Advertisement

ಮನಿ ಮ್ಯಾನೇಜ್‌ಮೆಂಟ್‌ : ಸೈಟ್‌ ತಗೊಂಡ್ರಾ?

07:42 PM Dec 28, 2020 | Suhan S |

ಬೆಂಗಳೂರು, ಮೈಸೂರು, ಹುಬ್ಬಳ್ಳಿ- ಧಾರವಾಡ, ಶಿವಮೊಗ್ಗ, ದಾವಣಗೆರೆ ಅಥವಾ ಗುಲಬರ್ಗಾ.. ಇಂಥ ನಗರಗಳಲ್ಲಿ ಒಂದು ಸೈಟ್‌ ತಗೋಬೇಕು ಅನ್ನುವುದುಎಲ್ಲರ ಆಸೆ- ಕನಸು. ಕಾರಣವಿಷ್ಟೇ:

Advertisement

ನಮ್ಮದು ಅಂತ ಒಂದು ಸೈಟ್‌ ಇದ್ದರೆ, ಅಲ್ಲಿ ಒಂದು ಮನೆಕಟ್ಟಿಕೊಳ್ಳಬಹುದು. ಅಕಸ್ಮಾತ್‌    ಬದುಕಿನಲ್ಲಿ ಇದ್ದಕ್ಕಿದ್ದಂತೆದೊಡ್ಡ ಕಷ್ಟ ಬಂದರೆ, ಆಸೈಟ್‌ ಮಾರಿ, ಅದರಿಂದಸಿಗುವ ಹಣದನೆರವಿನಿಂದ ಕಷ್ಟವನ್ನುಎದುರಿಸಬಹುದು. ಈಕಾರಣದಿಂದಲೇ ಪ್ರತಿಯೊಬ್ಬರೂ, ಡಿಮ್ಯಾಂಡ್‌ ಇರುವಂಥಪ್ರದೇಶದಲ್ಲಿ ಒಂದು ಸೈಟ್‌ ತಗೊಳ್ಳಬೇಕು ಎಂದು ಆಸೆಪಡುತ್ತಾರೆ.

ಸೈಟ್‌ ತಗೋಬೇಕು ಸರಿ. ಅದಕ್ಕೆ ದುಡ್ಡು ಬೇಡವೇ? ಈಗ ಎಲ್ಲಾ ಊರುಗಳಲ್ಲೂ ಭೂಮಿಗೆ ಬಂಗಾರದ ಬೆಲೆ.ಹಾಗಾಗಿ, ಸೈಟ್‌ ಖರೀದಿ ಎಂಬುದು ಈಗಲಕ್ಷಗಳ ವ್ಯವಹಾರ. ಈ ಹಿಂದೆಲ್ಲಾಬೆಂಗಳೂರಿನಲ್ಲಿ ಮಾತ್ರ ಸೈಟ್‌ನ ಬೆಲೆ ಜಾಸ್ತಿ, ಉಳಿದ ನಗರಗಳಲ್ಲಿ ಕಮ್ಮಿ ಎಂಬಂಥ ಪರಿಸ್ಥಿತಿ ಇತ್ತು. ಆದರೆ, ಈಗ ಹಾಗಿಲ್ಲ. ಬದಲಾದ ಪರಿಸ್ಥಿತಿಯಲ್ಲಿ ಈಗ ಎಲ್ಲಾ ನಗರಗಳೂ ಅಭಿವೃದ್ಧಿ ಹೊಂದಿವೆ. ಎಲ್ಲಾ ನಗರಗಳಲ್ಲೂಮಾಲ್‌ಗ‌ಳು, ಸೂಪರ್‌ ಮಾರ್ಕೆಟ್‌ಗಳು, ಅಪಾರ್ಟ್‌ಮೆಂಟ್‌ಗಳು ತಲೆಯೆತ್ತಿವೆ. ಈ ಕಾರಣದಿಂದ ಬೆಂಗಳೂರಿನಲ್ಲಿ ಒಂದು ಚದರ ಅಡಿಗೆ ಎಷ್ಟು ಬೆಲೆಇದೆಯೋ ಅಷ್ಟೇ ಬೆಲೆ ಉಳಿದ ನಗರಗಳಲ್ಲಿಕೂಡ ಇದೆ.ಬೆಲೆ ಜಾಸ್ತಿ ಅಂತ ತಗೊಳ್ಳದೆ ಇರಲು ಆಗುತ್ತಾ? ಸಾಲ ಮಾಡಿಯಾದ್ರೂ ಸರಿ, ಒಂದು ಸೈಟ್‌ ತಗೊಳ್ಳುವುದೇಸರಿ ಅನ್ನುವುದು ಹಲವರ ವಾದ.

