Advertisement
ಎನ್‌ಎಂಪಿಎ ವತಿಯಿಂದ ಮಂಗಳೂರಿನಲ್ಲಿ ಸೋಮವಾರ ನಡೆದ “ಹಡಗುಗಳಿಗೆ ಕಡಲ ಸಂಕಟ’ ಎಂಬ ವಿಷಯದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
Related Articles
ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ನವಮಂಗಳೂರು ಬಂದರಿನ ಅಭಿವೃದ್ಧಿ ಸ್ಥಳೀಯ ಅಭಿವೃದ್ಧಿಗೆ ಪೂರಕ. ರಾಜ್ಯ ರಾಜಧಾನಿ ಯೊಂದಿಗೆ ಮಂಗಳೂರನ್ನು ಸಂಪರ್ಕಿಸುವ ರಾ.ಹೆ. 75ರ ಕಾಮಗಾರಿ ಪೂರ್ಣವಾದಾಗ ಬಂದರು ಸಂಪರ್ಕಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸಲಾಗುವುದು. ಉತ್ತಮ ಸಂಪರ್ಕವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಆದ್ಯತೆ ನೀಡಲಾಗಿದೆ. ಮಂಗಳೂರಿನಲ್ಲಿ ಟ್ರಕ್ ಟರ್ಮಿನಲ್ ಕಾಮಗಾರಿಯ ಪಾಲುದಾರಿಕೆಗೆ ಎನ್‌ಎಂಪಿಎ ಮುಂದೆ ಬಂದಿದೆ ಎಂದರು.
Advertisement
ಸಂಕಷ್ಟದ ಹಡಗುಗಳಿಗೆ ರಕ್ಷಣೆ; ಎಸ್‌ಒಪಿ ರಚನೆಡಾ| ಎ.ವಿ. ರಮಣ ಮಾತನಾಡಿ, ಸಂಕಷ್ಟದಲ್ಲಿರುವ ಹಡಗುಗಳಿಗೆ ನೆರವಾ ಗುವ ನಿಟ್ಟಿನಲ್ಲಿ ಪ್ರಮಾಣಿತ ಕಾರ್ಯಾಚರಣೆಯ ವಿಧಾನ (ಸ್ಟಾಂಡರ್ಡ್ ಅಪರೇಟಿಂಗ್ ಪ್ರೊಸೀಜರ್ -ಎಸ್‌ಒಪಿ)ವನ್ನು ಹೊರತಂದಿದ್ದು, ಇದನ್ನು ಡೈರೆಕ್ಟರೇಟ್ ಜನರಲ್ ಆಫ್ ಶಿಪ್ಪಿಂಗ್, ಅಡಿಶನಲ್ ಸೆಕ್ರಟರಿ ಶಿಪ್ಪಿಂಗ್, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಗಮನಕ್ಕೆ ತರಲಾಗಿದೆ. ಈ ಎಸ್‌ಒಪಿಯು ಗೊಂದಲವನ್ನು ಪರಿಹರಿಸುವ ಮತ್ತು ಮಾಲಿನ್ಯವನ್ನು ನಿಯಂತ್ರಿಸಲು ಸಹಕರಿಸಲಿದೆ. ಇದರಿಂದ ಸಂಚಾರ ಯೋಗ್ಯವಲ್ಲದ ಹಡಗುಗಳನ್ನು ತಡೆ ಯಲು ಸಾಧ್ಯವಾಗಲಿದೆ ಎಂದು ಹೇಳಿದರು. ಮುಂದಿನ ವರ್ಷ ಸುವರ್ಣ ಮಹೋತ್ಸವ
ರಾಷ್ಟ್ರಪತಿ/ ಪ್ರಧಾನಿಯಿಂದ ಉದ್ಘಾಟನೆ
ಮಂಗಳೂರು: ನವಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ಮುಂದಿನ ವರ್ಷ ಸುವರ್ಣ ಮಹೋತ್ಸವ ಆಚರಿಸಲಿದ್ದು ಇದರ ಅಂಗವಾಗಿ ವಿವಿಧ ಮೂಲಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದರ ಉದ್ಘಾಟನೆಯನ್ನು ಮುಂದಿನ ಜನವರಿಯಲ್ಲಿ ಪ್ರಧಾನಮಂತ್ರಿ ಅಥವಾ ರಾಷ್ಟ್ರಪತಿಯವರು ನೆರವೇರಿಸಲಿದ್ದಾರೆ ನವ ಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷ ಡಾ| ಎ.