Advertisement
ದ್ವಿಚಕ್ರ ವಾಹನ ಸವಾರರಿಗೂ ಇತರ ಸಂದರ್ಭಗಳಲ್ಲಿ ನಿಯಂತ್ರಣದಲ್ಲಿರುವಷ್ಟು ಮಳೆ ಬಿದ್ದಾಗ ಇರುವುದಿಲ್ಲ. ಇದೇ ಕಾರಣಕ್ಕೆ ನಿಯಂತ್ರಣ ಕಳೆದುಕೊಂಡು ವಾಹನಗಳು ಸ್ಕಿಡ್ ಆಗುವುದು ಅಥವಾ ಬ್ರೇಕ್ ಸರಿಯಾಗಿ ಕಾರ್ಯನಿರ್ವಹಿಸದೆ ಅಪಘಾತಗಳು ಉಂಟಾಗುತ್ತವೆ.
ವಾಹನಗಳಿಂದ ಸುರಿದ ದ್ರವವಸ್ತುಗಳು ಬಿಸಿಲಿಗೆ ರಸ್ತೆಯಲ್ಲಿ ಗಟ್ಟಿಯಾಗಿದ್ದರೂ ಮಳೆಬಂದಾಗ ಎಣ್ಣೆಯ ಅಂಶಗಳು ಚದುರಲ್ಪಡುತ್ತವೆ. ಈ ವೇಳೆ ವಾಹನಸವಾರರು ತುಸು ಬ್ರೇಕ್ ಹಾಕಿದರೂ ಸ್ಕಿಡ್ ಆಗಿ ಬೀಳುವ ಸಂಭವವೇ ಅಧಿಕವಾಗಿರುತ್ತದೆ. ಇದು ದ್ವಿಚಕ್ರ ವಾಹನ ಮಾತ್ರವಲ್ಲದೆ ಘನ ವಾಹನಗಳ ಮೇಲೂ ಪರಿಣಾಮ ಬೀರುತ್ತದೆ. ಈ ಕಾರಣಕ್ಕೆ ನಿಧಾನಗತಿಯಲ್ಲಿ ಚಲಿಸುವುದೇ ಉತ್ತಮ.
Related Articles
ರಸ್ತೆ ಗುಂಡಿಗಳಲ್ಲಿ ನೀರು ನಿಂತು ಸವಾರರಿಗೆ ಕಾಣದಂತಿರುತ್ತದೆ. ಇದು ಬೃಹತ್ ಗಾತ್ರದ ಹೊಂಡವೂ ಆಗಿರಬಹುದು. ದಿನನಿತ್ಯ ಅದೇ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಇದರ ಅರಿವಿದ್ದರೂ ಬೇರೆ ರಸ್ತೆಗಳಲ್ಲಿ ಸಂಚರಿಸಿದಾಗ ನೀರು ತುಂಬಿರುವೆಡೆ ಸಂಚಾರ ಮಾಡುವಾಗ ಬಹಳಷ್ಟು ಜಾಗರೂಕರಾಗಿರಬೇಕು.
Advertisement
ಮರದಡಿ ವಾಹನ ನಿಲುಗಡೆ ಬೇಡಬೇಸಗೆ ಕಾಲದಲ್ಲಿ ನೆರಳಿನ ಆಶ್ರಯಕ್ಕಾಗಿ ಮರದಿಡಿ ವಾಹನ ನಿಲುಗಡೆ ಮಾಡುಲು ಅಭ್ಯಾಸವನ್ನು ಹಲವಾರು ಮಂದಿ ಹೊಂದಿದ್ದರು. ಆದರೆ ಮಳೆಗಾಲಕ್ಕೂ ಇದನ್ನೇ ಮುಂದುವರಿಸಿದರೆ ಅಪಾಯ ಖಚಿತ. ಮರದ ಗೆಲ್ಲುಗಳು ಬಿದ್ದು ವಾಹನಕ್ಕೆ ಹಾನಿಯಾಗುವ ಸಂಭವವೇ ಅಧಿಕವಾಗಿರುತ್ತವೆ. ಶಿಥಿಲಾವಸ್ಥೆಯಲ್ಲಿರುವ ಮರಗಳು ಬುಡ ಸಹಿತ ಬೀಳುವ ಘಟನೆಗಳೂ ನಡೆದಿವೆ. ಈ ಕಾರಣಕ್ಕೆ ಮರದ ಕೆಳಭಾಗ ಹಾಗೂ ವಿದ್ಯುತ್ ತಂತಿಗಳು, ಕಂಬಗಳು ಇರುವಲ್ಲಿ ವಾಹನ ನಿಲ್ಲಿಸದಿರುವುದೇ ಒಳಿತು.