Advertisement
ಗದಗ ತಾಲೂಕಿನಲ್ಲಿ ಜ.1ರಿಂದ ಜು.12ರವರೆಗೆ ಸರಾಸರಿ 236 ಮಿಮೀ ವಾಡಿಕೆ ಮಳೆ ಪೈಕಿ 178 ಮಿಮೀ ಅಂದರೆ 58 ಮಿಮೀ ಮಳೆ ಕಡಿಮೆಯಾಗಿದೆ. ಆದರೆ ಜುಲೈ ತಿಂಗಳಲ್ಲಿ ವಾಡಿಕೆ ಸರಾಸರಿ ಮಳೆ 27 ಮಿಮೀ ಪೈಕಿ 37 ಮಿಮೀ ಮಳೆ ಸುರಿದಿದೆ.
Related Articles
Advertisement
ಮುಂಡರಗಿ ಹೋಬಳಿಯಲ್ಲಿ ಜ.1ರಿಂದ ಜುಲೈ 12ರವರೆಗೆ ಸರಾಸರಿ 202 ಮಿಮೀ ವಾಡಿಕೆ ಮಳೆ ಪೈಕಿ 123 ಮಿಮೀ ಅಂದರೆ 79 ಮಿಮೀ ಮಳೆ ಕಡಿಮೆಯಾಗಿದೆ. ಆದರೆ ಜುಲೈನಲ್ಲಿ 12ರವರೆಗೆ ವಾಡಿಕೆ ಸರಾಸರಿ ಮಳೆ 25 ಮಿಮೀ ಪೈಕಿ 36 ಮಿಮೀ ಮಳೆ ಆಗಿದೆ.
ಡಂಬಳ ಹೋಬಳಿಯಲ್ಲಿ ಜನವರಿ 1ರಿಂದ ಜುಲೈ 12 ರವರೆಗೆ ಸರಾಸರಿ 192 ಮಿಮೀ ವಾಡಿಕೆ ಮಳೆ ಪೈಕಿ 168 ಮಿಮೀ ಅಂದರೆ 24 ಮಿಮೀ ಮಳೆ ಕಡಿಮೆಯಾಗಿದೆ. ಆದರೆ ಜುಲೈನಲ್ಲಿ 2ರವರೆಗೆ ವಾಡಿಕೆ ಸರಾಸರಿ ಮಳೆ 21 ಮಿಮೀ ಪೈಕಿ 35 ಮಿಮೀ ಮಳೆ ಆಗಿದೆ.
ನರಗುಂದ ತಾಲೂಕಿನಲ್ಲಿ ಜನವರಿ 1 ರಿಂದ ಜುಲೈ 12 ರವರೆಗೆ ಸರಾಸರಿ 233 ಮಿಮೀ ವಾಡಿಕೆ ಮಳೆ ಪೈಕಿ 148 ಮಿಮೀ ಅಂದರೆ 85 ಮಿಮೀ ಮಳೆ ಕಡಿಮೆಯಾಗಿದೆ. ಜುಲೈ ತಿಂಗಳಲ್ಲಿ ವಾಡಿಕೆ ಸರಾಸರಿ ಮಳೆ 33 ಮಿಮೀ ಪೈಕಿ 23 ಮಿಮೀ ಮಾತ್ರ ಮಳೆ ಆಗಿದೆ.
ನರಗುಂದ ಹೋಬಳಿಯಲ್ಲಿ ಜನವರಿ 1 ರಿಂದ ಜುಲೈ 12ರವರೆಗೆ ಸರಾಸರಿ 208 ಮಿಮೀ ವಾಡಿಕೆ ಮಳೆ ಪೈಕಿ 155 ಮಿಮೀ ಅಂದರೆ 53 ಮಿಮೀ ಮಳೆ ಕಡಿಮೆಯಾಗಿದೆ. ಜುಲೈನಲ್ಲಿ 12ರವರೆಗೆ ವಾಡಿಕೆ ಸರಾಸರಿಯಾಗಿ 25 ಮಿಮೀ ಮಳೆ ಆಗಿದೆ.
