Advertisement
ನೀವು ಉಳಿತಾಯ ಮಾಡಲೇಬೇಕು!ಇಷ್ಟೊಂದು ಖಚಿತವಾಗಿ ಹೇಳ್ಳೋಕೆ ಕಾರಣ ಏನೆಂದರೆ, ಈ ಉಳಿತಾಯ ನಿಮಗಲ್ಲದೇ ಇದ್ದರೂ ಮಕ್ಕಳಿಗಾದರೂ ಮಾಡಲೇಬೇಕು. ಏಕೆ ಎನ್ನಿ, ಪ್ರತಿ ವರ್ಷ ವಿದ್ಯಾಭ್ಯಾಸ ಖರ್ಚು ಶೇ. 5 ರಿಂದ 10ರಷ್ಟು ಏರುತ್ತಿದೆ. ಮನೆಯಲ್ಲಿ ಎರಡು ಮಕ್ಕಳಿದ್ದರೆ ( ನಾಲ್ಕು ವರ್ಷದ ಮಕ್ಕಳು) ವರ್ಷಕ್ಕೆ ಒಂದು ಲಕ್ಷ ಎತ್ತಿಡುವ ಅನಿವಾರ್ಯವಿರುವುದರಿಂದ
ಉಳಿತಾಯದ ಹಾದಿ ತುಳಿಯಲೇ ಬೇಕು.
ಮಕ್ಕಳ ವಿದ್ಯಾಭ್ಯಾಸ ಹೇಗೆ? ಮಗುವಿನ ಬೆಳವಣಿಗೆ ಎಷ್ಟು ವ್ಯಯವಾಗಬಹುದು ಎಂದು ಮೊದಲೇ ಚಿಂತಿಸಿ ಅಗತ್ಯಕ್ಕೆ ತಕ್ಕಂತೆ ಉಳಿತಾಯ ಮಾಡಲೇಬೇಕು. ಮಕ್ಕಳ ಭವಿಷ್ಯದ ವಿದ್ಯಾಭ್ಯಾಸದ ನೆರವಿಗೆಂದು ನಾನಾ ಬಗೆಯ ಸ್ಕೀಂಗಳಿವೆ. ಮದುವೆಯಾದ ತಿಂಗಳಿಂದಲೇ ಮೂರು ಸಾವಿರದಂತೆ ಆರ್.ಡಿಯಲ್ಲಿ ಉಳಿಸುತ್ತಾ ಬನ್ನಿ. ಮೂರು ವರ್ಷದ ನಂತರ ಮಕ್ಕಳಾಗಿ, ಅದು ಶಾಲೆಗೆ ಸೇರುವ ಹೊತ್ತಿಗೆ ಹೆಚ್ಚಾ ಕಡಿಮೆ ಬಡ್ಡಿ ಸೇರಿಸಿ ಎರಡು ಲಕ್ಷ ಕೈಗೆ ಬರುತ್ತದೆ. ಮಗುವಿನ ಪ್ರಾಥಮಿಕ ಶಿಕ್ಷಣಕ್ಕೆ ಯಾವುದೇ ಅಡ್ಡಿ ಇಲ್ಲ. ಇಂತ ಸಣ್ಣ, ಸಣ್ಣ ಉಳಿತಾಯ ದೊಡ್ಡ ಕಷ್ಟದಲ್ಲಿ ಕೈ ಹಿಡಿಯುತ್ತದೆ. ಇವುಗಳಿಂದ ಟ್ಯಾಕ್ಸ್ ಕನ್ಸೆಶನ್ ಸಿಗುವ ಜತೆಗೆ ಸೇವಿಂಗ್ ಸಹ ಆಗುತ್ತದೆ. ಕೆಲವು ಸ್ಕೀಂಗಳಲ್ಲಿ ಮಗುವಿಗೆ ಎರಡು ವರ್ಷ ಇರುವಾಗ ಕಂತಿನ ಹಣ ನಿಗದಿತವಾಗಿ ಕಟ್ಟಲು ಆರಂಭಿಸಿ 18 ವರ್ಷ ಆಗುವವರೆಗೆ ಪಾವತಿಸುತ್ತ ಬಂದರೆ, ಅದಕ್ಕೆ ಬಡ್ಡಿ, ಬೋನಸ್ ಎಲ್ಲ ಸೇರಿ ಮಕ್ಕಳ ಉನ್ನತ ಶಿಕ್ಷಣಕ್ಕೆ ಒಳ್ಳೆಯ ಆದಾಯವಾಗುತ್ತದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸ ಹೊರೆಯಾಗುವುದಿಲ್ಲ. ಮದುವೆಯ ನಂತರದ ದೊಡ್ಡ ಖರ್ಚು ಮಕ್ಕಳದ್ದು. ಹುಟ್ಟಿದಾಗಿನಿಂದ ಬೆಳೆದು ದೊಡ್ಡವರಾಗುವ ತನಕ ಆದಾಯದ ಶೇ. 20ರಷ್ಟು ಇದಕ್ಕೆ ಮೀಸಲಾಗಿಡಬೇಕು.
