Advertisement

ಮಂಗಳೂರು-ಬೆಂಗಳೂರು ಪೈಪ್‌ಲೈನ್‌ನಲ್ಲಿ  ಹಣ ಸಾಗಾಟ!

08:35 AM Sep 01, 2017 | Team Udayavani |

ಬೆಳ್ತಂಗಡಿ: ಸಮುದ್ರದ ಆಳದಿಂದ ಸಿಹಿನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ರಾಜ್ಯ ಸರಕಾರದ ಯೋಜನೆ ಜನತೆಗೆ ಕುಡಿಯುವ ನೀರಿಗಾಗಿ ಮಾಡಿದ ಯೋಜನೆಯಲ್ಲ. ಚುನಾವಣಾ ಹಣಕ್ಕಾಗಿ ಮಾಡಿದ ಯೋಜನೆ. ಮಂಗಳೂರು ಬೆಂಗಳೂರು ಪೈಪ್‌ಲೈನ್‌ನಲ್ಲಿ ನೀರಿನ ಬದಲು ಕಾಂಗ್ರೆಸ್‌ ಮುಖಂಡರಿಗೆ ಹಣವೇ ಹೋಗಲಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದ್ದಾರೆ.

Advertisement

ಅವರು ಗುರುವಾರ ಇಲ್ಲಿನ ಬಿಜೆಪಿ ಕಚೇರಿ ಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎತ್ತಿನ ಹೊಳೆ ವಿಫಲ ಯೋಜನೆ ಮೂಲಕ 12,500 ಕೋ.ರೂ. ದುವ್ಯìಯ ಮಾಡಲಾಗುತ್ತಿದೆ. ಅಂತೆಯೇ ಕೋಲಾರ ಜನತೆಗೆ ಬೆಂಗಳೂರಿನಿಂದ ನೀರು ಕೊಡುವ ಸಾಧ್ಯತೆಯಿದ್ದರೂ ಅದನ್ನು ಬದಿ ಗೊತ್ತಲಾಗಿದೆ. ಚುನಾವಣೆಗೆ ಹಣ ಮಾಡುವ ಉದ್ದೇಶದಿಂದ ಬೆಂಗಳೂರಿಗೆ ಸಮುದ್ರದ ನೀರೆಂಬ ಹೊಸ ಯೋಜನೆಗೆ ಚಾಲನೆ ನೀಡಲಾಗುತ್ತಿದೆ ಎಂದರು.

ಒಡೆದು ಆಳುವ ಸರಕಾರ
ಮತೀಯವಾದವನ್ನು ಬೆಂಬಲಿಸುವ ರಾಜ್ಯ ಸರಕಾರ ಬಕ್ರಿದ್‌ಗೆ ಬದಲಿ ರಜೆ ನೀಡುತ್ತದೆ. ಹಿಂದೂಗಳ ದಸರೆಗೆ ನೀಡುವುದಿಲ್ಲ. ಅಂತೆಯೇ ಇಸ್ಲಾಂ ನಲ್ಲಿ ಅವಕಾಶವೇ ಇಲ್ಲದ ಜಯಂತಿ ಆಚರಣೆ ಮೂಲಕ ಟಿಪ್ಪು ಜಯಂತಿ ಮಾಡಿ ಮುಸ್ಲಿಮ ರಲ್ಲೂ ಒಡಕು ಮೂಡಿಸುತ್ತದೆ. ಲಿಂಗಾಯತ ವೀರಶೈವ ಎಂದು ಅವರಲ್ಲಿ ಭಿನ್ನಾಭಿ ಪ್ರಾಯ ಮೂಡಿಸುತ್ತದೆ.

ಅಹಿಂದ ಎಂದು ಹಿಂದುಳಿದ ಜಾತಿಗಳ ನಡುವೆ ತಾರತಮ್ಯ ಮಾಡು ತ್ತಿದೆ. ಒಟ್ಟಿನಲ್ಲಿ ಬ್ರಿಟಿಷರಿಗಿಂತಲೂ ಕೆಟ್ಟದಾಗಿ ಒಡೆದು ಆಳುವ ನೀತಿಯ ಸರಕಾರ ಇದಾ ಗಿದೆ. ಸಮಾಜದ ಹಿತ ಕಾಯುವ ಹೊಣೆ ಗಾರಿಕೆ ಇಲ್ಲ. ವೈಚಾರಿಕ ಗಟ್ಟಿತನ ಇಲ್ಲ. ಸಿಎಂ ಕಚೇರಿಯಿಂದ ಗ್ರಾಮ ಪಂಚಾಯತ್‌ವರೆಗೆ ಭ್ರಷ್ಟಾ ಚಾರ ಹಬ್ಬಿಸಿ ಕೊಂಡ ಸರಕಾರ ಇದಾಗಿದೆ. ಆದ್ದ ರಿಂದ ಎಲ್ಲ ಸಮೀಕ್ಷೆಗಳನ್ನೂ ಸುಳ್ಳು ಮಾಡಿ ಮುಂದಿನ ಚುನಾವಣೆಯಲ್ಲಿ 150ಕ್ಕೂ ಹೆಚ್ಚಿನ ಸ್ಥಾನ ಗಳು ಬಿಜೆಪಿ ಬಗಲಿಗೆ ಬಂದು ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಅವರು ಹೇಳಿದರು.

