ಲಕ್ನೋ: ಕೆಲವೊಮ್ಮೆ ಕೋತಿಗಳು ಮಾಡುವ ಕೀಟಲೆಗಳು ಜನರಿಗೆ ಸಂಕಷ್ಟವನ್ನು ತರುತ್ತದೆ. ಕೋತಿಗಳು ಆಹಾರ ಪೊಟ್ಟಣಗಳನ್ನು ಕಸಿದುಕೊಂಡು ಹೋಗುವುದನ್ನು ನೋಡಿದ್ದೇವೆ ಆದರೆ ಇಲ್ಲೊಂದು ಕೋತಿ ಲಕ್ಷ ದುಡ್ಡು ಇದ್ದ ಬ್ಯಾಗನ್ನೇ ಕಸಿದುಕೊಂಡು ಹೋಗಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ರಾಂಪುರದಲ್ಲಿ ಈ ನಡೆದಿದ್ದು, ದೆಹಲಿ ಮೂಲದ ಶರಾಫತ್ ಹುಸೇನ್ ಎಂಬುವವರು ತನ್ನ ದ್ವಿಚಕ್ರವಾಹನವನ್ನು ನಿಲ್ಲಿಸಿ, ಖಾತೆಗಳ ದಾಖಲೆಯನ್ನು ಇಡಲು ಬೆಂಚ್ ಮೇಲೆ ಕುಳಿತಿದ್ದರು. ಈ ವೇಳೆ ಅವರು 1 ಲಕ್ಷ ನಗದು ಇದ್ದ ತನ್ನ ಬ್ಯಾಗ್ ನ್ನು ತನ್ನ ಬೈಕ್ ನಲ್ಲಿಟ್ಟಿದ್ದಾರೆ. ಈ ಕ್ಷಣದಲ್ಲಿ ಅವರ ಬೈಕ್ ಪಕ್ಕಕ್ಕೆ ಒಂದು ಕೋತಿ ಬಂದಿದೆ. ಬ್ಯಾಗ್ ಪಕ್ಕದಲ್ಲಿ ಏನೋ ಹುಡುಕಿದ್ದಂತೆ ಮಾಡಿದ ಕೋತಿ ಒಂದೇ ಘಳಿಗೆಯಲ್ಲೇ ಬ್ಯಾಗ್ ಹಿಡಿದುಕೊಂಡು ಓಡಿಹೋಗಿದೆ.
ಇದನ್ನೂ ಓದಿ: ʼSalaar-KGFʼ ಲಿಂಕ್: ಟೀಸರ್ ನಲ್ಲಿ ಮಹತ್ವದ ಸುಳಿವು ಪತ್ತೆ ಹಚ್ಚಿದ ಫ್ಯಾನ್ಸ್
ಇದನ್ನು ನೋಡಿದ ಹುಸೇನ್ ಹಣವಿದ್ದ ಬ್ಯಾಗ್ ಹೋಯಿತೆಂದು ಗಾಬರಿಯಾಗಿದ್ದಾರೆ. ಇದರಿಂದ ಜನರೆಲ್ಲ ಒಟ್ಟಾಗಿದ್ದು ಕೋತಿಯನ್ನು ಹಿಡಿಯಲು ಹೋಗಿದ್ದಾರೆ. ಆದರೆ ಕೋತಿ ಮರಕ್ಕೆ ಹೋಗಿ ಕೂತಿದೆ. ಆದರೂ ಹುಸೇನ್ ಹಾಗೂ ಅಲ್ಲಿನ ಜನರು ಕೋತಿಯನ್ನು ಅಟ್ಟಾಡಿಸಿಕೊಂಡು ಹೋಗಿದ್ದಾರೆ. ಈ ವೇಳೆ ಕೋತಿ ತನ್ನಲ್ಲಿದ್ದ ಬ್ಯಾಗ್ ನ್ನು ಬಿಟ್ಟು ಓಡಿದೆ.
ಶಹಾಬಾದಿನಲ್ಲಿ ಮಂಗಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಹಿಡಿದು ಕಾಡಿಗೆ ಬಿಡಲು ತಂಡವನ್ನು ನೇಮಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.