ದುಡ್ಡು ಇದೆ ಅಂತ ಗೊತ್ತಾದರೆ, ಸಹಾಯ ಕೇಳಿಕೊಂಡು ಹತ್ತು ಜನ ಬರ್ತಾರೆ. ಅವರಿಗೆ ಕಷ್ಟ ಇದೆಯಾ ಎಂದು ಚೆಕ್ ಮಾಡಿ ನಂತರವೇ ಹಣ ಕೊಡಿ…
ಒಂದಷ್ಟು ದುಡ್ಡು ಮಾಡಬೇಕು ಅಂತ ಆಸೆಪಡ್ತಾರಲ್ಲ, ಅವರ ಗಮನವೆಲ್ಲಾ ಯಶಸ್ಸು ಪಡೆಯುವ ಕಡೆಗೆ ಮಾತ್ರ ಇರಬೇಕು. ಕುದುರೆ ಕಣ್ಣಿಗೆ ಕಣ್ಕಾಪು ಕಟ್ಟುತ್ತಾರಲ್ಲ, ಹಾಗೆ ನಾವೂ ಒಂದೇ ಕಡೆ ಮನಸ್ಸನ್ನು ಕೇಂದ್ರೀಕರಿಸಿದರೆ ಯಶಸ್ಸು ಪಡೆಯಲು ಸಾಧ್ಯ. ಯಾಕ್ರೀ ಇಷ್ಟೆಲ್ಲಾ ರಿಸ್ಕ್ ತಗೋಬೇಕು? ನಾಳೆ ಇರ್ತೀವೋ ಇಲ್ವೋ, ಯಾರಿಗೆ ಗೊತ್ತು? ಇದ್ದಷ್ಟು ದಿನ ಲೈಫ್ನ ಎಂಜಾಯ್ ಮಾಡೋಣ ಎಂಬ ಧೋರಣೆ ತಾಳಬಾರದು. ನಾಳೆ ಇರ್ತೀವೋ ಇಲ್ವೋ ಅಂತ ಯಾವಾಗ ಯೋಚಿಸಬೇಕು ಅಂದ್ರೆ- ಕ್ಯಾನ್ಸರ್, ಏಡ್ಸ್ ಅಥವಾ ವಾಸಿ ಆಗದಂಥ ಬೇರೆ ಯಾವುದೋ ಕಾಯಿಲೆ ಬಂದಾಗ ಹಾಗೆಲ್ಲಾ ಯೋಚಿಸಬೇಕು.
ದುಡ್ಡು ಮೂಡೋಕೆ ವಿಫಲರಾದ ಅನೇಕರು- “ಅಯ್ಯೋ ಬಿಡ್ರೀ, ದುಡ್ಡು ದುಡ್ಡು ಅಂತ ಯಾಕೆ ಸಾಯ್ತಾ ಇರ್ತೀರ’ ಅಂತ ಹೇಳ್ತಾ ಇರ್ತಾರೆ. ಸತ್ಯ ಏನು ಅಂದ್ರೆ, ಹೀಗೆಲ್ಲಾ ಹೇಳಿ, ತಮ್ಮ ಸೋಲನ್ನು, ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳೋದಕ್ಕೆ ಅವರೆಲ್ಲಾ ಪ್ರಯತ್ನ ಮಾಡ್ತಾ ಇರ್ತಾರೆ. ಒಂದಷ್ಟು ದುಡ್ಡು ಜೊತೆಯಾಯ್ತು ಅಂದರೆ, ಅದನ್ನು ಸುಮ್ಮಸುಮ್ಮನೆ ಖರ್ಚು ಮಾಡಬೇಡಿ. ಒಂದು ಕಡೆ ಅದನ್ನು ಜೋಪಾನವಾಗಿ ಇಡಿ. ದುಡ್ಡು ಇದೆ ಅಂತ ಗೊತ್ತಾದರೆ, ಸಹಾಯ ಕೇಳಿಕೊಂಡು ಹತ್ತು ಜನ ಬರ್ತಾರೆ. ಅವರಿಗೆ ಕಷ್ಟ ಇದೆಯಾ ಎಂದು ಚೆಕ್ ಮಾಡಿ ನಂತರವೇ ಹಣ ಕೊಡಿ…
