Advertisement

ಭೂಮಿಗೆ ಯಾವಾಗಲೂ ಚಿನ್ನದ ಬೆಲೆ ಇರುತ್ತೆ!

08:18 PM Dec 14, 2020 | Suhan S |

ಸ್ವಲ್ಪ ಹಣವಿದೆ. ಅದನ್ನು ಎಲ್ಲಿ ಹೂಡಿಕೆ ಮಾಡಿದರೆ ಒಳ್ಳೆಯದು?- ಹೀಗೊಂದು ಪ್ರಶ್ನೆಯನ್ನು ಹಲವರು ಕೇಳುವುದುಂಟು. ನಮ್ಮಲ್ಲಿ ಇರುವ ಹಣವನ್ನು ಮತ್ತಷ್ಟು ಹೆಚ್ಚು ಮಾಡಿಕೊಳ್ಳಲು ಇರುವ ದಾರಿ ಯಾವುದು ಎಂಬುದನ್ನು ಪರೋಕ್ಷವಾಗಿ ಕೇಳುವ ರೀತಿ ಇದು.

Advertisement

ರಾಷ್ಟ್ರೀಕೃತ ಬ್ಯಾಂಕ್‌- ಪೋಸ್ಟ್ ಆಫೀಸ್‌ಗಳಲ್ಲಿನ ಉಳಿತಾಯ ಖಾತೆ ಅಥವಾ ಫಿಕ್ಸೆಡ್‌ ಡಿಪಾಸಿಟ್‌ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ, ಅದು ದುಪ್ಪಟ್ಟಾಗುವುದಿಲ್ಲ, ಆದರೆ, ಭದ್ರವಾಗಿ ಇರುತ್ತದೆ. ಪ್ರತಿ ವರ್ಷವೂ ಇಂತಿಷ್ಟು ಎಂದು ಬಡ್ಡಿ ಹಣವೂ ಸಿಗುತ್ತದೆ. ಒಂದು ಕಡೆಯಲ್ಲಿ ಇಡುಗಂಟೂ ಉಳಿಯಬೇಕು, ಇನ್ನೊಂದು ಕಡೆಯಲ್ಲಿ ಲಾಭವೂ ಸಿಗಬೇಕು ಅನ್ನುವವರು, ಹಣ ಹೂಡಿಕೆಗೆ ಆರಿಸಿಕೊಳ್ಳಬೇಕಿರುವ ಸರಳ ಮತ್ತು ಸುಲಭ ಮಾರ್ಗ ಇದು.

ಕೆಲವರಿರುತ್ತಾರೆ. ಅವರಿಗೆ, ಹೇಗಾದರೂ ಮಾಡಿ ಹಣವನ್ನು ದುಪ್ಪಟ್ಟು ಮಾಡಿಕೊಳ್ಳುವ ಆಸೆ. ಅಂಥವರು ಬಡ್ಡಿಗೆ ಸಾಲ ಕೊಡುವ ಬಗ್ಗೆ ಯೋಚಿಸುತ್ತಾರೆ. ಇದು ಯಾವ ರೀತಿಯಿಂದ ಯೋಚಿಸಿದರೂ ಒಳ್ಳೆಯ ಮಾರ್ಗ ಅಲ್ಲ. ಏಕೆಂದರೆ, ಬಡ್ಡಿಗೆ ಹಣ ಕೊಡುವವರು ಅತೀ ಹೆಚ್ಚಿನ ಬಡ್ಡಿಗೆ ಹಣ ನೀಡಿರುತ್ತಾರೆ.

ಅನಿವಾರ್ಯವಾಗಿ ಸಾಲ ಪಡೆದವರು ಅಕಸ್ಮಾತ್‌ ಸಾಲ ವಾಪಸ್‌ ಮಾಡದೇ ಹೋದರೆ, ಅಸಲು ಮತ್ತು ಬಡ್ಡಿ ಎರಡಕ್ಕೂ ಪಂಗನಾಮ ಬೀಳುತ್ತದೆ.ಕೆಲವೊಮ್ಮೆ ಸಾಲ ಕೊಟ್ಟವನು ಮತ್ತು ಪಡೆದವನ ಮಧ್ಯೆ ಜಗಳ ಆಗಿ, ಅದರಿಂದ ಸಾಕಷ್ಟು ಫ‌ಜೀತಿಯಾಗುತ್ತದೆ. ಅಥವಾ ಸಾಲ ವಾಪಸ್‌ ಮಾಡಿದವನು “”ನೆಗೆಟಿವ್‌” ಮಾತುಗಳನ್ನು ಹೇಳಿಕೊಂಡು ಬಂದರೆ, ಅದರಿಂದ ಸಾಲಕೊಟ್ಟವನ ಇಮೇಜ್‌ ಹಾಳಾಗುತ್ತದೆ. ಹಾಗಾಗಿ, ಬಡ್ಡಿಗೆ ಹಣ ಕೊಟ್ಟವ ನೆಮ್ಮದಿಯಿಂದ ಇರಲು ಆಗುವುದಿಲ್ಲ.

ಐದಾರು ವರ್ಷಗಳಕಾಲ ದಿನನಿತ್ಯದ ಖರ್ಚು ನಿಭಾಯಿಸುವಂಥ ಉದ್ಯೋಗವಿದೆ. ಅದರ ಜೊತೆಗೆ ಹೆಚ್ಚುವರಿಯಾಗಿ 20 ಲಕ್ಷ ಅಥವಾಅದಕ್ಕಿಂತ ಹೆಚ್ಚಿನ ಹಣ ಇದೆ ಅಂದುಕೊಳ್ಳಿ;ಅಂತಹ ಸಂದರ್ಭದಲ್ಲಿ ಈ ಹಣದಲ್ಲಿ ಸೈಟ್‌ ಖರೀದಿ ಮಾಡುವುದು ಹಣ ಹೂಡಿಕೆಯಿಂದ ಲಾಭ ಮಾಡಲು ಇರುವ ಅತ್ಯುತ್ತಮ ವಿಧಾನ.

Advertisement

ಏಕೆಂದರೆ, ಹೋಟೆಲ್, ಫ್ಯಾಕ್ಟರಿ,ಕೃಷಿಯಂಥ ಯಾವುದೇ ಕ್ಷೇತ್ರದಲ್ಲಿ ಹಣ ಹೂಡಿಕೆಯಿಂದ ಲಾಸ್‌ ಆಗಬಹುದು. ಆದರೆ, ಭೂಮಿ ಖರೀದಿಯಿಂದ ಮಾತ್ರ ಯಾವಕಾರಣಕ್ಕೂ ಲಾಸ್‌ ಆಗಲು ಸಾಧ್ಯವೇ ಇಲ್ಲ. (ಭೂಮಿ ಖರೀದಿಗೆ ಸಂಬಂಧಿಸಿದ ದಾಖಲೆ ಪತ್ರಗಳು ಬಹಳ ಮುಖ್ಯ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ ಅಲ್ಲವೇ?) ಹೌದು; ನಮ್ಮನ್ನು ಹೊತ್ತಿರುವ ಈ ನೆಲಕ್ಕೆ ಯಾವತ್ತೂ ಚಿನ್ನದ ಬೆಲೆ ಇದ್ದೇ ಇದೆ.

Advertisement

Udayavani is now on Telegram. Click here to join our channel and stay updated with the latest news.

Next