Advertisement

“ಹಣದಾಸೆ, ಮಾದಕ ಜಾಲ-ಜೀವನ ಹಾಳು’

06:45 AM Aug 09, 2017 | Team Udayavani |

ಉಡುಪಿ: ಹಣದಾಸೆ ಮತ್ತು ಮಾದಕ ವಸ್ತುಗಳು ನಮ್ಮ ಜೀವನವನ್ನು ಹಾಳು ಮಾಡುತ್ತವೆ. ಸ್ವನಿಯಂತ್ರಣ ಮತ್ತು ಕಠಿನ ಪರಿಶ್ರಮದಿಂದ ಜೀವಮಾನವಿಡೀ ಸಂತೋಷವಾಗಿರಬಹುದು. ಮೊದಲು  ನಾವು ನಮ್ಮನ್ನು ಪ್ರೀತಿಸಬೇಕು. ನಮಗೆ ಅನುಕೂಲವಾಗಲೆಂದೇ  ಕಾನೂನುಗಳನ್ನು ಜಾರಿಗೆ ತರಲಾಗಿದೆ.ಅವುಗಳನ್ನು ಪಾಲಿಸುವುದು ನಮ್ಮ ಕರ್ತವ್ಯ ಎಂದು ಉಡುಪಿಯ ನ್ಯಾಯವಾದಿ ಅಮ್ಜದ್‌ ಹೆಜಮಾಡಿ ಅವರು ಹೇಳಿದರು.

Advertisement

ಅವರು ಪಟ್ಲ ಯು.ಎಸ್‌. ನಾಯಕ್‌ ಪ್ರೌಢಶಾಲೆಯಲ್ಲಿ ನಡೆದ ಮಕ್ಕಳಿಗೆ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳು ಸಂಸ್ಕಾರವಂತರಾಗಬೇಕು. ನಮ್ಮ ವ್ಯಕ್ತಿತ್ವದ ಬೆಳವಣಿಗೆ ತಾಯಿಯ ಗರ್ಭದಲ್ಲಿರುವಾಗಲೇ ಆರಂಭವಾಗುತ್ತದೆ. ತಾಯಿಗಿಂತ ಶ್ರೇಷ್ಠವಾದುದು ಯಾವುದೂ ಇಲ್ಲ. ತಾಯಿ‰, ತಂದೆ‰, ಗುರುಗಳು ದೇವರಿಗೆ ಸಮಾನ. ಅವರನ್ನು ಮತ್ತು ಹಿರಿಯರನ್ನು ಗೌರವಿಸಬೇಕು ಎಂದರು.

ವಿದ್ಯಾ ಸಂಸ್ಥೆ ಯ ಕಾರ್ಯದರ್ಶಿ ಅಣ್ಣಯ್ಯ ನಾಯಕ್‌, ಉದ್ಯಮಿ ಗುರುದಾಸ್‌ ಭಂಡಾರಿ, ಮುಖ್ಯ ಶಿಕ್ಷಕ ಶ್ರೀಕಾಂತ ಪ್ರಭು ಉಪಸ್ಥಿತರಿದ್ದರು. ಎಚ್‌.ಎನ್‌. ನಟರಾಜ್‌ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸ್ವದೇಶ್‌ ಶೆಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next