Advertisement

ಇನ್ನೂ ನಡೆದಿಲ್ಲ ಮಳೆಗಾಲ ಪೂರ್ವಭಾವಿ ಕಾಮಗಾರಿ!

08:33 AM Jun 06, 2020 | mahesh |

ಉಪ್ಪಿನಂಗಡಿ: ಮಳೆಗಾಲ ಆರಂಭವಾಗಿದೆ. ಇನ್ನೊಂದೆಡೆ ಗ್ರಾ.ಪಂ. ಚುನಾಯಿತ ಸದಸ್ಯರ ಅಧಿಕಾರವಧಿಯು ಕೆಲವೇ ದಿನಗಳಲ್ಲಿ ಮುಗಿಯಲಿವೆ. ಆದರೆ ಮಳೆಗಾಲ ಪೂರ್ವಭಾವಿಯಾಗಿ ಗ್ರಾ.ಪಂ. ವ್ಯಾಪ್ತಿಗಳಲ್ಲಿ ಅಗತ್ಯವಾಗಿ ನಡೆಯಬೇಕಾದ ಚರಂಡಿ ಕಾಮಗಾರಿ, ನಿರ್ವಹಣೆ ಕೆಲಸಗಳು ಹೆಚ್ಚಿನ ಗ್ರಾ.ಪಂ. ವ್ಯಾಪ್ತಿಗಳಲ್ಲಿ ಮಾತ್ರ ಇನ್ನೂ ಆಗಿಲ್ಲ. ಇದ್ದ ಚರಂಡಿಗಳೂ ಕಸಕಡ್ಡಿ, ಮಣ್ಣು, ತ್ಯಾಜ್ಯ ತುಂಬಿ ಹೋಗಿದ್ದು, ಗಿಡಗಂಟಿ ಗಳು ಆವರಿಸಿ ನೀರಿನ ಹರಿವಿಗೆ ತಡೆ ಯೊಡ್ಡುತ್ತಿದೆ. ಕೆಲವೆಡೆ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಅಲ್ಲದೆ ಇನ್ನು ಕೆಲವೆಡೆ ಮಳೆನೀರು ನಿಂತು ಸಾಂಕ್ರಾಮಿಕ ರೋಗಗಳನ್ನು ಹರಡುವ ಸೊಳ್ಳೆ ಉತ್ಪಾದನ ಕೇಂದ್ರಗಳು ನಿರ್ಮಾಣವಾಗುತ್ತಿವೆ. ಕೆಲವು ಗ್ರಾ.ಪಂ.ಗಳು ಕೇವಲ ಪೇಟೆಯ ಚರಂಡಿಯ ನಿರ್ವಹಣೆಗಷ್ಟೇ ಒತ್ತು ನೀಡುತ್ತವೆ. ಆದರೆ ಗ್ರಾಮಾಂತರ ಪ್ರದೇಶಗಳಲ್ಲಿ ಚರಂಡಿ ನಿರ್ವಹಣೆ ಮಾಡುವುದೇ ಇಲ್ಲ. ಇನ್ನು ಕೆಲವೆಡೆ ಕ್ರಿಯಾ ಯೋಜನೆ ತಯಾರಿಸಿ, ಅದಕ್ಕೆ ಅನುದಾನ ಬಿಡುಗಡೆಗೊಂಡು ಕೆಲಸ ಆರಂಭಿಸುವಾಗ ಮಳೆಗಾಲ ಮುಗಿದು ಹೋಗಿರುತ್ತದೆ.

