Advertisement
ಪ್ರಧಾನಿ ನರೇಂದ್ರ ಮೋದಿ ಅವರು ದೇಶದ 9 ಕೋಟಿ ರೈತ ಬಾಂಧವರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ 18 ಸಾವಿರಕೋಟಿ ರೂ. ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆಮಧ್ಯಾಹ್ನ 11.45ರಲ್ಲಿ ವರ್ಗಾಯಿಸಿ, ನಂತರ 12ಕ್ಕೆರೈತರನ್ನು ಉದ್ದೇಶಿಸಿ ಮಾತನಾಡಲಿದ್ದು, ಎಲ್ಲ ದೃಶ್ಯ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರವಾಗಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Related Articles
Advertisement
ವಿಜಯ್ ಕುಮಾರ್, ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷಕೆ.ಎಸ್.ನಂಜುಂಡೇಗೌಡ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಜೋಗಿಗೌಡ, ಜಿಲ್ಲಾ ವಕ್ತಾರ ಕೆ.ಕಾಳೇಗೌಡ,ಮಾಧ್ಯಮ ಪ್ರಮುಖ್ ಎಂ.ಕೆ.ನಾಗಾನಂದ್ ಹಾಜರಿದ್ದರು.
ರೈತರ ಹೋರಾಟ ದಾರಿ ತಪ್ಪಿದೆ : ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ರೈತರಹೋರಾಟವಲ್ಲ. ರೈತರ ಹೋರಾಟ ದಾರಿ ತಪ್ಪಿದ್ದು, ಎಪಿಎಂಸಿ ಹಾಗೂ ಭೂ ಸುಧಾರಣೆ ಕಾಯ್ದೆಯಿಂದ ದಲ್ಲಾಳಿಗಳಿಗೆ ನಷ್ಟವಾಗಲಿದೆ. ಆ ದೃಷ್ಟಿಯಿಂದ ರೈತರನ್ನು ಎತ್ತಿಕಟ್ಟಿ ಹೋರಾಟ ಮಾಡಲಾಗುತ್ತಿದೆ.ಹೋರಾಟ ದಾರಿ ತಪ್ಪುತ್ತಿರುವ ಬಗ್ಗೆ ಅಲ್ಲಿನ ರೈತರೇ ಹೇಳಿದ್ದಾರೆ.ಕೇಂದ್ರದ ಮಂತ್ರಿಗಳು ಹಲವಾರು ಬಾರಿ ಮಾತುಕತೆ ನಡೆಸಿದ್ದರೂ ಪ್ರಯೋಜನವಾಗಿಲ್ಲ. ಕಾಯ್ದೆಗಳಿಗೆ ತಿದ್ದುಪಡಿ ತರುತ್ತೇವೆ ಎಂದರೂ ಕೇಳುತ್ತಿಲ್ಲ. ಸಂಪೂರ್ಣ ಕಾಯ್ದೆ ರದ್ದು ಮಾಡುವಂತೆ
ಒತ್ತಾಯಿಸುತ್ತಿದ್ದಾರೆ. ಅಲ್ಲದೆ, ನಕ್ಸಲ್ ಪ್ರಕರಣಗಳಿರುವವರನ್ನು ಬಿಡುಗಡೆ ಮಾಡಬೇಕೆಂಬಒತ್ತಾಯವನ್ನೂ ಸೇರಿಸಿದ್ದಾರೆ. ಇದು ರಾಜಕೀಯಪ್ರೇರಿತವಾಗಿದೆ. ಇದನ್ನು ರೈತರ ಹೋರಾಟ ಎಂದುಹೇಗೆ ಹೇಳಲು ಸಾಧ್ಯ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಪ್ರಶ್ನಿಸಿದರು.
ಬಿಜೆಪಿ-ಜೆಡಿಎಸ್ ವಿಲೀನ ಚರ್ಚೆ ಇಲ್ಲ :
ಬಿಜೆಪಿ-ಜೆಡಿಎಸ್ ವಿಲೀನಗೊಳ್ಳಲಿವೆ ಎಂಬ ಸುದ್ದಿ ಗಳು ಸುಳ್ಳು. ಆ ರೀತಿಯ ಯಾವುದೇ ಚರ್ಚೆಗಳು ನಡೆದಿಲ್ಲ. ವಿಷಯಾಧಾರಿತ ಬೆಂಬಲ ನೀಡಲಾಗುವುದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರ ಸ್ವಾಮಿ ಅವರೇ ಸ್ಪಷ್ಟಪಡಿಸಿದ್ದಾರೆ. ಇದು ಅನಗತ್ಯ ಎಂದು ಅಶ್ವತ್ಥನಾರಾಯಣಹೇಳಿದರು.
ಸಚಿವರನ್ನು ಕೇಳಿ: ಕೋವಿಡ್ ಸಂದರ್ಭದಲ್ಲಿ ರೇಷ್ಮೆ ಬೆಳೆಗಾರರಿಗೆಕೆ.ಜಿ. ರೇಷ್ಮೆಗೂಡಿಗೆ 50 ರೂ. ಪ್ರೋತ್ಸಾಹ ಧನ ನೀಡುತ್ತೇವೆ ಎಂದು ಹೇಳಿದ್ದರು. ಆದರೆ, ಇದುವರೆಗೂ ಜಿಲ್ಲೆಯ ಯಾವೊಬ್ಬ ರೈತರಿಗೂ ಹಣ ಬಂದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ನೀವು ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವಕೆ .ಸಿ.ನಾರಾಯಣಗೌಡರನ್ನೇ ಕೇಳಬೇಕು ಎಂದು ಜಾರಿಕೊಂಡರು.