Advertisement

Monsoon Rain: ಮುನ್ನೆಚ್ಚರಿಕೆಗೆ ಉಡುಪಿ ಜಿಲ್ಲಾಧಿಕಾರಿ ಸೂಚನೆ

12:51 AM Jul 25, 2024 | Team Udayavani |

ಮಣಿಪಾಲ: ಉಡುಪಿ ಜಿಲ್ಲೆಯಲ್ಲಿ ಇನ್ನಷ್ಟು ದಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ ಮಾನವ ಜೀವ ಹಾನಿ ಹಾಗೂ ಆಸ್ತಿಪಾಸ್ತಿಗಳಿಗೆ ಹಾನಿ ಉಂಟಾಗದಂತೆ ನೋಡಿ ಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರಗಿದ ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಂಗಾರು ಮಳೆ ಆಗಸ್ಟ್‌ ಕೊನೆಯವರೆಗೂ ಇರಲಿದೆ. ನೆರೆ, ಪ್ರವಾಹ ಯಾವಾಗ ಬೇಕಾದರೂ ಉಂಟಾಗುವ ಸಾಧ್ಯತೆಯಿದೆ. ಇವುಗಳ ನಿರ್ವ ಹಣೆಗೆ ಅಧಿಕಾರಿಗಳು ಸನ್ನದ್ಧರಾ ಗಿರ ಬೇಕು. ನೆರೆ ಸೃಷ್ಟಿಯಾಗುವ ಪ್ರದೇ ಶದ ನಿವಾಸಿಗಳನ್ನು ಸ್ಥಳಾಂತರಿಸುವುದು ಸಹಿತ ಅವರಿಗೆ ಅಗತ್ಯ ಸಹಾಯ ನೀಡಬೇಕು ಎಂದರು.

1 ಕೋಟಿ ರೂ. ಹಾನಿ
ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ವಾಡಿಕೆ ಗಿಂತ ಶೇ.50ರಷ್ಟು ಮಳೆ ಹೆಚ್ಚಾದರೆ, ಪ್ರಸ್ತುತ ಈವರೆಗೆ ಶೇ.17ರಷ್ಟು ಹೆಚ್ಚು ಮಳೆಯಾಗಿದೆ. ಕೆಲವು ನದಿಗಳು ಅಪಾಯದ ಮಟ್ಟ ಮೀರಿ ಹರಿದಿವೆ. ಎನ್‌ಡಿಆರ್‌ಎಫ್ ನಿಯಮಾವಳಿ ಅನ್ವಯ ನಷ್ಟ ಪರಿಹಾರ ನೀಡಲು ಮಾಹಿತಿ ಕ್ರೋಢೀಕರಿಸಿ ನೀಡಬೇಕು. ಈವರೆಗೆ 645 ಮನೆಗಳು ಭಾಗಶಃ, 21 ಮನೆಗಳು ಪೂರ್ಣ ಪ್ರಮಾಣದಲ್ಲಿ ಹಾನಿಗಳಾಗಿವೆ. 90,882 ಹೆಕ್ಟೇರ್‌ ತೋಟಗಾರಿಕೆ ಬೆಳೆ ಹಾನಿ, ಶೇ.59.95ರಷ್ಟು ಕೃಷಿ ಹಾನಿ ಸಹಿತ ಅಂದಾಜು 100.37 ಲಕ್ಷ ರೂ. ಗಳಷ್ಟು ಹಾನಿ ಉಂಟಾಗಿವೆ ಎಂದರು.

ಕಾಲುಸಂಕ, ಸಣ್ಣಪುಟ್ಟ ಕಟ್ಟಡಗಳ ದುರಸ್ತಿ ಕಾರ್ಯ, ರಸ್ತೆ ಗುಂಡಿಗಳನ್ನು ಮುಚ್ಚುವುದು ಮತ್ತಿತರ ತಾತ್ಕಾಲಿಕ ಕಾಮಗಾರಿಗಳನ್ನು ಕೈಗೊಳ್ಳಲು ಎನ್‌.ಡಿ.ಆರ್‌.ಎಫ್.ನ ಅನುದಾನವನ್ನು ಬಳಕೆ ಮಾಡಿಕೊಳ್ಳಬಹುದು. ಹಾನಿ ವರದಿ ನೀಡುವ ಮುನ್ನ ಅಭಿಯಂತರರು ಸ್ಥಳ ಪರಿಶೀಲಿಸಿ ನಿಖರ ನಷ್ಟದ ವರದಿ ನೀಡ ಬೇಕು ಎಂದರು.

Advertisement

ಕೆಲವು ಮೀನುಗಾರಿಕೆ ರಸ್ತೆಗಳು ಹಾನಿಗಳಾಗಿವೆ ಎಂಬ ದೂರುಗಳೂ ಇವೆ. ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ, ಅವುಗಳ ನಿರ್ವಹಣೆಗೆ ಪ್ರಸ್ತಾವನೆ ಯನ್ನು ಕೂಡಲೇ ನೀಡಲು ಸೂಚಿಸಿದರು.