Advertisement

ಇಕ್ಕಟ್ಟಾದ ರಸ್ತೆ
ಉಪ್ಪಿನಂಗಡಿ ಗ್ರಾ.ಪಂ. ವ್ಯಾಪ್ತಿಯ ವಾರ್ಡ್‌ ನಂಬರ್‌ 5 ರಲ್ಲಿ ರುವ ಪೆರಿಯಡ್ಕ – ಪಂಚೇರು ರಸ್ತೆ ಆರಂಭ ದಲ್ಲೇ ಇಕ್ಕಟ್ಟಾಗಿದ್ದು, ಎದುರಿನಿಂದ ವಾಹನ ವೊಂದು ಬಂದರೆ ದ್ವಿಚಕ್ರ ಸವಾರ ನಿಗೂ ಹೋಗಲು ಸ್ಥಳವಿಲ್ಲ.  ಒಂದು ಕಡೆ ಚರಂಡಿ ಇದ್ದರೆ ಮತ್ತೂಂದು ಕಡೆ ಚರಂಡಿಯೇ ಇಲ್ಲ. ಇನ್ನು ಇದ್ದ ಚರಂಡಿಯಲ್ಲಿಯೂ ಗಿಡಗಂಟಿಗಳು, ಕಸಕಡ್ಡಿಗಳು ತುಂಬಿ ಹೋಗಿದ್ದು, ನೀರು ಹರಿಯದೇ ಅಲ್ಲೇ ನಿಲ್ಲುವಂತಾಗಿದೆ. ಇನ್ನು ಕೆಲವೆಡೆ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ಇದ್ದರೆ, ಕೆಲವು ಕಡೆ ಚರಂಡಿಯೇ ಇಲ್ಲ. ಇದ್ದ ಚರಂಡಿ ಯಲ್ಲಿಯೂ ಗಿಡ – ಗಂಟಿಗಳು ಬೆಳೆದು ರಸ್ತೆಯನ್ನೇ ಆವರಿಸಿದೆ.

ರಸ್ತೆಯಲ್ಲೇ ಹರಿಯುವ ನೀರು
ನೀರು ರಸ್ತೆಯಲ್ಲೇ ಹರಿದು ಹೋಗುವಂತಾಗಿದೆ. ಇನ್ನೊಂದೆಡೆ ಪೊದೆಗಳು ಬೆಳೆದು ಹಾವು ಸಹಿತ ವಿಷ ಜಂತುಗಳ ಭೀತಿಯೂ ಎದುರಾಗಿದೆ. ಇಲ್ಲಿ ಚರಂಡಿಯನ್ನು ಎರಡು ವರ್ಷಗಳ ಹಿಂದೆ ಸ್ವತ್ಛಗೊಳಿಸಲಾಗಿತ್ತು. ಕಳೆದ ಮಳೆಗಾಲದಲ್ಲಿ ಇಲ್ಲಿ ಚರಂಡಿ ನಿರ್ವಹಣೆಯೇ ನಡೆದಿರಲಿಲ್ಲ. ಈ ಬಾರಿಯೂ ಹಾಗೇ ಇದೆ.

 ಶೀಘ್ರ ಕೆಲಸ ಆರಂಭ
ಈಗಾಗಲೇ ಪಿಡಿಒ ನಿಧಿ 2ರಲ್ಲಿ ತುರ್ತು ಕಾಮಗಾರಿಯನ್ನು ಹಮ್ಮಿ ಕೊಳ್ಳಲು ವಾರ್ಡ್‌ ಸದಸ್ಯರಿಗೆ ಅನುದಾನ ಬಿಡುಗಡೆಗೊಳಿಸುವ ಮೂಲಕ ಕಾಮಗಾರಿ ಮುಂದಿನ ಮೂರು ದಿನಗಳಲ್ಲಿ ಆರಂಭಿಸುವಂತೆ ತಿಳಿಸಲಾಗಿದೆ.
– ಅಬ್ದುಲ್‌ ರಹಿಮಾನ್‌, ಅಧ್ಯಕ್ಷ, ಗ್ರಾ.ಪಂ. ಉಪ್ಪಿನಂಗಡಿ

Advertisement

Udayavani is now on Telegram. Click here to join our channel and stay updated with the latest news.

Next