Advertisement

Monsoon: ದೇಶದಲ್ಲಿ ಮುಂಗಾರು ವಾಪಸಾತಿ ಆರಂಭ: ಈ ಬಾರಿ ಶೇ.5 ಹೆಚ್ಚುವರಿ ಮಳೆ

10:09 PM Sep 24, 2024 | Team Udayavani |

ನವದೆಹಲಿ: ನೈಋತ್ಯ ಮುಂಗಾರು ಮಾರುತಗಳ ಹಿಮ್ಮುಖ ಚಲನೆ ಆರಂಭವಾಗಿದ್ದು, ದೇಶದ ಹಲವೆಡೆ ನಿಗದಿತಕ್ಕಿಂತ ಹೆಚ್ಚು ಮಳೆಯಾಗಿದ್ದರೂ, 5 ಉಪ ವಿಭಾಗಗಳಲ್ಲಿ ಮಳೆ ಕೊರತೆ ಉಂಟಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಒಟ್ಟಾರೆ ದೇಶಾದ್ಯಂತ ಶೇ.5ರಷ್ಟು ಹೆಚ್ಚುವರಿ ಮಳೆಯಾಗಿದೆ ಎಂದೂ ಹೇಳಿದೆ.

Advertisement

ಪಶ್ಚಿಮ ರಾಜಸ್ಥಾನ ಮತ್ತು ಕಚ್‌ ಪ್ರದೇಶದಲ್ಲಿ ಮುಂಗಾರು ನಿರ್ಗಮನ ಆರಂಭವಾಗಿದೆ ಎಂದೂ ಇಲಾಖೆ ಹೇಳಿದೆ. ಸಾಮಾನ್ಯವಾಗಿ ಸೆ.17ಕ್ಕೆ ಈ ಪ್ರಕ್ರಿಯೆ ಆರಂಭವಾಗುತ್ತದೆ. ಆದರೆ ಕಳೆದ ಕೆಲವು ವರ್ಷಗಳಿಂದ ಈ ಪ್ರಕ್ರಿಯೆ ವಿಳಂಬವಾಗುತ್ತಿದೆ.

ಈ ಬಾರಿ ಜಮ್ಮು ಕಾಶ್ಮೀರ (-26), ಹಿಮಾಚಲ (-20), ಅರುಣಾಚಲ (-30), ಬಿಹಾರ (-28) ಮತ್ತು ಪಂಜಾಬ್‌ನಲ್ಲಿ (-27) ಮಳೆ ಕೊರತೆಯಾಗಿದೆ. ಹಾಗೆಯೇ 9 ಉಪವಿಭಾಗಗಳಲ್ಲಿ ಸಾಮಾನ್ಯಕ್ಕಿಂತ ಗರಿಷ್ಠ ಮಳೆಯಾಗಿದೆ. ಅವುಗಳೆಂದರೆ ರಾಜಸ್ಥಾನ (74%), ಗುಜರಾತ್‌ (68%), ಮಹಾರಾಷ್ಟ್ರ, ತಮಿಳುನಾಡು ಮತ್ತು ಆಂಧ್ರಪ್ರದೇಶ ಎಂದು ಇಲಾಖೆ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next