Advertisement

ಕಲಾಪದೊಂದಿಗೆ 133 ಕೋಟಿ ರೂ. ವ್ಯರ್ಥ!

11:39 PM Jul 31, 2021 | Team Udayavani |

ಹೊಸದಿಲ್ಲಿ: ಮುಂಗಾರು ಅಧಿವೇಶನದ ಕಲಾಪಗಳು ವಿಪಕ್ಷಗಳ ಗದ್ದಲಕ್ಕೆ ಬಲಿಯಾಗುತ್ತಿವೆ. ಜನರ ಸಮಸ್ಯೆಗಳಾಗಲೀ, ಮಸೂದೆಗಳಾಗಲೀ ಚರ್ಚೆಯಾಗದೇ ಕೇವಲ ಗದ್ದಲ, ಹರತಾಳಗಳಲ್ಲೇ ಕಾಲಹರಣವಾಗುತ್ತಿರುವುದರಿಂದ ಕಲಾಪಕ್ಕಾಗಿ ಖರ್ಚು ಮಾಡುತ್ತಿರುವ ಸಾರ್ವಜನಿಕರ ಹಣದಲ್ಲಿ ಈವರೆಗೆ 133 ಕೋಟಿ ರೂ. ವ್ಯರ್ಥವಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

Advertisement

ಜು.19ರಿಂದ ಸಂಸತ್‌ ಅಧಿವೇಶನ ಆರಂಭವಾಗಿದ್ದು, ಆಗಿನಿಂದಲೂ ಸರಕಾರದ ವಿರುದ್ಧ ಪೆಗಾಸಸ್‌ ಗೂಢಚರ್ಯೆ ಪ್ರಕರಣವನ್ನು ಅಸ್ತ್ರವನ್ನಾಗಿಸಿಕೊಂಡು ಟೀಕಾಪ್ರಹಾರ ನಡೆಸುತ್ತಿರುವ ವಿಪಕ್ಷಗಳು, ಈ ಪ್ರಕರಣವನ್ನು ಸುಪ್ರೀಂ ಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಯೊಬ್ಬರಿಂದ ಸ್ವತಂತ್ರ ತನಿಖೆ ನಡೆಸಬೇಕೆಂದು ಒತ್ತಾಯಿಸುತ್ತಿವೆ. ಇದಕ್ಕೆ ಕೇಂದ್ರ ಸರಕಾರ ಒಪ್ಪಿಗೆ ನೀಡಿಲ್ಲ. ಹಾಗಾಗಿ ಎರಡೂ ಸದನಗಳಲ್ಲಿ ವಿಪಕ್ಷಗಳು ಗದ್ದಲ ನಡೆಸುತ್ತಿವೆ. ಜತೆಗೆ ವಿವಾದಿತ ಮೂರು ಕೃಷಿ ಕಾಯ್ದೆ ವಿಚಾರ ಕೂಡ ಉರಿಯುವ ಬೆಂಕಿಗೆ ತುಪ್ಪ ಸುರಿದಿದೆ. ಹಾಗಾಗಿ ಕಲಾಪಗಳು ಸುಗ ಮವಾಗಿ ಸಾಗುತ್ತಿಲ್ಲ.

ವಿಪಕ್ಷಗಳ ಈ ನಡೆಯ ಬಗ್ಗೆ ಇತ್ತೀಚೆಗೆ ನಡೆದ ಬಿಜೆಪಿ ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಪ್ರಧಾನಿ ಮೋದಿ, ಸಂಸತ್ತಿನ ಅಮೂಲ್ಯ ಸಮಯ ಹಾಳು ಮಾಡುತ್ತಿರುವ ವಿಪಕ್ಷಗಳ ನಡವಳಿಕೆಯನ್ನು ಜನರ ಮುಂದಿಡಬೇಕೆಂದು ಬಿಜೆಪಿ ಸಂಸದರಿಗೆ ಸೂಚಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next