Advertisement

ನಿಮ್ಮ ಗ್ರಹಬಲ: ಸೋಮವಾರದ ರಾಶಿ ಭವಿಷ್ಯ

07:58 AM Dec 21, 2020 | keerthan |

21-12-2020

Advertisement

ಮೇಷ: ನೂತನ ಕಾರ್ಯಾರಂಭಕ್ಕೆ ವಿಘ್ನ ಭೀತಿಯಿಂದ ಮುನ್ನಡೆಯಲಿದೆ. ಚಿತ್ರೋದ್ಯಮ, ಸಂಗೀತ ನರ್ತನ ಮುಂತಾದವುಗಳಲ್ಲಿ ವಿಶೇಷ ಕೀರ್ತಿ ಲಾಭ. ಮಾರಾಟಗಾರರು, ಚಿತ್ರೋದ್ಯಮಿಗಳಿಗೆ ಹೆಚ್ಚಿನ ಲಾಭವಿರದು.

ವೃಷಭ: ಕುಶಲಕಲೆ, ಕಟ್ಟಡ ಸಾಮಗ್ರಿಗಳ ತಯಾರಿಕೆ. ಯಂತ್ರ ಸ್ಥಾವರ ಕೆಲಸದವರು ಚೆನ್ನಾಗಿ ಆದಾಯ ಗಳಿಸಬಹುದು. ಆರೋಗ್ಯ ಮಾತ್ರ ಹದಗೆಡಲಿದೆ. ಅಸ್ತಮಾ, ಅಲರ್ಜಿಯಂತಹ ಪೀಡೆ ಕಡಿಮೆಯಾಗಲಿದೆ.

ಮಿಥುನ: ಗಣಿ, ಚಿನ್ನ- ಬೆಳ್ಳಿ, ವೃತ್ತಿಯವರು ಪರಿಶ್ರಮದಿಂದ ಲಾಭ ಗಳಿಸಬಹುದಾಗಿದೆ. ವಿದ್ಯಾಭ್ಯಾಸದಲ್ಲಿ ಅಸಡ್ಡೆಯಿಂದ ಪ್ರಗತಿ ಕುಂಠಿತವಿದೆ. ವಾದ-ವಿವಾದದಿಂದ ನ್ಯಾಯಾಲಯದ ದರ್ಶನವಾಗಲಿದೆ. ಶುಭವಿದೆ.

ಕರ್ಕ: ಎಲ್ಲಾ ಕೆಲಸಕಾರ್ಯಗಳಲ್ಲಿ ಇಷ್ಟಸಿದ್ಧಿ ಉಂಟಾಗಲಿದೆ. ಹೆಚ್ಚಿನ ಲಾಲಸೆ ಬೇಡ. ಹೆಚ್ಚಿನ ಸಂಚಾರ ಬೇಡ. ಹಿರಿಯರ ಆಸೆ, ಹರಕೆಯ ಫ‌ಲದಿಂದ ನಿಮ್ಮ ಮನಸ್ಸಿನ ಇಚ್ಛೆ ಪೂರೈಕೆಯಾಗಲಿದೆ. ಶುಭವಿದೆ.

Advertisement

ಸಿಂಹ: ಅಧಿಕಾರಿ ವರ್ಗದವರಿಗೆ ಭಡ್ತಿಯ ಸಂಭವವಿದೆ. ಹತ್ತು ಹಲವು ಖರ್ಚುಗಳ ಪಟ್ಟಿ ಬೆಳೆದೀತು. ಆರೋಗ್ಯದಲ್ಲಿ ಸುಧಾರಣೆ ಇದೆ. ವ್ಯವಹಾರಕ್ಕಾಗಿ ದೂರ ಸಂಚಾರ ಒದಗಿ ಬಂದೀತು. ವ್ಯಾಸಂಗದಲ್ಲಿ ಅಭಿವೃದ್ಧಿ ಇದೆ.

ಕನ್ಯಾ: ಸ್ವಂತ ವೃತ್ತಿ, ತಾಂತ್ರಿಕ ಕೃತ್ಯ, ಧರ್ಮಕಾರ್ಯಗಳಲ್ಲಿ ವಿಘ್ನ ಭೀತಿ ಇದ್ದೀತು. ರಕ್ಷಣೆ, ಶಿಕ್ಷಣ ವರ್ಗದವರಿಗೆ ಲಾಭವಿರುತ್ತದೆ. ಆರೋಗ್ಯವು ಸಾಮಾನ್ಯವಾಗಿರುವುದು. ಯಶೋವೃದ್ಧಿ, ಕಾರ್ಯಸಿದ್ಧಿ ಇರುವುದು.

