ದೇವನಹಳ್ಳಿ: ದೀಪಾವಳಿ ಹಬ್ಬ ಆಚರಿಸಲು ಜಿಲ್ಲೆಯ ಜನತೆ ಉತ್ಸುಕರಾಗಿದ್ದಾರೆ. ಮಹಿಳೆಯರು ಮನೆ ಮುಂದೆ ದೀಪ ಹಚ್ಚಲು ಹಣತೆಗಳ ಖರೀದಿಯಲ್ಲಿ ತೊಡಗಿದ್ದಾರೆ. ಜೇಡಿ ಮಣ್ಣಿನಿಂದ ತಯಾರಿಸಿದ ಬಣ್ಣ ಬಣ್ಣದ ಹಣತೆ ಹಾಗೂ ದೀಪಾಲಂಕಾರಗಳು ಹತ್ತಾರು ಮಾದರಿಯ ಹಣತೆಗಳು ಸೇರಿದಂತೆ ವಿವಿಧ ಬಗೆಯ ಹಣತೆಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.
ದೀಪಾವಳಿ ಎಂದರೆ, ದೀಪಗಳ ಸಾಲು. ಕಾರ್ತಿಕ ಮಾಸ ಮುಗಿಯುವವರೆಗೂ ದೀಪ ಹಚ್ಚುವುದು ಸಂಪ್ರದಾಯ. ಭಾರತದಲ್ಲಿ ಧಾರ್ಮಿಕ, ಐತಿಹಾಸಿಕ ಪರಂಪರೆಯನ್ನು ಮಹತ್ವದ್ದಾಗಿದೆ. ವಿಶೇಷವಾಗಿ ಮಣ್ಣಿನ ಹಣತೆಗಳು ಕಣ್ಮನ ಸೆಳೆಯುತ್ತಿದೆ. ನಗರದಲ್ಲಿ ಹಣತೆಗಳ ಖರೀದಿ ಜೋರಾಗಿ ನಡೆದಿದೆ. ಹತ್ತಾರು ಮಾದರಿಯ ಮನಸೆಳೆಯುವ ಹಣತೆಗಳು ಮಾರಾಟಕ್ಕಿಡಲಾಗಿದೆ. ಹಣತೆಗಳ ದರ ಸ್ವಲ್ಪ ಹೆಚ್ಚಾಗಿದ್ದರೂ, ಹಬ್ಬ ಆಚರಿಸಲು ಜನ ಖರೀದಿಯಲ್ಲಿ ತೊಡಗಿದ್ದಾರೆ. ನಗರದ ವಿವಿಧ ಕಡೆಗಳಲ್ಲಿ ತಳ್ಳುವ ಗಾಡಿಗಳಲ್ಲಿ, ರಸ್ತೆ ಬದಿಗಳಲ್ಲಿ ಹಣತೆಗಳ ಮಾರಾಟ ಜೋರಾಗಿಯೇ ಇದೆ.
ಹಸಿರು ಪಟಾಕಿಗೆ ಆದ್ಯತೆ: ಸಾಮಾನ್ಯವಾಗಿ ಮಣ್ಣಿನ ದೀಪ, ಪಿಂಗಾಣಿ ದೀಪ ಹೆಚ್ಚಿನ ಬೇಡಿಕೆ ಇದ್ದು, ಮಣ್ಣಿನ ಅಲಂಕಾರಿಕ ವಸ್ತುಗಳು 5 ರೂ.ಯಿಂದ 150 ರೂ.ಗಳವರೆಗೆ ವ್ಯಾಪಾರ ಮಾಡಲಾಗುತ್ತಿತ್ತು. ಪ್ಲಾಸ್ಟಿಕ್ ವಸ್ತುಗಳ ಭರಾಟೆಯಲ್ಲಿ ಜೇಡಿ ಮಣ್ಣಿನಿಂದ ತಯಾರಿಸಿದ ಹಣತೆ ಗ್ರಾಹಕರಿಗೆ ಇಷ್ಟವಾಗುತ್ತಿದೆ.