ಅಕಸ್ಮಾತ್‌ಸೈಟ್‌ ಖರೀದಿಗೆಂದು ಮಾಡಿದ ಸಾಲತೀರಿಸಲು ಆಗದೇ ಹೋದರೆ, ಅದೇ ಸೈಟ್‌ನ ಮಾರಿಬಿಟ್ಟರಾಯ್ತು. ಆಗಖಂಡಿತವಾಗಿಯೂ ನಾಲ್ಕು ಕಾಸು ಹೆಚ್ಚಾಗಿ ಸಿಕ್ಕೇ ಸಿಗುತ್ತದೆ ಎಂದೂ ಜನ ಹೇಳುವುದುಂಟು. ಇದು ಎಲ್ಲಾಸಂದರ್ಭದಲ್ಲಿಯೂ ನಿಜವಾಗುವುದಿಲ್ಲ.ಸೈಟ್‌ ತಗೊಳ್ಳಲೇಬೇಕು ಅನ್ನಿಸಿದರೆ,ನಾಲ್ಕು ಅಥವಾ ಐದು ವರ್ಷಗಳಲ್ಲಿ ಸಾಲು ಮುಗಿದುಬಿಡಬೇಕು, ಅಷ್ಟುಹಣವನ್ನು ಮಾತ್ರ ಸಾಲವಾಗಿಪಡೆಯಿರಿ. ಅದಕ್ಕೂ ಮೊದಲು ನೀವು ಕೆಲಸ ಮಾಡುತ್ತಿರುವ ಸಂಸ್ಥೆ ನಿಮ್ಮನ್ನು ನಾಲ್ಕು/ ಐದು ವರ್ಷ ಉಳಿಸಿಕೊಳ್ಳುತ್ತದಾ ಎಂದು ಯೋಚಿಸಿ. ಹೌದುಅನ್ನಿಸಿದರೆ ಮಾತ್ರ ಸಾಲ ಮಾಡಲು ಮುಂದಾಗಿ.

ಹೀಗೆ ಮಾಡುವ ಬದಲು ದೊಡ್ಡ ಸೈಟ್‌ ಖರೀದಿ ಆಸೆಗೆಬಿದ್ದು ಹೆಚ್ಚು ಮೊತ್ತದ ಸಾಲಮಾಡಿದರೆ, 8-10ವರ್ಷದವರೆಗೂ ಸಾಲತೀರಿಸುತ್ತಲೇ ಇರಬೇಕಾಗುತ್ತದೆ. ಈಅವಧಿಯಲ್ಲಿ ಅಕಸ್ಮಾತ್‌ ಆರೋಗ್ಯದಲ್ಲಿಏರುಪೇರಾದರೆ? ನೌಕರಿ ಕೈತಪ್ಪಿ ಹೋದರೆ?ಅಕಸ್ಮಾತ್‌ ಇನ್ಯಾವುದೋ ದೊಡ್ಡ ಕಷ್ಟಜೊತೆಯಾಗಿಬಿಟ್ಟರೆ…ಸೈಟ್‌ ಖರೀದಿಸಲು ಹೊರಟವರು, ಸಾಲದ ಅರ್ಜಿಗೆ ಸಹಿ ಹಾಕುವ ಮುನ್ನ ಇದನ್ನೆಲ್ಲಾ ಯೋಚಿಸಲೇಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next