ದುಡ್ಡು ಸಿಕ್ಕಿತ್ತು ಅಂದ ತಕ್ಷಣ ದಾನ ಮಾಡಲು ಹೋಗಬೇಡಿ. ನಿಮ್ಮ ಹತ್ರ ದುಡ್ಡು ಇದೆ ಅಂತ ಗೊತ್ತಾದರೆ, ಸಹಾಯ ಕೇಳಿಕೊಂಡು ಹತ್ತು ಜನ ಬರ್ತಾರೆ. ಅವರಿಗೆ ನಿಜವಾಗಲೂ ಕಷ್ಟ ಇದೆಯಾ? ಅವರು ನಿಮ್ಮಿಂದ ಸಹಾಯ ಪಡೆಯಲು ಅರ್ಹರಾ? ಮುಂದೆ ಅಕಸ್ಮಾತ್ ನೀವು ಕಷ್ಟಕ್ಕೆ ಸಿಕ್ಕಿಕೊಂಡರೆ, ಅವರು ಸಹಾಯ ಮಾಡಬಹುದಾ ಅಂತ ಚೆಕ್ ಮಾಡಿಕೊಂಡೇ ದುಡ್ಡು ಕೊಡಿ. ಒಂದು
ಮಾತು ನೆನಪಿರಲಿ: ಮುಂದೆ ಅಕಸ್ಮಾತ್ ನೀವು ಸೋತುಹೋದರೆ, ಆಗ ನಿಮಗೆ ಸಹಾಯಕ್ಕೆ ಯಾರೂ ಬರಲ್ಲ. ಕೈ ತುಂಬಾ ದುಡ್ಡು ಇರುವುದರ ಉಪಯೋಗಗಳು ಏನೇನೆಂದು ತಿಳಿಯೋಣ. ದುಡ್ಡಿದೆ ಅಂದ್ರೆ ಯಾವುದೇ ರಿಸ್ಕ್ ತಗೋಳ್ಳೋಕೂ ಧೈರ್ಯ ಬರುತ್ತೆ. ದುಡ್ಡು ಇದೆ ಅನ್ನುವ ಒಂದೇ ಕಾರಣಕ್ಕೆ ಶೇ.90ರಷ್ಟು ಸಮಸ್ಯೆಗಳು ಪರಿಹಾರ ಆಗ್ತವೆ. ಅಕಸ್ಮಾತ್ ಆಕ್ಸಿಡೆಂಟ್ ಆಗಿಬಿಡು¤ ಅಥವಾ ಜಮೀನಿನ ವಿಷಯವಾಗಿ ಏನೋ ತಕರಾರು ಆಗಿ ಅದು ಕೋರ್ಟ್‌ಗೆ ಹೋಯ್ತು ಅಂದುಕೊಳ್ಳಿ, ಅಥವಾ ಬಿಸಿನೆಸ್‌ನಲ್ಲಿ ಲಾಸ್ ಆಯ್ತು ಅಂದುಕೊಳ್ಳಿ, ಆಗ ಚಿಂತೆಯೇ ಬೇಡ, ಆಕ್ಸಿಡೆಂಟ್ ಆದಾಗ ಒಳ್ಳೆಯ ಆಸ್ಪತ್ರೆಗೆ ದಾಖಲಾಗಿ ಟ್ರೀಟ್‌ಮೆಂಟ್ ತಗೊಂಡ್ರೆ ಆಯ್ತು.
ಅದೇ, ದುಡ್ಡು ಇಲ್ಲದ ಸಂದರ್ಭ ಆದ್ರೆ, ಆಸ್ಪತ್ರೆಯ ಖರ್ಚಿಗೆ ಸಾಲ ಮಾಡಬೇಕಾಗುತ್ತೆ. ಆ ಸಾಲ ತೀರಿಸೋಕೆ ಅಂತ ಡಿಸ್‌ಚಾರ್ಜ್ ಆದ ದಿನದಿಂದಲೇ ದುಡಿಮೆಗೆ ಹೋಗಬೇಕಾಗುತ್ತೆ. ಇದೇ ರೀತಿ, ಜಮೀನಿನ ವಿಷಯವಾಗಿ ಕೋರ್ಟ್‌ಗೆ ಹೋಗಬೇಕಾಗಿ ಬಂದಾಗ, ಒಳ್ಳೆಯ ಲಾಯರ್ ಇಟ್ಟು ನ್ಯಾಯ ಕೇಳಬಹುದು. ಬಿಸಿನೆಸ್ಸಲ್ಲಿ ಲಾಸ್ ಆದರೆ, ಅದನ್ನು ಕೂಡ ತಡೆದುಕೊಳ್ಳಬಹುದು. ಇದೆಲ್ಲಾ ಸಾಧ್ಯವಾಗೋದು, ದುಡ್ಡು ಇದ್ದಾಗ ಮಾತ್ರ.