Advertisement

Monkey ಕಾಯಿಲೆ ಉಲ್ಬಣ: 2 ತಿಂಗಳಲ್ಲಿ 5ನೇ ವ್ಯಕ್ತಿ ಸಾವು

12:33 AM Feb 29, 2024 | Shreeram Nayak |

ಶಿವಮೊಗ್ಗ /ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಜನರನ್ನು ಕಾಡುತ್ತಿರುವ ಮಂಗನಕಾಯಿಲೆ (ಕೆಎಫ್‌ಡಿ)ಯಿಂದ ಬಳಲುತ್ತಿದ್ದ ಚಿಕ್ಕಮಗಳೂರು ಕೊಪ್ಪ ತಾಲೂಕಿನ ಕೂಲಿ ಕಾರ್ಮಿಕೆ ಕೊಟ್ರಮ್ಮ (43) ಮಂಗಳವಾರ ಮೃತಪಟ್ಟಿದ್ದಾರೆ. ಇದುವರೆಗೆ ಒಟ್ಟು 130 ಮಂದಿಗೆ ಸೋಂಕು ತಗಲಿದೆ. ಎರಡು ತಿಂಗಳಲ್ಲಿ ಒಟ್ಟು ಐವರು ಕೊನೆಯುಸಿರೆಳೆದಿದ್ದಾರೆ.

Advertisement

ಶೃಂಗೇರಿ ತಾಲೂಕಿನ 79 ವರ್ಷದ ವ್ಯಕ್ತಿ ಇತ್ತೀಚೆಗೆ ಮೃತಪಟ್ಟಿದ್ದರು.

ಮೃತ ಕೊಟ್ಟಮ್ಮ ಅವರು ಕೊಪ್ಪ ತಾಲೂಕಿನ ನುಗ್ಗಿ ಗ್ರಾಮದ ದೇವಗನ್‌ ಎಸ್ಟೇಟ್‌ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು.

ಅವರಿಗೆ ಕೆಲವು ದಿನಗಳ ಹಿಂದೆ ತೀವ್ರ ಜ್ವರ, ಸುಸ್ತು, ಉಸಿ ರಾಟ ತೊಂದರೆ ಕಾಣಿಸಿ ಕೊಂಡಿತ್ತು. ಅವ ರನ್ನು ಕೊಪ್ಪ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಕ್ತದ ಮಾದರಿ ಪರೀಕ್ಷೆಗೆ ಒಳಪಡಿಸಿದ ವೇಳೆ ಮಂಗನ ಕಾಯಿಲೆ ಸೋಂಕು ದೃಢಪಟ್ಟಿತ್ತು. ಮಂಗಳವಾರ ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡು ಬಂದ ಕಾರಣ ಅವರನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಕೊನೆಯುಸಿರು ಎಳೆದಿದ್ದಾರೆ.

ನವೆಂಬರ್‌ ಕೊನೆ ವಾರದಲ್ಲಿ ಕಾಣಿಸಿಕೊಂಡ ಕೆಎಫ್‌ಡಿ ಪ್ರಕರಣ ಪ್ರಸಕ್ತ ವರ್ಷದ ಜನವರಿಯಲ್ಲಿ ಹೆಚ್ಚಾಗುತ್ತಾ ಸಾಗಿತು. ಶಿವಮೊಗ್ಗ ಜಿಲ್ಲೆಯ ಸಾಗರ, ತೀರ್ಥಹಳ್ಳಿ, ಹೊಸನಗರ ತಾಲೂಕಿನ ಹಳ್ಳಿಗಳಲ್ಲಿ ಈ ತನಕ 42 ಪ್ರಕರಣಗಳು ವರದಿ ಯಾಗಿದ್ದು ಒಬ್ಬರು ಮೃತಪಟ್ಟಿದ್ದಾರೆ. ಚಿಕ್ಕಮಗಳೂರಿನ ಕೊಪ್ಪ, ಎನ್‌.ಆರ್‌. ಪುರ, ಶೃಂಗೇರಿ ತಾಲೂಕಿನ ಕೆಎಫ್‌ಡಿ ಪೀಡಿತ ಗ್ರಾಮಗಳಲ್ಲಿ 43 ಪ್ರಕರಣಗಳು ವರದಿಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ.

Advertisement

ಉ.ಕ. ಜಿಲ್ಲೆಯ ಅಂಕೋಲಾ, ಸಿದ್ದಾಪುರ, ಶಿರಸಿ ತಾಲೂಕಿನ ಗ್ರಾಮಗಳಲ್ಲಿ 46 ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಸಿದ್ದಾಪುರ ತಾಲೂಕಿನ ಕೊರ್ಲಕೈ ಪ್ರಾಥಮಿಕ ಆರೋಗ್ಯ ಕೇಂದ್ರವೇ ಈ ಬಾರಿ ಹಾಟ್‌ಸ್ಪಾಟ್‌ ಆಗಿ ಗುರುತಿಸಿಕೊಂಡಿದೆ.

30ಕ್ಕೂ ಅಧಿಕ ಪ್ರಕರಣಗಳು ಇದೊಂದೇ ಕೇಂದ್ರದಲ್ಲಿ ಕಂಡುಬಂದಿವೆ. ಇಬ್ಬರು ಮೃತಪಟ್ಟಿದ್ದಾರೆ. ಉಡುಪಿಯಲ್ಲಿ ಒಂದು ಪ್ರಕರಣ ವರದಿಯಾಗಿದೆ. ಬೆಳಗಾವಿಯಲ್ಲೂ ಸ್ಯಾಂಪಲ್‌ ಪರೀಕ್ಷೆ ಮಾಡಲಾಗಿದ್ದು, ಪಾಸಿಟಿವ್‌ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next