ಕೊಣ್ಣೂರು ಹೋಬಳಿಯಲ್ಲಿ ಜ.1ರಿಂದ ಜು.12ರವರೆಗೆ ಸರಾಸರಿ 269 ಮಿಮೀ ವಾಡಿಕೆ ಮಳೆ ಪೈಕಿ 139 ಮಿಮೀ ಪೈಕಿ 130 ಮಿಮೀ ಮಳೆ ಕಡಿಮೆಯಾಗಿದೆ. ಜುಲೈ ಮಾಹೆಯಲ್ಲಿ ಸರಾಸರಿ ಮಳೆ 45 ಮಿ.ಮೀ ಪೈಕಿ 18 ಮಿಮೀ ಮಾತ್ರ ಮಳೆ ಆಗಿದೆ.
ರೋಣ ತಾಲೂಕಿನಲ್ಲಿ ಜ.1ರಿಂದ ಜುಲೈ 12ರವರೆಗೆ ಸರಾಸರಿ 209 ಮಿಮೀ ವಾಡಿಕೆ ಮಳೆ ಪೈಕಿ 171 ಮಿಮೀ ಅಂದರೆ 38 ಮಿಮೀ ಮಳೆ ಕಡಿಮೆಯಾಗಿದೆ. ಆದರೆ ಜುಲೈನಲ್ಲಿ 12ರವರೆಗೆ ಸರಾಸರಿ ಮಳೆ 20 ಮಿಮೀ ಪೈಕಿ 31 ಮಿಮೀ ಮಳೆ ಆಗಿದೆ.
ರೋಣ ಹೋಬಳಿಯಲ್ಲಿ ಜನವರಿ 1ರಿಂದ ಜುಲೈ 12ರವರೆಗೆ ಸರಾಸರಿ 207 ಮಿಮೀ ವಾಡಿಕೆ ಮಳೆ ಪೈಕಿ 181 ಮಿಮೀ ಅಂದರೆ 26 ಮಿಮೀ ಮಳೆ ಕಡಿಮೆಯಾಗಿದೆ. ಆದರೆ ಜುಲೈನಲ್ಲಿ 12ರವರೆಗೆ ವಾಡಿಕೆ ಸರಾಸರಿ ಮಳೆ 19 ಮಿಮೀ ಪೈಕಿ 33 ಮಿಮೀ ಮಳೆ ಆಗಿದೆ.
ಹೊಳೆಆಲೂರು ಹೋಬಳಿಯಲ್ಲಿ ಜನವರಿ 1 ರಿಂದ ಜುಲೈ 12 ರವರೆಗೆ ಸರಾಸರಿ 212 ಮಿಮೀ ವಾಡಿಕೆ ಮಳೆ ಪೈಕಿ 158 ಮಿಮೀ ಅಂದರೆ 54 ಮಿಮೀ ಮಳೆ ಕಡಿಮೆಯಾಗಿದೆ. ಆದರೆ ಜುಲೈನಲ್ಲಿ 12ರವರೆಗೆ ವಾಡಿಕೆ ಸರಾಸರಿ ಮಳೆ 22 ಮಿಮೀ ಪೈಕಿ 36 ಮಿಮೀ ಮಳೆ ಆಗಿದೆ.
ನರೇಗಲ್ಲ ಹೋಬಳಿಯಲ್ಲಿ ಜ.1ರಿಂದ ಜು.12ರವರೆಗೆ ಸರಾಸರಿ 212 ಮಿಮೀ ವಾಡಿಕೆ ಮಳೆ ಪೈಕಿ 165 ಮಿಮೀ ಅಂದರೆ 47ಮಿಮೀ ಮಳೆ ಕಡಿಮೆಯಾಗಿದೆ. ಆದರೆ ಜುಲೈನಲ್ಲಿ 12ರವರೆಗೆ ವಾಡಿಕೆ ಸರಾಸರಿ ಮಳೆ 18 ಮಿಮೀ ಪೈಕಿ 20 ಮಿಮೀ ಮಳೆ ಆಗಿದೆ.
