Advertisement

ಶ್ರೀನಿವಾಸ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳಿಂದ ಮೊನೊವೀಲ್ ಬೈಕ್‌ ಆವಿಷ್ಕಾರ

11:10 PM Jun 15, 2019 | Team Udayavani |

ಮಹಾನಗರ: ಶ್ರೀನಿ ವಾಸ ಇನ್‌ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿ ಸಂಸ್ಥೆಯ ಅಟೋಮೊಬೈಲ್ ವಿಭಾಗದ ವಿದ್ಯಾರ್ಥಿಗಳು ಸರಳೀ ಕೃತವಾಗ ಮೊನೊವೀಲ್ ಬೈಕ್‌ನ್ನು ಆವಿಷ್ಕರಿಸಿದ್ದಾರೆ. ಕೃಷಿ ಉಳುಮೆ ಮತ್ತು ಕೈಗಾರಿಕಾ ಉದ್ದೇಶವನ್ನಿಟ್ಟುಕೊಂಡು ಈ ಬೈಕ್‌ ನಿರ್ಮಿಸಲಾಗಿದೆ ಎಂದು ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಸಂತೋಷ್‌ ಕುಮಾರ್‌ ಹೇಳಿದರು.

Advertisement

ನಗರದ ಪತ್ರಿಕಾಭವನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಾಹನವನ್ನು ಕೇವಲ 18 ಸಾವಿರ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಮೊನೊವೀಲನ್ನು ಚಾಲಕನು ಸಾಮಾನ್ಯ ದ್ವಿಚಕ್ರ ವಾಹನದಂತೆಯೇ ಸಮತೋಲನ ಮಾಡಬಹುದಾಗಿದೆ. ಮೊನೊವೀಲ್ನ ಹೆಚ್ಚುವರಿ ಸಮತೋಲನಕ್ಕೆ ಗೈರೋಸ್ಕೋಪಿಕ್‌ ಸಂವೇದಕಗಳನ್ನು ಬಳಸುವುದರ ಮೂಲಕ ನವೀಕರಿಸಬಹುದು ಎಂದರು.

ಪೃಥ್ವಿ ಎಸ್‌.ಆಚಾರ್ಯ ಮಾತನಾಡಿ, ಒಂದು ಚಕ್ರದ ಬೈಕ್‌ ಇದಾಗಿದ್ದು, ‘ಮೊನೊ ವೀಲ್’ ಹೊರ ಚಾಲನೆಯಲ್ಲಿರುವ ಏಕ ಚಕ್ರವನ್ನು ಹೊಂದಿದೆ. ಇದರಲ್ಲಿ ಚಾಲಕನು ವೃತ್ತಾಕಾರದ ಚೌಕಟ್ಟಿನಲ್ಲಿ ಕುಳಿತುಕೊಳ್ಳುತ್ತಾನೆ. ದ್ವಿಚಕ್ರ ವಾಹನ ಆವರಿಸಿರುವ ಜಾಗವನ್ನು ಕಡಿಮೆ ಮಾಡುವುದು ಮತ್ತು ಅದನ್ನು ಒಂದು ಚಕ್ರದೊಂದಿಗೆ ಬದಲಿಸುವುದು ಮೊನೊವೀಲ್ನ ಮುಖ್ಯ ಗುರಿಯಾಗಿದೆ. ಇದನ್ನು ಕೃಷಿ ಉಳುಮೆಗೆ ಸುಲಭವಾಗಿ ಬಳಸಬಹುದಾಗಿದೆ ಎಂದರು.

ಶ್ರೀನಿವಾಸ ತಾಂತ್ರಿಕ ಮಹಾವಿದಾಲಯದ ನಾಲ್ಕನೇ ವರ್ಷದ ಮೋಟಾರು ವಾಹನ ವಿಭಾಗದ ವಿದ್ಯಾರ್ಥಿಗಳಾದ ಮೋಹಿತ್‌ ಎನ್‌. ಮಾಧವ, ಪೃಥ್ವಿ ಎಚ್.ಆಚಾರ್ಯ, ನವೀನ್‌ ಅಮರಣ್ಣವರ, ಪ್ರಮೋದ್‌ ಜಿ.ಎಲ್. ಸರಳೀಕೃತ ಮೊನೊವಿಲ್ ಬೈಕ್‌ನ್ನು ಮರು ವಿನ್ಯಾಸಗೊಳಿಸಿದವರು ಎಂದರು.

ಮೊನೊವೀಲ್ ಆವಿಷ್ಕರಿಸಿದ ವಿದಾರ್ಥಿಗಳಾದ ಮೋಹಿತ್‌ ಎನ್‌. ಮಾಧವ, ನವೀನ್‌ ಅಮರಣ್ಣವರ, ಪ್ರಮೋದ್‌ ಜಿ.ಎಲ್. ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next