Advertisement

ಬೌದ್ಧ ಅಧ್ಯಯನಕ್ಕೆ ಮಂಗೋಲಿಯನ್ನರ ಆಸಕ್ತಿ

10:48 PM Dec 18, 2019 | Lakshmi GovindaRaj |

ಮುಂಡಗೋಡ: ಬೌದ್ಧ ಧರ್ಮ ಅಧ್ಯಯ ನದಲ್ಲಿ ಮಂಗೋಲಿಯನ್ನರು ಹೆಚ್ಚಿನ ಆಸಕ್ತಿ ವಹಿಸುತ್ತಿದ್ದು ತಾವೂ ಅವರಂತೆ ಬೌದ್ಧ ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಟಿಬೆಟಿಯನ್ನರ ಧರ್ಮಗುರು ದಲೈಲಾಮಾ ಕಿವಿಮಾತು ಹೇಳಿದರು.

Advertisement

ತಾಲೂಕಿನ ಟಿಬೆಟಿಯನ್‌ ಲಾಮಾ ಕ್ಯಾಂಪ್‌ ನಂ.1ರಲ್ಲಿನ ಗಾಡೆನ್‌ ಶಾರ್ಜೆ ಬೌದ್ಧ ಮಂದಿರದಲ್ಲಿ ನಡೆದ ಸಭೆಯಲ್ಲಿ ಬೌದ್ಧ ಸನ್ಯಾಸಿಗಳನ್ನುದ್ದೇಶಿಸಿ ಮಾತನಾಡಿ ದರು. ಬುದ್ಧ ಬೋಧಿಸಿದ ಸತ್ಯ, ಶಾಂತಿ, ಅಹಿಂಸೆಯನ್ನು ಬೌದ್ಧ ಧರ್ಮದ ಶಿಕ್ಷಣ ನೀಡುವ ಎಲ್ಲಾ ವಿದ್ಯಾಲಯಗಳಲ್ಲಿ ಅಳವಡಿಸಿ ಶಿಕ್ಷಣ ನೀಡಲಾಗುತ್ತಿದೆ. 2 ಹಾಗೂ 3ನೇ ಶತಮಾನದಲ್ಲಿ ಆರ್ಯದೇವ ಬೌದ್ಧ ಧರ್ಮದ ಆಚಾರ್ಯರಲ್ಲಿ ಒಬ್ಬರಾಗಿದ್ದರು. ಅವರು ಬೌದ್ಧ ಧರ್ಮದ ಬಗ್ಗೆ ಹಲವಾರು ಗ್ರಂಥ ಬರೆದಿದ್ದಾರೆ. ಬೌದ್ಧ ಧರ್ಮದ ಬೆಳವಣಿಗೆಯಲ್ಲಿ ಅವರು ಮಹತ್ತರ ಪಾತ್ರ ವಹಿಸಿದ್ದರು ಎಂದರು.

ಲಾಮಾಕ್ಯಾಂಪ್‌ ನಂ.2ರಲ್ಲಿನ ಡ್ರೆಪುಂಗ್‌ ಲಾಚಿ ಬೌದ್ಧ ಮಂದಿರದಿಂದ ಲಾಮಾಕ್ಯಾಂಪ್‌ ನಂ.1ರಲ್ಲಿನ ಗಾಡೇನ್‌ಲಾಚಿ ಬೌದ್ಧ ಮಂದಿರಕ್ಕೆ ಆಗಮಿಸಿದರು. ಈ ವೇಳೆ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಅವರಿಗೆ ಸ್ವಾಗತ ಕೋರಲಾಯಿತು. ಅಲ್ಲಿ ಪೂಜೆ ಸಲ್ಲಿಸಿದ ದಲೈಲಾಮಾ ಬಳಿಕ ಗಾಡೇನ್‌ ಶಾರ್ಜೆ ಬೌದ್ಧ ಮಂದಿರಕ್ಕೆ ತೆರಳಿ ಆಶೀರ್ವಚನ ನೀಡಿದರು. ಮೂರು ದಿನ ಗಾಡೇನ್‌ ಶಾರ್ಜೆ ಬೌದ್ಧ ಮಂದಿರದಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ದೂರದಿಂದಲೇ ಮೂರ್ತಿಪೂಜೆ: ಬೌದ್ಧ ಧರ್ಮ ಪ್ರಚಾರಕ ಹಾಗೂ ಮಹಾರಾಜ ಮಹಾನ್‌ ಮೇಧಾವಿಯಾಗಿದ್ದ ಪದ್ಮಸಂಭವ ಮಹಾರಾಜರ ಮೂರ್ತಿಯನ್ನು ಟಿಬೆಟಿಯನ್ನರ ಧರ್ಮಗುರು ದಲೈಲಾಮಾ ಬುಧವಾರ ಬೆಳಗ್ಗೆ ಉದ್ಘಾಟಿಸಬೇಕಿತ್ತು. ಆದರೆ ಎರಡು ನೂರು ಮೀಟರ್‌ ದೂರದ ರಸ್ತೆ ಮೇಲೆ ವಾಹನದಲ್ಲಿ ಕುಳಿತುಕೊಂಡೇ ದಲೈಲಾಮಾ, ಪದ್ಮಸಂಭವ ಮೂರ್ತಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಗಾಂಡೆನ್‌ ಲಾಚಿ ಬೌದ್ಧ ಮಂದಿರಕ್ಕೆ ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next