Related Articles
ಉಳಿತಾಯಕ್ಕೆ ನೂರಾರು ದಾರಿಗಳಿವೆ. ಆದರೆ ಉಳಿತಾಯ ಮಾಡಬೇಕು ಅನ್ನುವ ಯೋಚನೆ ಮನಸ್ಸಿಗೆ ಬರಬೇಕು ಅಷ್ಟೇ. ಇವತ್ತು ಉಳಿತಾಯ ಮಾಡಿದರೆ ಇವತ್ತೇ ಬದಲಾವಣೆ ಅಸಾಧ್ಯ. ನಮ್ಮ ಅವಶ್ಯಕತೆ ಅನುಗುಣವಾಗಿಯೇ ಉಳಿತಾಯದ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ- ಮುಂದಿನ ವರ್ಷ ಮಗಳು ಮದುವೆಯೋ, ಫೀ ಕಟ್ಟಬೇಕು ಅಂತಿಟ್ಟಿಕೊಳ್ಳಿ. ಇದು ತಕ್ಷಣಕ್ಕೆ ಆಗದ ಕಾರ್ಯ. ಹಾಗಾಗಿ, ವರ್ಷಗಳ ಮೊದಲು ಪೂರ್ವ ಸಿದ್ಧತೆ ಮಾಡಿಕೊಂಡರೆ ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟವೇನಲ್ಲ.
Advertisement
ಹಾಗಾಗಿ, ಮೊದಲು ನಿಮ್ಮ ಎಲ್ಲಾ ಆದಾಯಗಳ ಮೂಲವನ್ನು ಗುಡ್ಡೆ ಹಾಕಿ. ತಿಂಗಳಿಗೆ ಎಷ್ಟು ಕೈಗೆ ಬರುತ್ತಿದೆ. ಎಷ್ಟು ಖರ್ಚಾಗುತ್ತಿದೆ ಎನ್ನುವುದನ್ನು ಪಟ್ಟಿ ಮಾಡಿ. ನೀವು ಮದುವೆ ಆಗದೇ ಇದ್ದರೆ ಹೆಚ್ಚು ಉಳಿತಾಯ ಮಾಡಬಹುದು. ಶೇ.80ರಷ್ಟು ಉಳಿತಾಯ ಮಾಡಿ, ಶೇ.20ರಷ್ಟು ಖರ್ಚು ಮಾಡಲುಬಹುದಾದ ಕಾಲ ಇದು. ಮದುವೆ ಆಗುವ ತನಕ ನೀವು ಎಷ್ಟು ಹಣ ಉಳಿಸಿದ್ದೀರಿ ಎನ್ನುವುದರ ಮೇಲೆ ನಿಮ್ಮ ಮದುವೆ ನಂತರ ಬದುಕು ಆರ್ಥಿಕವಾಗಿ ನೆಮ್ಮದಿಯಾಗಿರುತ್ತದೆ. ಈ ಕಾರಣಕ್ಕೆ ಕೆಲಸಕ್ಕೆ ಸೇರಿ 30ನೇ ವಯಸ್ಸಿಗೆ ಮದುವೆಯಾಗುವುದಾದರೆ 5-6 ವರ್ಷದ ತನಕ ನೀವು ಹಣ ಉಳಿಸಬಹುದು. ನಿಮ್ಮ ಸಂಬಳ 10ಸಾವಿರದಿಂದ ಆರಂಭವಾಗಿ 25ಸಾವಿರಕ್ಕೆ ನಿಂತಿದೆ ಎಂದಿಟ್ಟು ಕೊಳ್ಳಿ. ಸರಾಸರಿ 6 ಸಾವಿರದಿಂದ 15ಸಾವಿರದ ತನಕ ಉಳಿತಾಯ ಮಾಡಿದ್ದೇ ಆದರೆ ಹೆಚ್ಚಾ ಕಡಿಮೆ ಮದುವೆ ಹೊತ್ತಿಗೆ ನಿಮ್ಮ ಕೈಯಲ್ಲಿ ಮೂರು, ನಾಲ್ಕು ಲಕ್ಷ ಇರುತ್ತದೆ.
ಯಾವುದು ಸೇಫ್?ಹೀಗೊಂದು ಲೆಕ್ಕ ಹಾಕೋಣ. ಬ್ಯಾಂಕಿನ ಆರ್‌ಡಿ ಖಾತೆ ಬಹಳ ಸೇಫ್. ಇದು 10ವರ್ಷಕ್ಕೆ ಮಾತ್ರ. ಪ್ರತಿ ತಿಂಗಳು ನೀವು 3 ಸಾವಿರ ಹಾಕಿದರೆ 10 ವರ್ಷಕ್ಕೆ ಶೇ.9.5ರ ಬಡ್ಡಿ ದರದಲ್ಲಿ 6ಲಕ್ಷ ಸಿಗುತ್ತದೆ. ಇದನ್ನು ಉಳಿದ ಐದು ವರ್ಷಕ್ಕೆ ಕ್ಯಾಶ್ ಸರ್ಟಿಫಿಕೆಟ್ ಕೊಂಡರೆ 15 ವರ್ಷದ ಹೊತ್ತಿಗೆ ಬಡ್ಡಿ ಎಲ್ಲ ಸೇರಿ ಸುಮಾರು 9ಲಕ್ಷದ 60ಸಾವಿರ ಹಣ ಸಿಗುತ್ತದಂತೆ. ಇದರಿಂದ ಮದುವೆಯ ಆರಂಭದ ದಿನಗಳಲ್ಲಿ ಇಂಥ ಪ್ಲಾನುಗಳನ್ನು ಮಾಡಿದರೆ ನಾಲ್ಕು, ಐದು ವರ್ಷದೊಳಗೆ ನೀವು ಆರ್ಥಿಕವಾಗಿ ಸಬಲರಾಗಬಹುದು. ಇದರ ಜೊತೆಗೆ ಚಿನ್ನದ ಮೇಲಿನ ಹೂಡಿಕೆಯನ್ನು ಒಳ್ಳೆಯದೆ. ಆದರೆ ಆದರೆ ಇದು ದೀರ್ಘವಧಿಯ ಹೂಡಿಕೆಯಾಗಿರಲಿ. ಇತ್ತೀಚಿಗೆ ಅಲ್ಪಾವಧಿಯ ಹೂಡಿಕೆಯಾಗ ಚಿನ್ನ ಅಷ್ಟೊಂದು ಯಶಸ್ವಿಯಾಗಿಲ್ಲ. ತತ್‌ಕ್ಷಣದ ಲಾಭ ನಿರೀಕ್ಷೆ ಇದರಿಂದ ಅಸಾಧ್ಯ. – ಉಳಿಸೊಪ್ಪಿನ ಮಠ