Advertisement

ಹಣ ದುರ್ಬಳಕೆ: ಪಿಡಿಒ ಅಮಾನತಿಗೆ ದಸಂಸ ‌ ಆಗ್ರಹ

04:05 PM Oct 13, 2020 | Suhan S |

ಕುಣಿಗಲ್‌: ಪ.ಜಾತಿ, ಪಂಗಡದಕ್ರೂಢೀಕೃತ ಅನುದಾನ ದುರ್ಬಳಕೆ ಮಾಡಿ ಕರ್ತವ್ಯ ಲೋಪ ಎಸಗಿರುವ ಅಮೃತೂರು ಪಿಡಿಒ ಎಚ್‌.ವಿ.ಲತಾ ವಿರುದ್ಧ ಪ.ಜಾತಿ ಮತ್ತು ಪಂಗಡ ದೌರ್ಜನ್ಯ ಕಾಯ್ದೆಯಡಿ ಯಲ್ಲಿಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ತಾ. ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಗ್ರಾಪಂ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

Advertisement

ಗ್ರಾಪಂನ 2019-20ನೇ ಸಾಲಿನ ಕ್ರೂಢೀಕೃತಅನುದಾನ ಹಣದಲ್ಲಿ ಪ.ಜಾತಿ, ಪಂಗಡದವರ ಉಪಯೋಜನೆಗಳಿಗೆ ಶೇ.25 ರಷ್ಟು ಹಣವನ್ನು ಪ್ರತ್ಯೇಕವಾಗಿ ಬ್ಯಾಂಕ್‌ಖಾತೆಯಲ್ಲಿ ಇಡದೇ ಪಿಡಿಒಲತಾ ಸ್ವಂತಕ್ಕೆ ಬಳಕೆ ಮಾಡಿಕೊಂಡು ದಲಿತರಿಗೆ, ದಿವ್ಯಾಂಗರಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಜೈ ಭೀಮ್‌ ಫೌಂಡೇಷನ್‌, ಅಧ್ಯಕ್ಷ ರಾಮಲಿಂಗಯ್ಯ ನೇತೃತ್ವದಲ್ಲಿ ನೂರಾರು ಜನರು ಪ್ರತಿಭಟನೆ ನಡೆಸಿ ಪಿಡಿಒ ವಿರುದ್ಧ ಧಿಕ್ಕಾರ ಕೂಗಿ ಅಮಾನತಿಗೆ ಒತ್ತಾಯಿಸಿದರು.

ಜೈ ಭೀಮ್‌ ಪೌಂಢೇಷನ್‌ ಅಧ್ಯಕ್ಷ ರಾಮ ಲಿಂಗಯ್ಯ ಮಾತನಾಡಿ, ಕ್ರೂಢೀಕೃತ ಅನುದಾನದ ಹಣವನ್ನು ಕಾಲ ಕಾಲಕ್ಕೆ ಬ್ಯಾಂಕ್‌ ಖಾತೆಗೆ ಜಮಾಮಾಡಬೇಕು. ಗ್ರಾಪಂನ ಖರ್ಚು ಕಳೆದು ಉಳಿಕಹಣದಲ್ಲಿ ಶೇ.25 ರಷ್ಟು, ಪ.ಜಾತಿ, ಪಂಗಡದ  ಜನರ ಅಭಿವೃದ್ಧಿಗಾಗಿ ಹಾಗೂ ಶೇ.5 ರಷ್ಟು ದಿವ್ಯಾಂಗರಿಗಾಗಿ ಮೀಸಲಿಟ್ಟು ಇದಕ್ಕಾಗಿ ಪ್ರತ್ಯೇಕ ಬ್ಯಾಂಕ್‌ ಖಾತೆ ತೆರೆಯಬೇಕು. ಆದರೆ 2019-20 ನೇ ಸಾಲಿನ 6.67 ಲಕ್ಷ ರೂ. ಹಣವನ್ನು ಬ್ಯಾಂಕ್‌ನಲ್ಲಿ ಇಡದೇ ಪಿಡಿಒ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಲೆಕ್ಕಪರಿಶೋಧಕರು ಆಕ್ಷೇಪಣೆ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ಸೆ.4 ರಂದು ಹಣವನ್ನು ವರ್ಗ-1 ರ ಬ್ಯಾಂಕ್‌ ಖಾತೆಗೆ ಜಮಾ ಮಾಡಿ, ಆಕ್ಷೇಪಣೆಯಿಂದಮುಕ್ತಿಗೊಳಿಸುವಂತೆ ಲೆಕ್ಕ ಪರಿಶೋಧಕರಿಗೆ ಮನವಿ ಮಾಡಿರುವುದು ಭ್ರಷ್ಟಾಚಾರದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ ಎಂದು ದೂರಿದರು.

