Advertisement
ರೈತರು ಎತ್ತು, ಟ್ರ್ಯಾಕ್ಟರ್‌ಗಳಿಂದ ಭೂಮಿಯನ್ನು ಹದಮಾಡಿಕೊಂಡು ಕೃಷಿ ಚಟುವಟಿಕೆ ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬೆಲೆ ಏರಿಕೆ ಹೆಚ್ಚಳದಿಂದ ಪ್ರತಿಯೊಂದು ವಸ್ತುಗಳು ದುಬಾರಿಯಾಗಿರುವ ನಡುವೆಯೂ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ವರ್ಷವೂ ಸಹ ಉತ್ತಮ ಮಳೆಯಾಗಿತ್ತು. ಜಿಲ್ಲೆಯಲ್ಲಿ ಪೂರ್ವ ಮುಂಗಾರು ಉತ್ತಮವಾಗಿತ್ತು. ಇದರ ಪರಿಣಾಮವಾಗಿ ಮೇ ತಿಂಗಳಿನಲ್ಲಿ ಉತ್ತಮ ಮಳೆಯಾಗಿದೆ.
Related Articles
Advertisement
4,054 ಕ್ವಿಂಟಲ್ ಬಿತ್ತನೆ ಬೀಜದ ಬೇಡಿಕೆ: ಜಿಲ್ಲೆಯ ಪ್ರಮುಖ ಬೆಳೆಯಾದ ರಾಗಿ ಬಿತ್ತನೆ ಈವರೆಗೆ 47 ಹೆಕ್ಟೇರ್ ಬಿತ್ತನೆ ಕಾರ್ಯವಾಗಿದೆ. ಇದರ ಜತೆಗೆ 1,515 ಹೆಕ್ಟೇರ್ ಗುರಿ ಇರುವ ಅವರೆಯಿದೆ. 1,056 ಹೆಕ್ಟೇರ್ ತೊಗರಿ ಗುರಿ ಇದ್ದು, 111 ಹೆಕ್ಟೇರ್ ಪೂರ್ಣಗೊಂಡಿದೆ. ನೆಲಗಡಲೆ ಕೂಡ 37 ಹೆಕ್ಟೇರ್ ಪೂರ್ಣಗೊಂಡಿದೆ. 4,054 ಕ್ವಿಂಟಲ್ ಬಿತ್ತನೆ ಬೀಜದ ಬೇಡಿಕೆ ಇದೆ. ಇದರಲ್ಲಿ 422 ಕ್ವಿಂಟಲ್ ವಿತರಣೆಯಾಗಿದೆ. 581 ಕ್ವಿಂಟಲ್ ರೈತ ಸಂಪರ್ಕ ಕೇಂದ್ರದಲ್ಲಿದ್ದು, ಬೇಡಿಕೆ ತಕ್ಕಂತೆ ಹಂತ ಹಂತವಾಗಿ ನೀಡಲಾಗುತ್ತಿದೆ.
ಬೆಂ.ಗ್ರಾ. ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ : ಜಿಲ್ಲೆಯಲ್ಲಿ ದಾಖಲೆಯ ಮಳೆ ಪೂರ್ವ ಮುಂಗಾರಿನಲ್ಲಿ ಕಾಣಿಸಿಕೊಂಡಿತ್ತು. ಏಪ್ರಿಲ್ ತಿಂಗಳಿನಲ್ಲಿನ ವಾಡಿಕೆ ಮಳೆ 35.0ಮಿ.ಮೀ. ಆಗಿದೆ. ಆದರೆ, 59.5 ಮಿ.ಮೀ. ಮಳೆಯಾಗುವ ಮೂಲಕ ಶೇ.70ರಷ್ಟು ಹೆಚ್ಚಿಗೆ ಮಳೆಯಾಗಿದೆ. ಇನ್ನು ಮೇ ತಿಂಗಳಲ್ಲಿ ಉತ್ತಮ ಮಳೆಯಾಗಿದೆ. ಜೂನ್ ತಿಂಗಳಲ್ಲಿ ಜಿಲ್ಲೆಯಲ್ಲಿ ವಾಡಿಕೆ ಮಳೆ 67 ಮಿ.ಮೀ. ಇದ್ದು, 193.8 ಮಿ.ಮೀ. ಮಳೆಯಾಗಿದೆ. ಇನ್ನು ಜನವರಿಯಿಂದ ಜೂನ್‌ವರೆಗೆ ಶೇ. 208.3ಮಿ.ಮೀ. ವಾಡಿಕೆ ಮಳೆಗಿಂತ 496 ಮಿ.ಮೀ. ಮಳೆಯಾಗಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರುವುದರಿಂದ ಎಲ್ಲಾ ಹೋಬಳಿಯ ರೈತಸಂಪರ್ಕ ಕೇಂದ್ರಗಳಲ್ಲಿ ಸಕಾಲದಲ್ಲಿ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ಜಿಲ್ಲೆಯಲ್ಲಿ 69,600 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. –ಜಯಸ್ವಾಮಿ, ಕೃಷಿ ಜಂಟಿ ನಿರ್ದೇಶಕ ರೈ
ತರಿಗೆ ಮಳೆ ಚೆನ್ನಾಗಿ ಬರುತ್ತಿರುವುದ ರಿಂದ ಕೃಷಿ ಇಲಾಖೆಯಿಂದ ಹೆಚ್ಚಿನ ಸೌಲಭ್ಯ ನೀಡಬೇಕು. ಖಾಸಗಿ ಯಂತ್ರಗಳ ಬಾಡಿಗೆ ದರ ಹೆಚ್ಚು ದುಬಾರಿಯಾಗಿದೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸರಿಯಾದ ಸಮಯಕ್ಕೆ ದೊರೆಯುವಂತೆ ಆಗಬೇಕು. ಭೂಮಿಯನ್ನು ಹದಮಾಡಿ ಕೊಂಡು ಕೃಷಿ ಚಟುವಟಿಕೆ ಮಾಡುತ್ತಿದ್ದೇವೆ. –ಶ್ರೀನಿವಾಸ್, ರೈತ
-ಎಸ್. ಮಹೇಶ್