Advertisement

ಮುಂಗಾರು ವಿಳಂಬ: ಕೃಷಿ ಚಟುವಟಿಕೆಗೆ ಹಿನ್ನಡೆ

09:30 AM May 27, 2019 | sudhir |

ಕೋಟ: ಮುಂಗಾರು ಕೃಷಿ ಚಟುವಟಿಕೆ ಆರಂಭಿಸುವ ಸಲುವಾಗಿ ರೈತ ಸಿದ್ದಗೊಂಡು ಮಳೆಗಾಗಿ ಕಾತರದಿಂದ ಕಾಯುತ್ತಿದ್ದಾನೆ. ಆದರೆ ಮಳೆಯ ಆಗಮನ ವಿಳಂಬವಾಗುತ್ತಿದ್ದು ಬಿತ್ತನೆ ಕಾರ್ಯ ನಡೆಸಲಾಗದೆ ಕಂಗಾಲಾಗಿದ್ದಾನೆ.

Advertisement

ಬಿತ್ತನೆ ಬೀಜ, ಗೊಬ್ಬರ ಸಂಗ್ರಹ

ರೈತರು ಈಗಾಗಲೇ ಬಿತ್ತನೆ ಬೀಜ, ಗೊಬ್ಬರಗಳನ್ನು ಕೃಷಿ ಇಲಾಖೆ ಹಾಗೂ ಖಾಸಗಿಯಾಗಿ ಖರೀದಿಸಿ ಸಂಗ್ರಹಿಸಿಟ್ಟು ಕೊಂಡಿದ್ದಾರೆ ಮತ್ತು ಸಾವಯವ ಗೊಬ್ಬರವನ್ನು ಗದ್ದೆಗಳಲ್ಲಿ ಸಂಗ್ರಹಿಸಿ ಉಳುಮೆಗೆ ಭೂಮಿ ಸಿದ್ಧಪಡಿಸಿಕೊಡಿದ್ದಾರೆ. ಆದರೆ ಮಳೆ ಕೊರತೆಯಿಂದ ಉಳುಮೆ, ಬೀಜ ಬಿತ್ತನೆ ಸಾಧ್ಯವಾಗುತ್ತಿಲ್ಲ.

ಬರದ ಛಾಯೆ

ಮಳೆ ವಿಳಂಬವಾಗಿ ನೀರಿನ ಕೊರತೆ ಹಾಗೂ ಬಿಸಿಲಿನ ಪರಿಣಾಮದಿಂದ ಕೃಷಿ ಜಮೀನುಗಳು ಒಣಗಿ ಬಾಯ್ದೆರೆದಿದೆ. ಪ್ರತಿ ವರ್ಷ ಈ ಅವಧಿಗೆ ಒಂದೆರಡು ಮಳೆಯಾಗಿ ಕೃಷಿಭೂಮಿ ಹಚ್ಚ ಹಸಿರಿನಿಂದ ಕಂಗೊಳಿಸುತಿತ್ತು. ಆದರೆ ಈ ಬಾರಿ ಬರದ ಛಾಯೆ ಆವರಿಸಿದೆ. ಆದ್ದರಿಂದ ಮಳೆಗಾಗಿ ಪ್ರಾರ್ಥಿಸಿ ರೈತರು ದೇವರ ಮೊರೆ ಹೋಗಿದ್ದಾನೆ.

Advertisement

ಹೊಳೆ, ಕೆರೆಗಳಲ್ಲೂ ನೀರಿಲ್ಲ

ಈ ಹಿಂದೆ ಮಳೆಯ ಆಗಮನಕ್ಕಿಂತ ಮುಂಚಿತವಾಗಿ ಬಾವಿ, ಕೆರೆ, ಹೊಳೆ ಮುಂತಾದವುಗಳಿಂದ ನೀರನ್ನು ಬಳಸಿ ಬೀಜ ಬಿತ್ತನೆ ನಡೆಸಲಾಗುತ್ತಿತ್ತು. ಆದರೆ ಈಗ ಇವುಗಳು ಕೂಡ ಬರಿದಾಗಿವೆ. ಹೀಗಾಗಿ ಮಳೆಗಾಗಿ ಪರಿತಪಿಸುತ್ತಿದ್ದಾನೆ.