ಸಿಎಂ ಸಭೆ: ಮುಂದಿನ ಎರಡು- ಮೂರು ದಿನ  ಗಳಲ್ಲಿ ಮುಖ್ಯಮಂತ್ರಿಗಳು ಕಡ ಲ್ಕೊರೆತ ಸಹಿತ ಮಳೆ ಹಾನಿ ಕುರಿತು ಪ್ರತ್ಯೇಕ ಸಭೆ ನಡೆಸಲಿದ್ದಾರೆ. ಸಭೆಗೆ ಮಾಹಿತಿ ನೀಡಲು ಹಾಗೂ ಅನುದಾನ ಪಡೆ ಯಲು ಅನುಕೂಲವಾಗುವಂತೆ ಜಿಲ್ಲೆ ಯಲ್ಲಿ ಮಳೆಯಿಂದ ಆಗಿರುವ ನಷ್ಟ ಗಳ ವಿವರವನ್ನು ಶೀಘ್ರದಲ್ಲೇ ಛಾಯಾ  ಚಿತ್ರದೊಂದಿಗೆ ಇಲಾಖಾವಾರು ನೀಡ ಬೇಕೆಂದು ಸೂಚನೆ ನೀಡಿದರು.

ಮಳೆಯಿಂದ ವಿದ್ಯುತ್‌ ಕಂಬ, ತಂತಿ ಗಳು ಬಿದ್ದು ಜೀವ ಹಾನಿ ಉಂಟಾಗುವ ಸಂಭ ವವಿ ರುವುದರಿಂದ ಹಳೆಯ ತಂತಿಗಳನ್ನು ಬದಲಾಯಿಸಲು ಮೆಸ್ಕಾಂ ಕ್ರಮ ಕೈಗೊಳ್ಳಬೇಕು. ಈಗಾಗಲೇ ಅಪಾಯಕಾರಿ ರಸ್ತೆ ಬದಿಗಳ ಅನೇಕ ಮರಗಳನ್ನು ತೆರವುಗೊಳಿಸಲಾಗಿದೆ. ಕೆಲವು ಖಾಸಗಿ ಜಾಗದಲ್ಲೂ ಅಪಾಯ ಕಾರಿ ಮರಗಳಿವೆ ಎಂಬ ದೂರುಗಳು ಕಂಟ್ರೋಲ್‌ ರೂಂಗೆ ಬರುತ್ತಿವೆ. ಇವುಗಳ ತೆರವಿಗೆ ಕ್ರಮ ವಹಿಸಬೇಕು. ಅದರ ಖರ್ಚನ್ನು ಸ್ಥಳದ ಮಾಲಕರಿಂದ ವಸೂಲಿ ಮಾಡಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್‌., ಕರಾವಳಿ ಕಾವಲು ಪಡೆಯ ಎಸ್ಪಿ ಮಿಥುನ್‌ ಎಚ್‌.ಎನ್‌., ಡಿಎಫ್ಒ ಗಣಪತಿ, ಪೌರಾಯುಕ್ತ ರಾಯಪ್ಪ, ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರು ಉಪಸ್ಥಿತರಿದ್ದರು.

ಡೆಂಗ್ಯೂ ಎಚ್ಚರ
ಡೆಂಗ್ಯೂ ಪ್ರಕರಣಗಳು ಮಳೆಗಾಲದಲ್ಲಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಎಲ್ಲ ಇಲಾಖೆಯ ಅಧಿಕಾರಿಗಳು ಎಚ್ಚರದಿಂದ ಇದ್ದು, ಮಳೆ ನೀರು ಎಲ್ಲೆಂದರಲ್ಲಿ ನಿಂತುಕೊಳ್ಳದಂತೆ ನೋಡಿಕೊಳ್ಳಬೇಕು. ಕಲ್ಲುಕೋರೆಗಳಲ್ಲೂ ನೀರು ನಿಲ್ಲದಂತೆ ಎಚ್ಚರ ವಹಿಸಲು ಮಾಲಕರಿಗೆ ಸೂಚನೆ ನೀಡಬೇಕು. ಫಾಗಿಂಗ್‌ ಹಾಗೂ ಕೆಮಿಕಲ್‌ ಸ್ಪ್ರೆ ಮಾಡುವಂತೆ ತಿಳಿಸಬೇಕು. 5 ಮಲೇರಿಯಾ ಪ್ರಕರಣಗಳು ಕಂಡುಬಂದಿವೆ. ಈ ಬಗ್ಗೆಯೂ ಜಾಗೃತಿ ವಹಿಸಬೇಕು ಎಂಬ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next