Advertisement

ಉತ್ತರ ಭಾರತದಲ್ಲಿ ಮುಂಗಾರು ಪ್ರಭಾವ ಇನ್ನೂ ಮುಂದುವರಿಕೆ

09:42 AM Sep 16, 2019 | Team Udayavani |

ನವದೆಹಲಿ: ಉತ್ತರ ಭಾರತದಲ್ಲಿ ಇನ್ನೂ ಮುಂಗಾರು ಪ್ರಭಾವ ಕಡಿಮೆಯಾಗುವ ಲಕ್ಷಣ ಗೋಚರಿಸುತ್ತಿಲ್ಲ. ಇನ್ನೂ ಕೆಲವು ದಿನಗಳವರೆಗೆ ರಾಜಸ್ಥಾನ ಸೇರಿದಂತೆ ಗುಜರಾತ್‌ ಹಾಗೂ ಪಂಜಾಬ್‌ನಲ್ಲಿ ಮುಂಗಾರು ಮಳೆ ಮಾರುತಗಳನ್ನು ತರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Advertisement

ಸಾಮಾನ್ಯವಾಗಿ ಸೆ. 1 ರಿಂದ ರಾಜಸ್ಥಾನದಲ್ಲಿ ಮುಂಗಾರು ಮುಕ್ತಾಯ ಪ್ರಾರಂಭವಾಗುತ್ತಿತ್ತು. ಸೆ. 15 ರ ವೇಳೆಗೆ ಮುಂಗಾರು ಮಳೆ ಸಂಪೂರ್ಣವಾಗಿ ಮುಗಿಯುತ್ತಿತ್ತು. ಆದರೆ ಈ ವರ್ಷ ಇನ್ನೂ ಮುಂಗಾರು ಮಳೆ ಅಂತ್ಯವಾಗುವ ಲಕ್ಷಣ ಕಾಣುತ್ತಿಲ್ಲ. ಮಧ್ಯಪ್ರದೇಶದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದರಿಂದಾಗಿ ಈ ಭಾಗದಲ್ಲಿ ವಾತಾವರಣದಲ್ಲಿ ತೇವಾಂಶ ಹೆಚ್ಚುತ್ತಿದೆ. ಇನ್ನೂ ಐದು ದಿನಗಳವರೆಗೆ ರಾಜಸ್ಥಾನ ಸೇರಿದಂತೆ ಹಲವೆಡೆ ಮಳೆಯಾಗಲಿದೆ.

ಪ್ರವಾಹಕ್ಕೆ ಸಿಲುಕಿದ 350 ವಿದ್ಯಾರ್ಥಿಗಳು: ರಾಜಸ್ಥಾನದ ಚಿತ್ತೋರ್‌ಗಢದ ಶಾಲೆಯೊಂದರಲ್ಲಿ ಶನಿವಾರದಿಂದ 350 ಮಕ್ಕಳು ಮತ್ತು 50 ಶಿಕ್ಷಕರು ಸಿಲುಕಿಕೊಂಡಿದ್ದಾರೆ. ಈ ಭಾಗದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ರಸ್ತೆ ಸಂಪರ್ಕ ಕಡಿದುಹೋಗಿದೆ. ಹೀಗಾಗಿ ಮಕ್ಕಳಿಗೆ ಆಹಾರ ಮತ್ತು ತುರ್ತು ಸೌಲಭ್ಯವನ್ನು ಸ್ಥಳೀಯರು ಒದಗಿಸುತ್ತಿದ್ದಾರೆ. ರಾಜಸ್ಥಾನದ ಪೂರ್ವ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next