Advertisement

ದುರಸ್ಥಿ ಕಾರ್ಯದಲ್ಲಿ ಹಣ ದುರ್ಬಳಕೆ: ತರಾಟೆ

09:49 PM Jan 14, 2022 | Team Udayavani |

ಶ್ರೀರಂಗಪಟ್ಟಣ: ಹೊಸ ಮೋಟಾರ್‌ ಖರೀದಿಗಿಂತ ಹಳೆ ಮೋಟಾರ್‌ ರಿಪೇರಿಗೆ ಹೆಚ್ಚು ಹಣ ಸೋರಿಕೆ ಯಾಗುತ್ತಿದ್ದು, ತಿಂಗಳಿಗೆ ಲಕ್ಷಾಂತರ ರೂ.ಖರ್ಚಾ ಗುತ್ತಿರುವ ವಿಷಯವಾಗಿ ಮಾತಿನ ಚಕಮಕಿ ನಡೆದು ಪುರಸಭೆ ಸದಸ್ಯರು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.

Advertisement

ಪುರಸಭೆ ಅಧ್ಯಕ್ಷೆ ನಿರ್ಮಲಾ, ಉಪಾಧ್ಯಕ್ಷ ಎಸ್‌. ಪ್ರಕಾಶ್‌ ಹಾಗೂ ಮುಖ್ಯಾಧಿಕಾರಿ ಡಾ.ಮಾನಸ ನೇತೃತ್ವದಲ್ಲಿ ಪುರಸಭೆ ಸಭಾಂಗಣದಲ್ಲಿ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಯಂತ್ರೋ ಕರಣಗಳ ದುರಸ್ತಿಯಲ್ಲಿ ಲೋಪಗಳಿರುವ ಬಗ್ಗೆ ಚರ್ಚೆ ನಡೆಯಿತು.

ಹೊಸ ಯಂತ್ರ ಖರೀದಿ ಸೂಕ್ತ: ಗಂಜಾಂ ಹಾಗೂ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಹಳೆಯ ಯಂತ್ರೊಪಕರಣಗಳಿಗೆ ಪ್ರತಿ ತಿಂಗಳಿಗೆ 2 ಲಕ್ಷ ರೂ.ದುರಸ್ತಿ ಕಾರ್ಯಕ್ಕೆ ಬಳಸ ಲಾಗಿದೆ. ಕಳೆದ ಮೂರು ತಿಂಗಳಿಗೆ ಆರೂವರೆ ಲಕ್ಷ ರೂ.ದುರಸ್ತಿ ಕಾರ್ಯಕ್ಕೆ ಬಳಕೆ ಮಾಡಿರುವುದರ ಬಗ್ಗೆ ಸದಸ್ಯರು ಅಧಿಕಾರಿಗಳಲ್ಲಿ ಚರ್ಚೆ ನಡೆಸಿ ದುರಸ್ತಿ ಬದಲು ಹೊಸ ಯಂತ್ರೋಪಕರಣ ಖರೀ ದಿಸುವುದು ಸೂಕ್ತ.

ಇದರಲ್ಲಿ ಹಣ ಸೋರಿಕೆಯಾಗಿದೆ ಎಂದು ಆರೋಪಿಸಿದರು. ತನಿಖೆಗೆ ಪರ ವಿರೋಧ: ಪುರಸಭೆ ವ್ಯಾಪ್ತಿಯಲ್ಲಿನ ಶ್ರೀರಂಗಪಟ್ಟಣ ಹಾಗೂ ಗಂಜಾಂನಲ್ಲಿ ಪುರಸಭೆಗೆ ಸೇರಿದ ಆಸ್ತಿಯನ್ನು ಅಕ್ರಮವಾಗಿ ಖಾತೆ ಮಾಡಿ ಕೊಟ್ಟಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿದ್ದು, ಈ ಸಂಬಂಧ ಲೋಕಾಯುಕ್ತ ತನಿ ಖೆಗೆ ಒಪ್ಪಿಸಬೇಕೆಂದು ಉಪಾಧ್ಯಕ್ಷ ಎಸ್‌. ಪ್ರಕಾಶ್‌ ಸದಸ್ಯರನ್ನು ಒತ್ತಾಯಿಸಿದರು. ಯಾವುದೇ ದೂರು ಬಂದಿಲ್ಲದಿದ್ದರೂ ವ್ಯಕ್ತಿ ಯನ್ನು ಗುರಿ ಮಾಡಿಕೊಂಡು ಅಕ್ರಮ ಖಾತೆ ಸಂಬಂಧ ಸಭೆಯಲ್ಲಿ ಚರ್ಚಿಸಲಾಗುತ್ತಿದೆ. ಲೋಕಾ ಯುಕ್ತಕ್ಕೆ ದೂರು ನೀಡಿದರೆ ,ಇದರಿಂದ ಬಡ- ಬಗ್ಗರಿಗೆ ಅನ್ಯಾಯವಾಗಲಿದೆ ಎಂದು ಸದಸ್ಯರು ಪರ-ರೋಧ ವ್ಯಕ್ತಪಡಿಸಿದರು.

