Advertisement
ಅಂದಿನ ಚುನಾವಣೆಗೂ ಇಂದಿನ ಚುನಾವಣೆಗೂ ಇರುವ ವ್ಯತ್ಯಾಸ?ಪ್ರಮುಖ ವ್ಯತ್ಯಾಸವೆಂದರೆ ಇಂದಿನ ಚುನಾವಣೆ ಹಣ ಬಲದಿಂದ ನಡೆಯುತ್ತದೆ. ಕೆಲವು ವರ್ಷಗಳ ಹಿಂದೆ ಎಲ್ಲರೂ ತಮ್ಮ ತಮ್ಮ ಪಕ್ಷಗಳ ಸಿದ್ಧಾಂತಕ್ಕೆ ಬದ್ಧರಾಗಿ, ನಿಷ್ಠೆಯಿಂದ ಕೆಲಸ ಮಾಡುತ್ತಿದ್ದರು. ಈಗ ಆ ರೀತಿಯಲ್ಲಿ ಇಲ್ಲ. ಅಧಿಕಾರದ ಆಸೆಯಿಂದಾಗಿ ಗೆಲ್ಲುವ ಪಕ್ಷದೆಡೆಗೆ ವಾಲುವವರು ಹೆಚ್ಚಾಗಿದ್ದಾರೆ. ಅಂದು ಹಾಗಿರಲಿಲ್ಲ.
ನಾನು ಸ್ಪರ್ಧಿಸಿರುವುದು 20 ವರ್ಷಗಳ ಹಿಂದೆ. ಒಂದು ಬಾರಿ ಡಾ| ಎಂ. ವೀರಪ್ಪ ಮೊಲಿ, ಮತ್ತೂಮ್ಮೆ ಎಚ್. ಗೋಪಾಲ ಭಂಡಾರಿ ನನ್ನ ವಿರುದ್ಧ ಇದ್ದರು. ಅಂದು ಕಾರ್ಕಳದಲ್ಲಿ ಕಾಂಗ್ರೆಸ್ ಪ್ರಬಲ ಪಕ್ಷವಾಗಿತ್ತು. ದೇಶದಲ್ಲಿಯೇ ಬಲಿಷ್ಠವಾಗಿತ್ತು. ಈ ಬಾರಿಯ ಚುನಾವಣೆ ಬಗ್ಗೆ?
ಬಿಜೆಪಿಗೆ ಬಹುಮತ ಸಿಗಬಹುದು. ಕಾರ್ಕಳದಲ್ಲಿಯೂ ವಿ. ಸುನಿಲ್ ಕುಮಾರ್ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಜನರೊಂದಿಗೆ ಅವರ ಸಂಪರ್ಕ ಉತ್ತಮವಾಗಿದೆ. ಆದ ಕಾರಣ ಅವರಿಗೆ ಗೆಲುವು ಕಷ್ಟವಾಗದು. ಮೋದಿ ಅವರ ಪ್ರಭಾವ ಈ ಚುನಾವಣೆಯಲ್ಲಿಯೂ ಕೆಲಸ ಮಾಡಬಹುದು.
Related Articles
ಇಂದಿನ ರಾಜಕೀಯ ಗೊಂದಲಮಯವಾಗಿದೆ. ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಬಹುದು ಅನ್ನುವ ಕಾಲವಿದು. ಕುಟುಂಬ ರಾಜಕಾರಣವೂ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಹೊಡೆತ ನೀಡಿದೆ.
Advertisement
ಮುಂದೆ ರಾಜಕೀಯದಲ್ಲಿ ತೊಡಗಿಕೊಳ್ಳುವ ಸಾಧ್ಯತೆ? ಇಲ್ಲ. 1979ರಿಂದ 2008ರ ತನಕ ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಕೊಂಡಿದ್ದೆ. 25 ವರ್ಷಕ್ಕೂ ಅಧಿಕ ಕಾಲ ಪುರಸಭೆಯ ಸದಸ್ಯನಾಗಿ ಕಾರ್ಯನಿರ್ವಹಿಸಿದ್ದೇನೆ. ಅಧ್ಯಕ್ಷನಾಗಿಯೂ ಸೇವೆ ಸಲ್ಲಿಸಿದ್ದೇನೆ. ರಾಜಕೀಯ ರಂಗದ ಸೇವೆಯಲ್ಲಿ ಸಂತೃಪ್ತಿ ಇದೆ. ಕಳೆದ 10 ವರ್ಷಗಳ ಹಿಂದೆ ರಾಜಕೀಯ ನಿವೃತ್ತಿ ಹೊಂದಿದ್ದೇನೆ. – ಜಿವೇಂದ್ರ ಶೆಟ್ಟಿ