Advertisement

KFD: ಈ ವರ್ಷದ ಮೊದಲ ಪ್ರಕರಣ ಪತ್ತೆ; ಇಬ್ಬರಿಗೆ ಪಾಸಿಟಿವ್

10:21 PM Jan 13, 2025 | Shreeram Nayak |

ಶಿವಮೊಗ್ಗ: ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಇಬ್ಬರು ವ್ಯಕ್ತಿಗಳಿಗೆ ಕೆಎಫ್ಡಿ ಪಾಸಿಟಿವ್ ಬಂದಿದ್ದು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಈ ವರ್ಷದ ಮೊದಲ ಪ್ರಕರಣಗಳಾಗಿವೆ.

Advertisement

ತೀರ್ಥಹಳ್ಳಿ ತಾಲ್ಲೂಕಿನ ದೇವಂಗಿ ಭಾಗದ 63 ವರ್ಷದ ವ್ಯಕ್ತಿಗೆ ಹಾಗೂ ಚಿಕ್ಕಮಗಳೂರು ಬಾಳೆಹೊನ್ನೂರಿನ ಕಡಬಗೆರೆಯ 25 ವರ್ಷದ ವ್ಯಕ್ತಿಗೆ ಪಾಸಿಟಿವ್ ಬಂದಿದೆ.

ಜಿಲ್ಲಾಡಳಿತಗಳು ಪಾಸಿಟಿವ್ ವರದಿಯನ್ನು ಬಿಡುಗಡೆಗೊಳಿಸಿ ಆ ಭಾಗದ ಸಾರ್ವಜನಿಕರನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.