ನಾಟಿಯೂ ವಿಳಂಬ

ಕಳೆದ ವರ್ಷ ಮೇ 20ಕ್ಕೆ ಮೊದಲು ಮಳೆ ಬಂದು ಬೀಜ ಬಿತ್ತನೆ ನಡೆದಿತ್ತು. ಆದರೆ ಪ್ರಸ್ತುತ ಇದುವರೆಗೆ ಮಳೆಯಾಗಿಲ್ಲ. ಆದ್ದರಿಂದ ಈ ಬಾರಿ ನಾಟಿ ಸುಮಾರು ಹತ್ತು-ಹದಿನೈದು ದಿನ ವಿಳಂಬವಾಗಲಿದೆ.

ಯಂತ್ರೋಪಕರಣ ಬೇಡಿಕೆ ಹೆಚ್ಚಳ

ಮಳೆಯಾಗುತ್ತಿದ್ದಂತೆ ರೈತರುಒಟ್ಟಿಗೆ ಕೃಷಿ ಚಟುವಟಿಕೆ ಆರಂಭಿಸು ತ್ತಾರೆ. ಇದರಿಂದಾಗಿ ಬೀಜ ಬಿತ್ತನೆ, ನಾಟಿ ಚಟುವಟಿಕೆಯ ಯಂತ್ರೋಪಕರಣಗಳಿಗೆ ಒಮ್ಮೆಲೆ ಬೇಡಿಕೆ ಹೆಚ್ಚಾಗಲಿದೆ. ಹೀಗಾಗಿ ಅಗತ್ಯಕ್ಕೆ ತಕ್ಕಂತೆ ಯಂತ್ರೋಪಕರಣಗಳ ಕೊರತೆ ಉಂಟಾಗಲಿದೆ.

ಯಾವುದೇ ಕೊರತೆಯಿಲ್ಲ

ಕಳೆದ ವರ್ಷ ಅಗತ್ಯ ಪ್ರಮಾಣದಲ್ಲಿ ಎಂ.ಒ. 4 ಬೀಜ ಲಭ್ಯವಾಗದೆ ಬಿತ್ತನೆ ಬೀಜದ ಕೊರತೆ ಎದುರಾಗಿತ್ತು ಹಾಗೂ ರೈತರು ಸಾಕಷ್ಟು ಸಮಸ್ಯೆ ಎದುರಿಸಿದ್ದರು. ಆದರೆ ಈ ಬಾರಿ ಕೃಷಿ ಇಲಾಖೆ ಬೇಡಿಕೆ ಪ್ರಮಾಣದ ಬೀಜವನ್ನು ದಾಸ್ತಾನಿರಿಸಿದೆ ಹಾಗೂ ಹೆಚ್ಚಿನ ಬೇಡಿಕೆ ಬಂದಲ್ಲಿ ಪೂರೈಸುವ ಭರವಸೆ ನೀಡಿದೆ. ಜಿಲ್ಲೆಯಲ್ಲಿ ಈಗಾಗಲೇ 1,031ಟನ್‌ ರಸಗೊಬ್ಬರ ಖಾಸಗಿ, ಸಹಕಾರಿ, ಸರಕಾರಿ ಸಂಸ್ಥೆ ಗಳಲ್ಲಿ ಲಭ್ಯವಿದ್ದು ಹೆಚ್ಚಿನ ಬೇಡಿಕೆ ಇದ್ದಲ್ಲಿ ಪೂರೈಸುವ ಭರವಸೆ ನೀಡಿದೆ.

ಉಡುಪಿ ಜಿಲ್ಲೆಯಲ್ಲಿ ಬಿತ್ತನೆ ಬೀಜದ ಬೇಡಿಕೆ 2,940 ಕ್ವಿಂಟಾಲ್ ಇದುವರೆಗೆ ಮಾರಾಟವಾಗಿರುವುದು 1,596 ಕ್ವಿಂಟಾಲ್ ಇಲಾಖೆಯಲ್ಲಿ ದಾಸ್ತಾನು ಇರುವುದು 244 ಕ್ವಿಂಟಾಲ್
– ರಾಜೇಶ್‌ ಕೋಟ
Advertisement

Udayavani is now on Telegram. Click here to join our channel and stay updated with the latest news.

Next