ಇದನ್ನೂ ಓದಿ;- ಸಾಹಿತಿ, ಕಲಾವಿದರ ಮನೆಗೆ ಭೇಟಿ-ಸನ್ಮಾನ
ಈಗಾಗಲೇ ಜಿಲ್ಲಾಡಳಿತ ಪಟಾಕಿ ಮಾರಾಟ ಮತ್ತು ಸುಡುವುದನ್ನು ನಿಷೇಧಿಸಿದೆ. ಹಸಿರು ಪಟಾಕಿಗೆ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದೆ. ವಿವಿಧ ಬಗೆಯ ದೀಪಗಳು: ವಿವಿಧ ವಿನ್ಯಾಸದ ಹಣತೆ ತಯಾರಿಸುವುದರಲ್ಲದೆ, ತೆಂಗಿನ ಕಾಯಿ ಮಾದರಿ ಯ ಆಕಾರ ಅದರಲ್ಲಿ ದೀಪ, ತಳಸಿಕಟ್ಟೆ, ಬೃಂದಾ ವನ, ತಟ್ಟೆಯ ಹಣತೆ, ಒಂದು ದೀಪದಲ್ಲಿ 2 ಹಾಗೂ 5 ಕಡೆ ಬತ್ತಿ ಹಾಕುವ ರೀತಿಯಲ್ಲಿ ಹಣತೆಯ ವಿನ್ಯಾಸ, ಮನೆ ಬಾಗಿಲಿ ನಲ್ಲಿ ದೀಪವಿಟ್ಟಾಗ ಗಾಳಿಯಲ್ಲಿ ಹಾರಿ ಹೋಗ ದಂತೆ ಪುರಾತನ ಕಾಲದ ಲ್ಯಾಂಪ್ ರೀತಿಯ ದೀಪ ಗಳು ಗಮನ ಸೆಳೆಯುತ್ತಿದೆ. ಮೂಲತಃ ರಾಜ ಸ್ಥಾನ, ಜೋಧ್ ಪುರ, ಇತರೆ ಭಾಗಗಳಿಂದ ದೀಪಗಳನ್ನು ತಂದು ಮಾರಾಟಕ್ಕಿಡಲಾಗಿದೆ. ಕರ್ನಾಟಕದಲ್ಲಿಯೂ ಸಹ ವಿವಿಧ ಅಲಂಕಾರಿಕ ದೀಪಗಳ ಮಾರಾಟವಾಗುತ್ತಿದೆ.
“ದೀಪಾವಳಿ ಹಬ್ಬವನ್ನು ಸರಳವಾಗಿ ಆಚರಿಸಬೇಕು. ಹಸಿರುವ ಪಟಾಕಿ ಬಳಸಬೇಕು. ಸುರಕ್ಷತಾ ಕ್ರಮ ಪಾಲಿಸಿ, ಮಾಲಿನ್ಯ ರಹಿತ ದೀಪಾವಳಿಯನ್ನು ಆಚರಿಸಬೇಕು. ಮನೆಗಳ ಹತ್ತಿರ ಸಾರ್ವಜನಿಕರು ಹಣತೆಗಳ ದೀಪವನ್ನು ಹಚ್ಚಿ ದೀಪಾವಳಿಯನ್ನು ಆಚರಿಸುವಂತೆ ಆಗಬೇಕು. ಜಿಲ್ಲಾಡಳಿತಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ.”
– ಕೆ. ಶ್ರೀನಿವಾಸ್, ಜಿಲ್ಲಾಧಿಕಾರಿ
“ಹಿರಿಯರು ಅನಾದಿ ಕಾಲ ದಿಂದಲೂ ಮಣ್ಣಿನ ಹಣತೆಯಲ್ಲಿ ದೀಪ ಹಚ್ಚಿ ಭಕ್ತಿ ಸಮರ್ಪಿಸುತ್ತಿದ್ದರು. ಅದನ್ನು ಮುಂದುವರಿಸಿಕೊಂಡು ಹೋಗಲು ಜೇಡಿಮಣ್ಣಿನ ಹಣತೆ ಖರೀದಿಸುತ್ತಿದ್ದೇವೆ. ಈ ಬಾರಿ ದೀಪಾವಳಿ ಹಬ್ಬವನ್ನು ಸರಳವಾಗಿ ಆಚರಿಸುತ್ತಿದ್ದೇವೆ.”
– ರೂಪಾ, ಗ್ರಾಹಕಿ