ಉಳ್ಳವರ ವಿರುದ್ಧ ಪುರಸಭೆ ಅಧಿಕಾರಿಗಳೇ ದಾಖಲಾತಿ ಪರಿಶೀಲಿಸಿ ಕಾನೂನು ಕ್ರಮಕ್ಕೆ ಮುಂದಾಗುವಂತೆ ಸದಸ್ಯ ಎಂ.ಎಲ್‌.ದಿನೇಶ್‌ ಅಭಿಪ್ರಾಯ ವ್ಯಕ್ತಪಡಿಸಿದರು. ಪುರಸಭೆ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ: ಪುರ ಸಭೆಯ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಸಂಬಂಧ ಸದಸ್ಯರಲ್ಲಿ ವಾಕ್ಸಮರ ನಡೆಯಿತಲ್ಲದೆ, ಯಾವ್ಯಾವ ಪಕ್ಷಗಳಿಗೆ ಎಷ್ಟೆಷ್ಟು ಸದಸ್ಯರನ್ನು ಆಯ್ಕೆ ಮಾಡ ಬೇಕೆಂಬು ದರ ಬಗ್ಗೆ ಚರ್ಚೆ ನಡೆದವು.

Advertisement

ಸದಸ್ಯರು ಅಂತಿಮವಾಗಿ ನಿರ್ಣಯಕ್ಕೆ ಬಂದು, ಶ್ರೀನಿವಾಸ್‌, ನರಸಿಂಹೇಗೌಡ, ರವಿಕುಮಾರ್‌, ನಿಂಗರಾಜು, ಪೂರ್ಣಿಮಾ, ವಸಂತಕುಮಾರಿ ಹಾಗೂ ಎಸ್‌. ನಂದೀಶ್‌ ಅವರನ್ನು ಸರ್ವಾನುಮತ ದಿಂದ ಆಯ್ಕೆ ಮಾಡಲಾಯಿತು. ನೂತನ ಪುರಸಭೆ ಸ್ಥಾಯಿ ಸಮಿತಿಗೆ ಆಯ್ಕೆಯಾದ ಸದಸ್ಯರನ್ನು ಅಧ್ಯಕ್ಷರು, ಉಪಾಧ್ಯಕ್ಷರು, ಮುಖ್ಯಾಧಿಕಾರಿಗಳು ಅಭಿನಂದಿಸಿ ದರು. ಸಭೆಯಲ್ಲಿ ಜಮಾ ಖರ್ಚು ಹಾಗೂ ಇನ್ನಿತರ ವಿಷಯಗಳ ಅನುಮೋದನೆ ಸಂಬಂಧ ಚರ್ಚೆ ನಡೆಸಲಾಯಿತು. ಸದಸ್ಯರಾದ ಕೃಷ್ಣಪ್ಪ, ದಯಾ ನಂದ್‌, ಗೀತಾ, ಮಂಗಳಮ್ಮ, ರವಿಕುಮಾರ್‌, ರಾಜು ಸೇರಿದಂತೆ ಇತರ ಸಿಬ್ಬಂದಿ ವರ್ಗ ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next