ಶಿರಸಿ: ಶಿರಸಿ ಹಾವೇರಿ ರಸ್ತೆಯಲ್ಲಿ ಬಂದಿರಾ? ಹೆಲಿಕಾಪ್ಟರ್ ಮೇಲೆ ಬಂದಿರಾ ಎಂದು ಶಾಸಕ ಭೀಮಣ್ಣ ನಾಯ್ಕ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿ, ೩೦ ಕಿಮಿ ನಮ್ಮ ಜಿಲ್ಲೆಯಲ್ಲಿ ಶಿರಸಿ ಹಾವೇರಿ ರಸ್ತೆ ಇದೆ. ಅರಣ್ಯ ಸಮಸ್ಯೆ ಇಲ್ಲದ ಕಡೆ ಕೆಲಸ ಮಾಡಲು ಏನು ಸಮಸ್ಯೆ ಎಂದು ಕೇಳಿದರು.
ಹಾವೇರಿ ಶಿರಸಿ ರಸ್ತೆಯಲ್ಲಿ ದಾಸನಕೊಪ್ಪ ತನಕ ಏನೂ ಸಮಸ್ಯೆ ಇಲ್ಲ. ನಾಳೆಯಿಂದಲೇ ಗುಂಡಿ ಮುಚ್ಚುವ ಕೆಲಸ ಆಗಬೇಕು. ಅರಣ್ಯ ಇಲಾಖೆಯಿಂದ ಸಮಸ್ಯೆ ಇಲ್ಲ. ಜನರೂ ಸಹಕಾರ ಕೊಟ್ಟಿದ್ದಾರೆ. ವಿಳಂಬ, ಮೊಂಡುತನ ಮಾಡಬೇಡಿ ಎಂದು ಹೇಳಿದರು.
ಶಿರಸಿ ಹಾವೇರಿ ರಸ್ತೆಗೆ ಸಂಬಂಧಿಸಿ ಎಲ್ಲ ಇಲಾಖೆಗಳ ಸಂಪರ್ಕದಲ್ಲಿ ಇರಬೇಕು. ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಸಹಕಾರ ನೀಡುತ್ತಾರೆ. ರಸ್ತೆ ಕೆಲಸ ಮಾಡಬೇಕು. ಅರಣ್ಯ ಮಾರ್ಕಿಂಗ್ ಎಷ್ಟಾಗಿದೆ ಎಂಬುದೇ ಗೊತ್ತಿಲ್ಲ. ಸಾರ್ವಜನಿಕರ ಸಮಸ್ಯೆ ನೋಡಲ್ಲ. ನಿಮ್ಮ ಲಾಭ ನೋಡುತ್ತೀರಿ. ಸಮಸ್ಯೆ ಏನಿದೆ ಎಂದು ಗುತ್ತಿಗೆ ಪಡೆಯುವ ಮೊದಲು ನೋಡಬಾರದಾ ಎಂದೂ ಕೇಳಿದರು.
ಎಸಿ ದೇವರಾಜ್, ತಹಸೀಲ್ದಾರ ಶ್ರೀಧರ ಮುಂದಲನಿ, ಲೊಕೋಪಯೋಗಿ ಇಲಾಖೆ ಮುಖ್ಯ ಅಭಿಯಂತ ನಾರಾಯಣ ಕುರಂದಕರ್, ಹಿರಿಯ ಸಹಾಯಕ ಅಭಿಯಂತ ಶಿವಾನಂದ ಜಾಡರ್ ಇತರರು ಇದ್ದರು.
ಇದನ್ನೂ ಓದಿ: Lunar Eclipse: ಅ.28ರ ಸಂಜೆ ಆರರಿಂದ ಚಾಮುಂಡೇಶ್ವರಿ ದರ್ಶನ ವ್ಯವಸ್ಥೆಯಿಲ್ಲ