ಚತುಷ್ಪಥ ಬಂಟ್ವಾಳ-ಚಾರ್ಮಾಡಿ ರಸ್ತೆ ಚತುಷ್ಪಥ ವಾಗಲಿದೆ. ಅಂತೆಯೇ ಜಿಲ್ಲೆಯ ಬಹುತೇಕ ರಸ್ತೆಗಳು ಮುಂದಿನ 4 ವರ್ಷದೊಳಗೆ ಮೇಲ್ದರ್ಜೆ ಗೇರಿ ಅಭಿವೃದ್ಧಿಯ ಕನಸು ಸಾಕಾರವಾಗಲಿದೆ. ಸಿಆರ್‌ಎಫ್‌ನಿಂದ ಬೆಳ್ತಂಗಡಿಗೆ 26 ಕೋ.ರೂ. ಬಿಡುಗಡೆಯಾಗಿದೆ ಎಂದರು.

Advertisement

ಮಂಗಳೂರು ಚಲೋ
ಹಿಂದೂ ಕಾರ್ಯಕರ್ತರ ಹತ್ಯೆಯ ಹಿಂದೆ ಇರುವ ಪಿಎಫ್‌ಐ, ಕೆಎಫ್‌ಡಿಯಂಥ ಸಂಘ ಟನೆ ಗಳನ್ನು ನಿಷೇಧಿಸಬೇಕೆಂದು ಯುವ ಮೋರ್ಚಾ ಹಮ್ಮಿಕೊಂಡ ಮಂಗಳೂರು ಚಲೋಗೆ ಬೆಂಬಲ ಪಡೆಯುವ ಸಲುವಾಗಿ ಇಂದು ಆರಂಬೋಡಿ, ವೇಣೂರು, ಬಡಕೋಡಿ, ನಾರಾವಿ ಯಲ್ಲಿ ಕಾರ್ಯಕರ್ತರ ಭೇಟಿ ಮಾಡ ಲಾಗಿದೆ. ಸೆ. 7ರಂದು ಮಂಗಳೂರಿನಲ್ಲಿ ರ್ಯಾಲಿ ನಡೆಯಲಿದ್ದು ಸೆ. 4ರಂದು ಜಿಲ್ಲೆಯ ಪ್ರತಿ ಪಂಚಾಯತ್‌ನಲ್ಲೂ ಪ್ರತಿಭಟನೆ ನಡೆದು ಪಿಡಿಒ ಮೂಲಕ ಮನವಿ ನೀಡಲಾಗುವುದು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕ್ಯಾ| ಬ್ರಿಜೇಶ್‌ ಚೌಟ, ಉಪಾಧ್ಯಕ್ಷೆ ಶಾರದಾ ರೈ, ಕಾರ್ಯದರ್ಶಿ ಕೊರಗಪ್ಪ ನಾಯ್ಕ, ತಾಲೂಕು ಕಾರ್ಯದರ್ಶಿ ಸೀತಾರಾಮ ನಾಯ್ಕ, ಪ್ರಭಾಕರ ಶೆಟ್ಟಿ ಉಪ್ಪಡ್ಕ, ತಾ.ಪಂ. ಉಪಾಧ್ಯಕ್ಷೆ ವೇದಾವತಿ ಉಪಸ್ಥಿತರಿದ್ದರು.

ಶಾಸಕತ್ವಕ್ಕೆ  ಸ್ಪರ್ಧೆ ಇಲ್ಲ
ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿ ಸುವ ವದಂತಿ ಕುರಿತು ಕೇಳಿದಾಗ, ಸಂಸದ ನಾಗಿ ಜನ ಆಶೀರ್ವಾದ ಮಾಡಿದ ಮೇಲೆ ಶಾಸಕತ್ವಕ್ಕೆ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ. ಈಗಾ ಗಲೇ ಎಲ್ಲೆಡೆ ಹೊಸಮುಖಗಳು ಸಿದ್ಧ ವಾಗಿದ್ದು ರಾಜ್ಯ ಸಮಿತಿಯ ಶಿಫಾರಸ್ಸಿನಂತೆ ಅಮಿತ್‌ ಶಾ ನೇತೃತ್ವದ ಕೇಂದ್ರ ಸಮಿತಿ ಯಾರು ಸ್ಪರ್ಧಿಸು ತ್ತಾರೆಂದು ತೀರ್ಮಾನಿಸುತ್ತದೆ ಎಂದು ಸಂಸದ ನಳಿನ್‌ಕುಮಾರ್‌ ಹೇಳಿದರು.
ಹೋರಾಟ ಕೈಬಿಟ್ಟಿಲ್ಲ
ಎತ್ತಿನಹೊಳೆ ಯೋಜನೆ ವಿರುದ್ಧದ ಹೋರಾಟ ಸಂಸದರು ಕೈ ಬಿಟ್ಟರೇ ಎಂಬ ಪ್ರಶ್ನೆಗೆ, ಹೋರಾಟ ಕೈ ಬಿಟ್ಟಿಲ್ಲ.  ಹೋರಾಟಗಾರರ ಜತೆಗೆ ನಾನಿದ್ದೇನೆ. ಕಾನೂನು ಹಾಗೂ ಪ್ರಜಾಪ್ರಭುತ್ವ ಮಾದರಿಯ ಎಲ್ಲ ಹೋರಾಟಗಳಿಗೆ ನನ್ನ ಬೆಂಬಲ ಇದೆ. ಆದರೆ ಜನರ ಸ್ಪಂದನೆ ಸಾಲದು. ಸಂಸದ ನಾಗಿ ಅದೊಂದನ್ನೇ ಮಾಡುತ್ತಾ ಕೂರ ಲಾಗದು ಎಂದು ನಳಿನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next