ವಿ. ರಮಣ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಸೋಮವಾರ ನಡೆದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಎನ್‌ಎಂಪಿಎ ವ್ಯಾಪ್ತಿಯ ಕೆ.ಕೆ. ಗೇಟ್‌ನ ಆಧುನೀಕರಣ, ಕೆ.ಕೆ. ಗೇಟ್ ಮತ್ತು ರಾಷ್ಟ್ರೀಯ ಹೆದ್ದಾರಿ 66 ಮಧ್ಯೆ ರಸ್ತೆಯ ಚತುಷ್ಪಥ ಯೋಜನೆ ಹಾಗೂ ವಾಹನಗಳನ್ನು ಸ್ಕ್ಯಾನಿಂಗ್ ಮಾಡಲು ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (ಆರ್‌ಎಫ್ಐಡಿ)ನ ಆರಂಭ ಸಹಿತ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು. ನವ ಮಂಗಳೂರು ಬಂದರು 2023-24ರಲ್ಲಿ 45.71 ಎಂಎಂಟಿ ಸರಕುಗಳನ್ನು ನಿರ್ವಹಿಸಿದ್ದು, 2022-23ರಲ್ಲಿ ಇದು 41.41 ಎಂಎಂಟಿ ಆಗಿತ್ತು. ಕಳೆದ ವರ್ಷಕ್ಕಿಂತ ಸರಕು ನಿರ್ವಹಣೆಯಲ್ಲಿ ಶೇ. 10.36 ಬೆಳವಣಿಗೆ ದಾಖಲಿಸಿದೆ. 2023-24ನೆ ಸಾಲಿನ ಅವಧಿಯಲ್ಲಿ 833 ಕೋಟಿ ರೂ.ಗಳ ಕಾರ್ಯನಿರ್ವಹಣಾ ಆದಾಯ ದಾಖಲಿಸಿದ್ದರೆ, ಕಳೆದ ಅವಧಿಯಲ್ಲಿ ಇದು 743 ಕೋಟಿ ರೂ.ಆಗಿತ್ತು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬಂದರಿನಲ್ಲಿ 277 ಕಂಟೈನರ್ ಹಡಗು ಗಳನ್ನು ನಿರ್ವಹಣೆ ಮಾಡಲಾಗಿದೆ. ವಿಲಾಸಿ ಪ್ರವಾಸಿ ಹಡಗುಗಳನ್ನು ಕೂಡ ನವಮಂಗಳೂರು ಬಂದರು ನಿರ್ವಹಣೆ ಮಾಡುತ್ತಿದ್ದು, ಪ್ರತೀ ವರ್ಷ ಸುಮಾರು 8 ಸಾವಿರ ಅಂತಾರಾಷ್ಟ್ರೀಯ ಪ್ರವಾಸಿಗರು ಭೇಟಿ ನೀಡುತ್ತಾರೆ ಎಂದರು. ಮುಂದಿನ ವರ್ಷ 50 ಎಂಎಂಟಿ ಸರಕು ಸಾಗಾಟ
ರಾಜ್ಯದ ವಿವಿಧ ಭಾಗಗಳಿಗೆ ಸಂಪರ್ಕ ಒದಗಿಸುವ ಪಶ್ಚಿಮ ಘಟ್ಟ ಭಾಗದ ರಸ್ತೆಗಳ ಅಭಿವೃದ್ಧಿ ಕಾರ್ಯ ಮುಂದಿನ ವರ್ಷಕ್ಕೆ ಪೂರ್ಣಗೊಳ್ಳುವುದರೊಂದಿಗೆ ಹೊಸ ನಿರೀಕ್ಷೆ ಆರಂಭವಾಗಿದೆ. ಬಂದರಿನ ಸುವರ್ಣ ಮಹೋತ್ಸವದ ಸಂಭ್ರಮದೊಂದಿಗೆ 2024-25ರಲ್ಲಿ ಎನ್‌ಎಎಂಪಿಎಯಿಂದ ಸರಕು ನಿರ್ವಹಣೆ 50 ಮಿಲಿಯ ಮೆಟ್ರಿಕ್ ಟನ್ (ಎಂಎಂಟಿ) ದಾಟುವ ಭರವಸೆ ಇದೆ ಹಾಗೂ ಬಂದರಿಗೆ ರಸ್ತೆ ಸಂಪರ್ಕವು ಸರ್ವ ಋತು ರಸ್ತೆಯಾಗಿ ಅಭಿವೃದ್ಧಿ ಹೊಂದಿದಾಗ 60ರಿಂದ 70 ಮಿಲಿಯ (ಈಗ 45.71) ಎಂಎಂಟಿ ಸರಕು ನಿರ್ವಹಣೆಯ ಸಾಮರ್ಥ್ಯ ದೊರೆಯಲಿದೆ ಎಂದು ಡಾ| ರಮಣ ತಿಳಿಸಿದರು.