಳೆ ಸುರಿದು ಶೇ.15ರಷ್ಟು ಮಳೆ ಪ್ರಮಾಣ ಹೆಚ್ಚಳವಾಗಿತ್ತು. ಉಳಿದಂತೆ ಬಂಟ್ವಾಳ ಮತ್ತು ಮಂಗಳೂರು ತಾಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿತ್ತು.

ಕಳೆದ ಬಾರಿ ಸುಳ್ಯ ತಾ| ಹೆಚ್ಚು ಮಳೆ
ಕಳೆದ ಬಾರಿಯ ಮಾನ್ಸೂನ್‌ನಲ್ಲಿ ದ.ಕ. ಜಿಲ್ಲೆಯ ಪೈಕಿ ಸುಳ್ಯ ತಾಲೂಕಿನಲ್ಲಿ ಅತೀ ಹೆಚ್ಚು ಮಳೆಯಾಗಿತ್ತು. 3,188 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ, 3,659 ಮಿ.ಮೀ.. ಮಳೆ ಸುರಿದು ಶೇ.15ರಷ್ಟು ಮಳೆ ಪ್ರಮಾಣ ಹೆಚ್ಚಳವಾಗಿತ್ತು. ಉಳಿದಂತೆ ಬಂಟ್ವಾಳ ಮತ್ತು ಮಂಗಳೂರು ತಾಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿತ್ತು.

ಜೂ. 6ರ ವೇಳೆಗೆ ಮುಂಗಾರು

ಕಳೆದ ಬಾರಿ ಕೇರಳ ಮತ್ತು ರಾಜ್ಯ ಕರಾವಳಿಗೆ ಒಂದೇ ದಿನ ಮುಂಗಾರು ಅಪ್ಪಳಿಸಿತ್ತು. ಈ ಬಾರಿಯೂ ಅದೇ ರೀತಿ ಪುನರಾವರ್ತನೆಯಾಗುವ ನಿರೀಕ್ಷೆ ಇದೆ. ಇದುವರೆಗಿನ ನೈಋತ್ಯ ಮಾರುತಗಳ ಚಲನೆಯಂತೆ ಈ ಬಾರಿ ಜೂ. 6ರ ವೇಳೆಗೆ ಕೇರಳಕ್ಕೆ ಮುಂಗಾರು ಪ್ರವೇಶಿಸಬಹುದು. ಗಾಳಿಯ ವೇಗವನ್ನು ಹೊಂದಿಕೊಂಡು ಅದೇ ದಿನ ಅಥವಾ ಮರುದಿನ ರಾಜ್ಯ ಕರಾವಳಿಗೂ ಪ್ರವೇಶಿಸುವ ನಿರೀಕ್ಷೆ ಹೊಂದಲಾಗಿದೆ.
– ಸುನಿಲ್ ಗವಾಸ್ಕರ್‌,ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ

•ನವೀನ್‌ ಭಟ್ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next