Advertisement

ಯುದ್ಧ ಭೀತಿ; 3 ಲಕ್ಷ ಕೋಟಿ ರೂ. ನಷ್ಟ- ಪಾತಾಳಕ್ಕೆ ಕುಸಿದ ಶೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ

10:07 AM Jan 07, 2020 | Nagendra Trasi |

ಮುಂಬೈ: ಅಮೆರಿಕ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿದ್ದು ಇದರಿಂದ ಮಧ್ಯಏಷ್ಯಾದಲ್ಲಿ ಯುದ್ಧ ಭೀತಿ ಆವರಿಸಿಕೊಂಡ ಹಿನ್ನೆಲೆಯಲ್ಲಿ ಮುಂಬೈ ಶೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಭಾರೀ ಕುಸಿತ ಕಂಡಿದೆ. ಇದು ಶೇರುಪೇಟೆಗೆ ಕಳೆದ ಆರು ತಿಂಗಳಲ್ಲಿನ ದೊಡ್ಡ ನಷ್ಟದ ವಹಿವಾಟಿಗೆ ಸಾಕ್ಷಿಯಾಗಿದೆ.

Advertisement

ಇರಾಕ್ ಕೂಡಾ ಹಿಂದೆಂದೂ ಕಂಡರಿಯದ ಭಾರೀ ದಿಗ್ಭಂಧನ ಎದುರಿಸಬೇಕಾದೀತು ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆಯ ಹಿನ್ನೆಲೆಯಲ್ಲಿ ಮುಂಬೈ ದಲಾಲ್ ಸ್ಟ್ರೀಟ್ ಶೇರುಪೇಟೆ ಭಾರೀ ಕುಸಿತ ಕಂಡಿದ್ದು, ಸುಮಾರು 3 ಲಕ್ಷ ಕೋಟಿ ರೂಪಾಯಿ ಹೂಡಿಕೆದಾರರಿಗೆ ನಷ್ಟ ಉಂಟಾಗಿದೆ ಎಂದು ವರದಿ ತಿಳಿಸಿದೆ.

ಕಳೆದ ಶುಕ್ರವಾರ ಮುಂಬೈ ಶೇರುಪೇಟೆಯ ವಹಿವಾಟು ಅಂತ್ಯಗೊಂಡಾಗ ಶೇರುಮಾರುಕಟ್ಟೆ ಮೌಲ್ಯ 157 ಲಕ್ಷ ಕೋಟಿ ರೂಪಾಯಿಯಷ್ಟಿತ್ತು. ಆದರೆ ಇದೀಗ ಅಮೆರಿಕ, ಇರಾನ್, ಇರಾಕ್ ನಡುವಿನ ಯುದ್ಧ ಭೀತಿಯಿಂದಾಗಿ ಶೇರುಮಾರುಕಟ್ಟೆ ಮೌಲ್ಯ154 ಲಕ್ಷಕ್ಕೆ ಇಳಿಕೆಯಾಗಿ ನಷ್ಟ ಕಂಡಿದೆ ಎಂದು ವರದಿ ತಿಳಿಸಿದೆ.

ಇಂದಿನ ದಿನಾಂತ್ಯದಲ್ಲಿ ಮುಂಬೈ ಶೇರುಮಾರುಕಟ್ಟೆ ಸೆನ್ಸೆಕ್ಸ್ ಸೂಚ್ಯಂಕ 788 ಅಂಕಗಳಷ್ಟು ಕುಸಿತ ಕಂಡಿದ್ದು 40,676.63 ಅಂಕಗಳ ವಹಿವಾಟಿನೊಂದಿಗೆ ಮುಕ್ತಾಯಗೊಂಡಿದೆ. ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ 234 ಅಂಕಗಳ ನಷ್ಟದೊಂದಿಗೆ 11,993 ಅಂಕಗಳೊಂದಿಗೆ ವಹಿವಾಟು ಅಂತ್ಯ ಕಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next