Advertisement

ಏಕಶಿಲಾ ಪ್ರತಿಮೆ ಲೋಕಾರ್ಪಣೆ

07:45 PM Jan 17, 2020 | Lakshmi GovindaRaj |

ಉತ್ತರಾದಿ ಮಠದ ಆವರಣದಲ್ಲಿ, ದಾಸಶ್ರೇಷ್ಠ ಪುರಂದರ ದಾಸರ ಏಕಶಿಲಾ ಪ್ರತಿಮೆ ಅನಾವರಣಗೊಳ್ಳಲಿದೆ. 9 ಅಡಿ ಎತ್ತರ (ಪೀಠ ಸೇರಿ 16 ಅಡಿ) ಇರುವ ಏಕಶಿಲಾ ಪ್ರತಿಮೆಯನ್ನು ಶಿಲ್ಪಿ ಶಂಕರ್‌ ಸ್ತಪತಿ ಸಿದ್ಧಪಡಿಸಿದ್ದಾರೆ. ಉತ್ತರಾದಿ ಮಠಾಧೀಶ ಶ್ರೀಸತ್ಯಾತ್ಮತೀರ್ಥ ಶ್ರೀಪಾದರ ನೇತೃತ್ವದಲ್ಲಿ ಪ್ರತಿಮೆ ಲೋಕಾರ್ಪಣೆ ಮತ್ತು ಜ.20ರಿಂದ ಪುರಂದರ ಸಪ್ತರಾತ್ರೋತ್ಸವ ಕಾರ್ಯಕ್ರಮ ನಡೆಯಲಿದೆ.

Advertisement

ಜ. 20, ಸೋಮವಾರ
ಬೆಳಗ್ಗೆ 9- ರಾಮಾಚಾರ್ಯ ಕಟ್ಟಿ ಮತ್ತು ರಂಗಾಚಾರ್ಯ ಗುತ್ತಲ್‌ ಅವರಿಂದ ಪುರಂದರದಾಸರ ಪ್ರತಿಮೆಗೆ ಧಾರ್ಮಿಕ ವಿಧಿವಿಧಾನಗಳು.

ಬೆಳಗ್ಗೆ 10- ಶಿಲ್ಪಕಲಾ ಭೂಷಣ ಜಿ. ಶಂಕರ್‌ ಸ್ತಪತಿ ಮತ್ತು ವಿಗ್ರಹ ವಿನ್ಯಾಸಕ ಡಾ. ಜಿ. ಜಗದೀಶ್‌ರವರಿಗೆ ಸನ್ಮಾನ.

ಸಂಜೆ 5- ಗಾನ ಕಲಾ ಭೂಷಣ ಡಾ. ಆರ್‌.ಕೆ. ಪದ್ಮನಾಭ ಅವರಿಂದ ಆರಾಧನಾ ಮಹೋತ್ಸವ ಉದ್ಘಾಟನೆ, ಸಮಾಜಸೇವಕ ಪತ್ತಿ ಎ. ಶ್ರೀಧರ್‌ಗೆ ಸನ್ಮಾನ ಮತ್ತು ಪುರಂದರದಾಸ ಆರಾಧನ ಮಹೋತ್ಸವ ಸಮಿತಿಯ ರಾಜಾರಾವ್‌ ಮತ್ತು ಸಂಗೀತ ವಿದುಷಿ ಡಾ. ಮೈಸೂರು ನಾಗಮಣಿ ಶ್ರೀನಾಥ್‌ಗೆ ಹರಿದಾಸ ಅನುಗ್ರಹ ಪ್ರಶಸ್ತಿ ಪ್ರದಾನ.

ಜ 21, ಮಂಗಳವಾರ
ಮಧ್ಯಾಹ್ನ 3.30- ಕೆ.ಆರ್‌.ಪುರಂ ಹರಿದಾಸ ಸಂಘದ ಅಧ್ಯಕ್ಷ ಡಾ. ಹ.ರ ನಾಗರಾಜ ದಾಸರಿಂದ ಪುರಂದರ ವೈಭವ ನಾಮಸಂಕೀರ್ತನೆ ಮತ್ತು ಉಪನ್ಯಾಸ.