ಶಿರಹಟ್ಟಿ ತಾಲೂಕಿನಲ್ಲಿ ಜ.1ರಿಂದ ಜು.12ರವರೆಗೆ ಸರಾಸರಿ 254 ಮಿಮೀ ವಾಡಿಕೆ ಮಳೆ ಪೈಕಿ 207 ಮಿಮೀ ಅಂದರೆ 47ಮಿಮೀ ಮಳೆ ಕಡಿಮೆಯಾಗಿದೆ. ಆದರೆ ಜು.12ರವರೆಗೆ ವಾಡಿಕೆ ಸರಾಸರಿ ಮಳೆ 36 ಮಿಮೀ ಪೈಕಿ 63 ಮಿಮೀ ಮಳೆ ಆಗಿದೆ.
ಶಿರಹಟ್ಟಿ ಹೋಬಳಿಯಲ್ಲಿ ಜ.1ರಿಂದ ಜು.12ರವರೆಗೆ ಸರಾಸರಿ 241 ಮಿ.ಮೀ ವಾಡಿಕೆ ಮಳೆ ಪೈಕಿ 182 ಮಿಮೀ ಅಂದರೆ 59 ಮಿಮೀ ಮಳೆ ಕಡಿಮೆಯಾಗಿದೆ. ಆದರೆ ಜುಲೈನಲ್ಲಿ 12ರವರೆಗೆ ವಾಡಿಕೆ ಸರಾಸರಿ ಮಳೆ 31 ಮಿಮೀ ಪೈಕಿ 58 ಮಿಮೀ ಮಳೆ ಆಗಿದೆ.
ಲಕ್ಷ್ಮೇಶ್ವರ ಹೋಬಳಿಯಲ್ಲಿ ಜ.1ರಿಂದ ಜುಲೈ 12ರವರೆಗೆ ಸರಾಸರಿ 267 ಮಿಮೀ ವಾಡಿಕೆ ಮಳೆ ಪೈಕಿ 233 ಮಿಮೀ ಅಂದರೆ 34ಮಿಮೀ ಮಳೆ ಕಡಿಮೆಯಾಗಿದೆ. ಆದರೆ ಜುಲೈನಲ್ಲಿ 12ರವರೆಗೆ ವಾಡಿಕೆ ಸರಾಸರಿ ಮಳೆ 40 ಮಿಮೀ ಪೈಕಿ 67 ಮಿಮೀ ಮಳೆ ಆಗಿದೆ.
ಸತತ ಬರಗಾಲದಿಂದ ಕಂಗೆಟ್ಟಿರುವ ಜಿಲ್ಲೆಯ ರೈತಾಪಿ ಜನರಿಗೆ ಈ ಬಾರಿ ಮುಂಗಾರು ಹೊಸ ಭರವಸೆ ಮೂಡಿಸಿದೆ. ಮುಂಗಾರು ಆರಂಭದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಕೈಕೊಟ್ಟಿದ್ದರಿಂದ ಶೇ.30 ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಹೆಸರು ಬಿತ್ತನೆಯಾಗಿದೆ. ಇನ್ನು ಜುಲೈ ಆರಂಭದಿಂದ ಮುಂಗಾರು ಬಿರುಸುಗೊಳ್ಳುತ್ತಿರುವುದರಿಂದ ಈರುಳ್ಳಿ, ಶೇಂಗಾ, ಹತ್ತಿ ಸೇರಿದಂತೆ ಇನ್ನಿತರೆ ವಾಣಿಜ್ಯ ಬೆಳೆಗಳು ಕೈಹಿಡಿಯುವ ಸಾಧ್ಯತೆಗಳಿವೆ ಎಂದು ರೈತರ ಅಭಿಪ್ರಾಯವಾಗಿದೆ.