Advertisement

ಮಂಗನ ಸೇಡು : 22 ಕಿ.ಮೀ ಬಿಟ್ಟು ಬಂದ್ರು ಲಾರಿಯಲ್ಲಿ ಮತ್ತೆ ಹುಡುಕಿಕೊಂಡು ಬಂದ ಕೋತಿ

10:29 AM Sep 22, 2021 | Team Udayavani |

ಚಿಕ್ಕಮಗಳೂರು: ಇತ್ತೀಚೆಗೆ ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ ಆಟೋ ಚಾಲಕ ತನ್ನನ್ನು ರೇಗಿಸಿದ ಎಂಬ ಕಾರಣಕ್ಕೆ ಆತನ ಮೇಲೆ ಕೋತಿಯೊಂದು ದಾಳಿ ಮಾಡಿತ್ತು. ಇದರಿಂದ ಗಾಬರಿಗೊಂದ ಅರಣ್ಯ ಸಿಬ್ಬಂದಿ ಆ ಕೋತಿಯನ್ನು 22 ಕಿ. ಮೀ ದೂರದಲ್ಲಿನ ಚಾರ್ಮಾಡಿ ಘಾಟಿಯ ದಟ್ಟ ಅರಣ್ಯದಲ್ಲಿ ಬಿಡಲಾಗಿತ್ತು. ಆದ್ರೆ ಮತ್ತೆ ಅದೇ ಕೋತಿ ನಾಲ್ಕೇ ದಿನಕ್ಕೆ ಗೊಬ್ಬರದ ಲಾರಿ ಏರಿ ಪೇಟೆ ಸೇರಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

Advertisement

ಕಳೆದ ಸೆಪ್ಟೆಂಬರ್ 16 ರಂದು ಕೊಟ್ಟಿಗೆಹಾರ ಸಮೀಪದ ತುರುವೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿದ್ದ ಕೋತಿಯನ್ನು ಹಿಡಿಯಲು ಹೋದಾಗ ಅರಣ್ಯ ಇಲಾಖೆ ಸಿಬ್ಬಂದಿ ಜೊತೆ ಆಟೋ ಚಾಲಕ ಕೂಡ ಹೋಗಿ ಕೋತಿಯನ್ನು ರೇಗಿಸಿದ್ದರು. ಇದರಿಂದ ರೊಚ್ಚಿಗೆದ್ದ ಕೋತಿ ಆತನ ಕೈ ಕಚ್ಚಿ ದಾಳಿ ಮಾಡಿತ್ತು.

ಇದಾದ ನಂತರ ತನ್ನ ಸೇಡನ್ನು ಬಿಡದ ಕೋತಿ ಅವನನ್ನು ಹುಡುಕಿಕೊಂಡು ಆಟೋ ನಿಲ್ದಾಣಕ್ಕೆ ಬಂದು ಅವನ ಆಟೋ ಟಾಪ್ ಕಿತ್ತು ಹಾಕಿತ್ತು ನಂತರ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು 18 ಗಂಟೆ ಕಾರ್ಯಾಚರಣೆ ನಡೆಸಿ ಕೋತಿಯನ್ನು ಸೆರೆ ಹಿಡಿದು ಕೋತಿಯನ್ನು ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿ ಬಂದಿದ್ದರು.

ಇದೀಗ ಮತ್ತೆ ಗೊಬ್ಬರದ ಲಾರಿ ಏರಿ ಕೊಟ್ಟಿಗೆಹಾರಕ್ಕೆ ಕೋತಿ ಮೆಂಟ್ರಿ ಕೊಟ್ಟಿದೆ.  ಇದನ್ನು ಕಂಡ ಸಾರ್ವಜನಿಕರು ಮತ್ತೆ ಗಾಬರಿಗೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next