ತುಲಾ: ನಿಮ್ಮ ಪಾಲಿಗೆ ಸುಖದುಃಖ, ಶುಭಾಶುಭ, ಲಾಭಾಲಾಭಗಳು ಮಿಶ್ರಣವಿರುತ್ತದೆ. ಆರೋಗ್ಯವು ಸ್ವಲ್ಪ ಕೈಕೊಡಬಹುದು. ಸಹೋದ್ಯೊಗಿಗಳೊಂದಿಗೆ ಒಳ್ಳೆಯ ಸಮಯವನ್ನು ಕಳೆಯುವಿರಿ.

ವೃಶ್ಚಿಕ: ಬಂಧುಗಳ ಸಮಾಗಮದಿಂದ ಸಂತಸವಾಗಲಿದೆ. ಗೃಹೋಪಕರಣಗಳ ಖರೀದಿಯಿಂದ ಸಂತಸ. ಖರ್ಚು ಲೆಕ್ಕಮಿಕ್ಕಿ ಹೋದೀತು. ಕಲ್ಲು, ಮಣ್ಣು, ಇಟ್ಟಿಗೆ ಮುಂತಾದ ವ್ಯವಹಾರದವರಿಗೆ ಯಶಸ್ಸು ಸಿಗಲಿದೆ.

ಧನು: ಯಾತ್ರೆ, ಪ್ರವಾಸಾದಿಗಳಿಂದ ಸಂತಸವಿದೆ. ನೂತನ ಮಿತ್ರರ ಸಂಯೋಗವಿದೆ. ಪರೋಪಕಾರವು ನಿಮಗೇ ಮುಳು ತಂದೀತು. ಸಂಗೀತ, ನಾಟ್ಯ ಕಲೆಯವರಿಗೆ ಮಾನ ಸಮ್ಮಾನಗಳು ದೊರೆತು ಯಶಸ್ಸು.

ಮಕರ: ವಿದ್ಯಾರ್ಜನೆಯಲ್ಲಿ ಭಂಗವಿದೆ. ಆಟೋಟ ಸ್ಪರ್ಧೆಯಲ್ಲಿ ಕೀರ್ತಿ ಗಳಿಸುವಿರಿ. ಲೇಖನ ಸಾಮಗ್ರಿಗಳ ವಿಕ್ರಯದಲ್ಲಿ ಲಾಭವಿದೆ. ಅಲಂಕರಣ ಸಾಮಗ್ರಿಗಳ ವ್ಯಾಪಾರ ಭರಾಟೆಯಿಂದ ನಡೆದೀತು. ಯಶಸ್ಸಿದೆ.

ಕುಂಭ: ಗುಡಿ ಕೈಗಾರಿಕೆಯಲ್ಲಿ ತೊಡಗಿರುವವರಿಗೆ ಒಳ್ಳೆಯ ಲಾಭವಿದೆ. ವಾಣಿಜ್ಯ, ತಾಂತ್ರಿಕ ವಿದ್ಯಾರ್ಥಿಗಳಿಗೆ ಯಶೋ ಲಾಭವಿದೆ. ಕೃಷಿಯಲ್ಲಿ ಆದಾಯ ವೃದ್ಧಿಯಿದ್ದು ನೆಮ್ಮದಿ ತರಲಿದೆ. ಸಹನೆ ಇರಲಿ.

ಮೀನ: ವರ್ತಕ ವರ್ಗದವರಿಗೆ ವ್ಯವಹಾರದಲ್ಲಿ ಏಳಿಗೆ ಕಂಡು ಬರಲಿದೆ. ತಾಮ್ರ, ಹಿತ್ತಾಳೆ ಪದಾರ್ಥಗಳಿಗೆ ಬೇಡಿಕೆ ಹೆಚ್ಚಲಿದೆ. ವ್ಯಾಪಾರವು ಉತ್ತಮವಿದ್ದೀತು. ಮಂಗಲ ಕಾರ್ಯದ ಸೂಚನೆ ಕಂಡು ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next