ಪಿಡಿಒ ಅಧಿಕಾರವನ್ನು ದುರ್ಬಳಕ್ಕೆ ಮಾಡಿಕೊಂಡು, ಸಾರ್ವಜನಿಕರ ಹಣ ಬಳಸಿಕೊಂಡಿರು ವುದು ಅಕ್ಷಮ್ಯ ಅಪರಾಧವಾಗಿದೆ. ಇದು ದಲಿತರಿಗೆಹಾಗೂ ದಿವ್ಯಾಂಗರಿಗೆ ಮಾಡಿದ ವಂಚನೆಯಾಗಿದೆ. ಇದಲ್ಲದೆ ಹಲವು ಅಭಿವೃದ್ಧಿ ಯೋಜನೆಗಳಲ್ಲೂಸಹ ಲೋಪ ಎಸಗಿ ಅವ್ಯವಹಾರ ಮಾಡಿದ್ದಾರೆ. ನರೇಗಾ ಯೋಜನಡಿ ಕಾಮಗಾರಿ ಮಾಡದೇ, ಕಾಮಗಾರಿ ಮಾಡಲಾಗಿದೆ ಎಂದು ನಖಲಿ ಬಿಲ್‌ಸೃಷ್ಟಿಸಿ ಹಣ ಲಪಟಾಯಿಸಿದ್ದಾರೆ, ಅಲ್ಲದೆ ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳು ಕಳಪೆ ಯಿಂದಕೂಡಿದೆ ಎಂದು ಟೀಕಿಸಿದರು.

Advertisement

ಪ್ರತಿಭಟನಾ ಸ್ಥಳಕ್ಕೆ ಬೇಟಿ ನೀಡಿ ತಾಪಂ ಇಒಜೋಸೆಫ್‌ ಈ ಸಂಬಂಧ ತನಿಖೆ ನಡೆಸಿ ವಾರದಒಳಗೆ ಕ್ರಮ ಕೈಗೊಳ್ಳುವುದ್ದಾಗಿ ಭರವಸೆ ನೀಡಿದರ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆದರು. ಪುರಸಭಾ ಸದಸ್ಯ ಮಲ್ಲಿಪಾಳ್ಯ ಶ್ರೀನಿವಾಸ್‌, ಗ್ರಾಪಂ ಮಾಜಿ ಸದಸ್ಯ ಕೆ.ಶ್ರೀನಿವಾಸ್‌, ಐಎನ್‌ ಟಿಯುಸಿಜಿಲ್ಲಾಪ್ರಧಾನಕಾರ್ಯದರ್ಶಿಗುಲ್ಜಾರ್‌, ಕೊರವ ಸಮುದಾಯ ಅಧ್ಯಕ್ಷ ಆನಂದ್‌, ಎಸ್‌.ಟಿ. ಕೃಷ್ಣರಾಜು, ದಲಿತ ಮುಖಂಡರಾದ ವರದರಾಜು, ದಲಿತ್‌ನಾರಾಯಣ್‌, ಸಿದ್ದರಾಜು, ನರಸಿಂಹ ಮೂರ್ತಿ, ಶ್ರೀನಿವಾಸ್‌, ಶಾಂತರಾಜು, ಮೋಹನ್‌, ಭಾರತಿ, ರವಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next