Advertisement

ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಣ ವಸೂಲಿ: ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

12:42 PM Jun 04, 2022 | Team Udayavani |

ಸುರಪುರ: ರಂಗಂಪೇಟೆಯ ಮೌಲಾನಾ ಅಬ್ದುಲ್‌ ಕಲಾಂ ಆಜಾದ್‌ ಆಂಗ್ಲ ಮಾಧ್ಯಮ ಸರಕಾರಿ ಶಾಲೆಯಲ್ಲಿ ಪಾಲಕರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ದಲಿತ, ಹಿಂದುಳಿದ ಅಲ್ಪಸಂಖ್ಯಾತ ಒಕ್ಕೂಟದ ಮುಖಂಡರು ಶುಕ್ರವಾರ ನಗರದ ಬಸ್‌ ನಿಲ್ದಾಣದ ಹತ್ತಿರ ಪ್ರತಿಭಟಿಸಿದರು.

Advertisement

ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಮಾತನಾಡಿ, ಪ್ರಾಥಮಿಕ ಹಂತದಿಂದಲೆ ಮಕ್ಕಳಿಗೆ ಇಂಗ್ಲಿಷ್‌ ಕಲಿಸುವ ಉದ್ದೇಶದಿಂದ ಸರಕಾರ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಿದೆ. ಪಠ್ಯ ಪುಸ್ತಕ, ಸ್ಕೂಲ್‌ ಬ್ಯಾಗ್‌, ಶೂ, ಸಮವಸ್ತ್ರ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಸರಕಾರ ಉಚಿತವಾಗಿ ಸರಬರಾಜು ಮಾಡುತ್ತಿದೆ. ಆದರೆ ಶಾಲೆಯ ಪ್ರಧಾನ ಗುರುಗಳು ಪ್ರತಿಯೊಬ್ಬ ಪಾಲಕರಿಂದ ಎರಡು ಸಾವಿರ ರೂ. ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮಕ್ಕಳನ್ನು ಶಾಲೆಗೆ ಕಳುಹಿಸುವಾಗ 2 ಸಾವಿರ ರೂ. ಕೊಡುವಂತೆ ಪಾಲಕರಿಗೆ ಒತ್ತಡ ಹಾಕುತ್ತಿದ್ದಾರೆ. ಈ ಕುರಿತು ದೂರವಾಣಿ ಮೂಲಕ ಪ್ರತಿಯೊಬ್ಬ ಪಾಲಕರಿಗೆ ವಾಟ್ಸ್‌ ಆ್ಯಪ್‌ ಸಂದೇಶ ಕಳುಹಿಸಿದ್ದಾರೆ. ಈ ಕುರಿತು ತನಿಖೆ ಮಾಡಿಸಿ ತಪಿತಸ್ಥರು ಮತ್ತು ಇದಕ್ಕೆ ಸಹಕರಿಸಿದ ಇತರರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ಕೊಳಚೆ ಪ್ರದೇಶದಲ್ಲಿರುವ ಶಾಲೆಯನ್ನು ಬೇರೆ ಕಡೆ ಸ್ಥಾಪಿಸಬೇಕು. ರಂಗಂಪೇಟೆಯಲ್ಲಿರುವ ಇಲಾಖೆ ಕಾರ್ಯಾಲಯವನ್ನು ಸುರಪುರಕ್ಕೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಭೀಮರಾಯ ಸಿಂಧಗೇರಿ, ರಾಜು ಧರಬಾರಿ, ಗೋಪಾಲ ಬಾಗಲಕೋಟೆ ಇತರರಿದ್ದರು. ಸರಕಾರದ ಮುಖ್ಯ ಕಾರ್ಯದರ್ಶಿಗೆ ಬರೆದ ಮನವಿಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಸಂಗೀತಾ ಮಾಡ್ಯಾಳ ಅವರಿಗೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next