Advertisement

ಸಂಜೆ 5- ವಿದುಷಿ ದೀಪಿಕಾ ಮಾಧವ್‌, ಶ್ರೀವಾರಿ ಫೌಂಡೇಷನ್‌ನ ಎಸ್‌. ವೆಂಕಟೇಶ ಮೂರ್ತಿ ಅವರಿಗೆ ಹರಿದಾಸ ಅನುಗ್ರಹ ಪ್ರಶಸ್ತಿ ಪ್ರದಾನ, ಡಾ. ಆರ್‌.ಎಂ.ವಿ. ಪ್ರಸಾದ್‌ ಮತ್ತು ವೃಂದದಿಂದ ಹರಿದಾಸ ವಾಣಿ.

ಜ.22, ಬುಧವಾರ
ಮಧ್ಯಾಹ್ನ 3.30-ವಿವಿಧ ಭಜನಾ ಮಂಡಳಿಗಳಿಂದ ಪುರಂದರ ದಾಸರ ಕೃತಿಗಳ ಗಾಯನ.

ಸಂಜೆ 5- ವಿದ್ವಾನ್‌ ಕಲ್ಲಾಪುರ ಪವಮಾನಾಚಾರ್ಯರಿಂದ ಉಪನ್ಯಾಸ, ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಮತ್ತು ವಿದುಷಿ ಮಾಲತಿ ಮಾಧವಾಚಾರ್ಯರಿಗೆ ಹರಿದಾಸ ಅನುಗ್ರಹ ಪ್ರಶಸ್ತಿ ಪ್ರದಾನ, ಆಕಾಶವಾಣಿಯ ಹಿರಿಯ ಕಲಾವಿದೆ ವಿದುಷಿ ಡಾ. ಆರ್‌. ಚಂದ್ರಿಕಾ ಮತ್ತು ವೃಂದದಿಂದ ಹರಿದಾಸ ಝೇಂಕಾರ.

ಜ. 23, ಗುರುವಾರ
ಸಂಜೆ 5- ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿಯವರಿಂದ ಉಪನ್ಯಾಸ, ಮಕ್ಕಳ ತಜ್ಞ ಡಾ. ಆರ್‌. ಪದ್ಮನಾಭ ರಾವ್‌, ಹೃದ್ರೋಗ ತಜ್ಞ ಡಾ. ವೇಣುಗೋಪಾಲ ರಾವ್‌ ಮತ್ತು ಸ್ತ್ರೀ ರೋಗ ತಜ್ಞೆ ಡಾ. ವರ್ಣ ವಿ. ರಾವ್‌ ಅವರಿಗೆ ಹರಿದಾಸ ಅನುಗ್ರಹ ಪ್ರಶಸ್ತಿ ಪ್ರದಾನ, ವಿದ್ವಾನ್‌ ಎಸ್‌. ಶಂಕರ್‌ ಮತ್ತು ತಂಡದಿಂದ ಹರಿದಾಸ ನಮನ.

ಜ. 24, ಶುಕ್ರವಾರ
ಸಂಜೆ 5- ಪಂಡಿತ ವಿದ್ಯಾಧೀಶಾಚಾರ್ಯ ಗುತ್ತಲ್‌ ಅವರಿಂದ ಉಪನ್ಯಾಸ, ಡಿ.ಆರ್‌.ಡಿ.ಒ. ವೈಮಾನಿಕ ಶಾಸ್ತ್ರ ಪರಿಣತ ಡಾ. ಪಿ. ರಘೋತ್ತಮ ರಾವ್‌ ಮತ್ತು ಹಿರಿಯ ವಕೀಲ ಎನ್‌. ಆರ್‌. ರಾವ್‌ ಅವರಿಗೆ ಹರಿದಾಸ ಅನುಗ್ರಹ ಪ್ರಶಸ್ತಿ ಪ್ರದಾನ, ವಿದ್ವಾನ್‌ ಎಚ್‌.ಎಸ್‌. ಸುಧೀಂದ್ರ ಮತ್ತು ಎಸ್‌. ಜಯಚಂದ್ರ ರಾವ್‌ ನೇತೃತ್ವದಲ್ಲಿ ಅಹೋರಾತ್ರಿ (ಸಂಜೆ 7.30-6.30) ಸಂಗೀತಸಭಾ.

ಎಲ್ಲಿ?: ದಿಗ್ವಿಜಯ ಲಕ್ಷ್ಮೀನರಸಿಂಹ ದೇವಸ್ಥಾನ, ಉತ್ತರಾದಿ ಮಠ, ನ್ಯಾಷನಲ್‌ ಕಾಲೇಜು ಎದುರು, ಬಸವನಗುಡಿ
ಯಾವಾಗ?: ಜ.20 ರಿಂದ

Advertisement

Udayavani is now on Telegram. Click here to join our channel and stay updated with the latest news.

Next