Advertisement

ಸೋಮವಾರ ನಿಮ್ಮ ರಾಶಿಯಲ್ಲಿ ಯಾರಿಗೆ ಶುಭ-ಯಾರಿಗೆ ಲಾಭ : ಇಲ್ಲಿದೆ ರಾಶಿಫಲ

07:25 AM May 03, 2021 | Team Udayavani |

ಮೇಷ: ಬಹುದಿನಗಳ ನಂತರ ನ್ಯಾಯಾಲಯದ ಪ್ರಕರಣಗಳು ಇತ್ಯರ್ಥಗೊಂಡಾವು. ಸರಕಾರಿ ಕೆಲಸಕಾರ್ಯಗಳು ಸುಲಭವಾಗಿ ಸಿದ್ಧಿಯಾಗಿ ಸಮಾಧಾನವಾಗಲಿದೆ. ಯಾವುದೇ ರೀತಿಯಲ್ಲಿ ಆದಾಯದಲ್ಲಿ ಕೊರತೆ ಕಾಣಿಸದು.

Advertisement

ವೃಷಭ: ಪ್ರವಾಸ, ಉದ್ದಿಮೆ, ಸಾರಿಗೆ ಉದ್ಯೋಗ ಸಂಪಾದನೆಗೆ ನೂತನವಾಗಿ ತೊಡಗುವವರಿಗೆ ಈ ಸಮಯವು ಅಭಿವೃದ್ಧಿದಾಯಕವೆನಿಸಲಿದೆ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳಿಂದ ಸ್ವಲ್ಪ ಕಿರಿಕಿರಿ ಕಂಡು ಬರುವುದು.

ಮಿಥುನ: ಅವಿವಾಹಿತರಿಗೆ ವಿವಾಹ ಸಿದ್ಧಿಯ ಕಾಲವಿದು. ನಿಮ್ಮ ಅಭಿವೃದ್ಧಿಯಲ್ಲಿ ಆಗಾಗ ಏರುಪೇರು ಕಂಡು ಬರುವುದು. ಹಿರಿಯರೊಂದಿಗೆ ಅನಾವಶ್ಯಕವಾಗಿ ವಾದವಿವಾದದಲ್ಲಿ ತೊಡಗದಿರಿ. ಧರ್ಮಕಾರ್ಯದಲ್ಲಿ ಆಸಕ್ತಿಯಿದೆ.

ಕರ್ಕ: ನ್ಯಾಯಾಲಯದ ದರ್ಶನದ ಅವಕಾಶಗಳಿದ್ದರೂ ಅಂತಿಮವಾಗಿ ಜಯ ನಿಮ್ಮದಾಗಲಿದೆ. ಕೆಲಸ ಕಾರ್ಯದಲ್ಲಿ ವಿಳಂಬ, ವಿಘ್ನಗಳು ಸಂಭವವಿರುವುದರಿಂದ ಹೆಚ್ಚಿನ ಜಾಗ್ರತೆ ಮಾಡುವ ಅವಶ್ಯಕತೆ ಇದೆ. ಮುನ್ನಡೆಯಿರಿ.

ಸಿಂಹ: ಅವಿವಾಹಿತರಿಗೆ ಹಲವು ಅಡೆತಡೆಗಳು ಕಂಡುಬಂದರೂ ಕೊನೆಗೆ ಜಯ ಸಿಗಲಿದೆ. ಕಟ್ಟಡ ನಿರ್ಮಾಣದ ಕೆಲಸವು ಸ್ಥಗಿತಗೊಂಡು ಕಾರ್ಮಿಕ ವರ್ಗಕ್ಕೆ ಕಷ್ಟ ಅನುಭವಿಸುವಂತಾದೀತು. ಮಿತ್ರರಿಂದ ಸಹಾಯವಿದೆ.

Advertisement

 ಕನ್ಯಾ: ವ್ಯವಹಾರಗಳು ಉತ್ತಮವಿದ್ದರೂ ಆದಾಯ ಸ್ಥಗಿತಗೊಳ್ಳುವುದು. ಆಗಾಗ ಹಿತಶತ್ರುಗಳ ಭಾದೆ ಕಂಡುಬಂದು ಮನಸ್ಸಿಗೆ ನೆಮ್ಮದಿ ಇರದು. ವೈವಾಹಿಕ ಸಂಬಂಧಗಳು ಗಟ್ಟಿಗಾಗಿ ಕಂಕಣಬಲ ಭಾಗ್ಯವನ್ನು ಒದಗಿಸಲಿದೆ.

ತುಲಾ: ಅಧಿಕಾರಿ ವರ್ಗದವರಿಗೆ ಮುಂಭಡ್ತಿಯಂತಹ ಅಭಿವೃದ್ಧಿಯು ಕಂಡುಬರುವುದು. ಅವರ ಕನಸುಗಳು ನನಸಾಗಲಿವೆ. ಶೇರು ಫೈನಾನ್ಸ್‌ಗಳಲ್ಲಿ ತೊಡಗಿಸಿದ ಹಣದ ಬಗ್ಗೆ ಜಾಗ್ರತೆ ಮಾಡಬೇಕು. ಕಳೆದುಕೊಳ್ಳುವ ಭೀತಿ ಇದೆ.

ವೃಶ್ಚಿಕ: ದೇಹಭಾದೆಯು ಸುಖ, ಸಂತಸವನ್ನು ಕಸಿದುಕೊಂಡೀತು. ತಂದೆ ಮಕ್ಕಳು ಯಾ ಕುಟುಂಬದಲ್ಲಿ ಆಸ್ತಿಯ ಬಗ್ಗೆ ವಿವಾದಗಳು ಕಾಣಿಸಿಕೊಳ್ಳಲಿದೆ. ಕಾರ್ಮಿಕರ ನಿಧಾನ ಪ್ರವೃತ್ತಿಯಿಂದ ಕೆಲಸಗಳು ನಿಧಾನವಾದೀತು.

ಧನು: ವೃತ್ತಿರಂಗದಲ್ಲಿ ಕಾರ್ಯದೊತ್ತಡವಿದ್ದರೂ ಅಭಿವೃದ್ಧಿಯಿಂದ ಸಂತಸ ತಂದೀತು ಹಾಗೂ ಸಮಾಧಾನವಾಗಲಿದೆ. ಪತಿಪತ್ನಿಯರೊಳಗೆ ಅಕಾರಣವಾಗಿ ಭಿನ್ನಾಭಿಪ್ರಾಯ ಕಂಡು ಬಂದು ವಿರಸಕ್ಕೆ ಕಾರಣವಾದೀತು. ಜಾಗ್ರತೆ.

ಮಕರ: ಮಕ್ಕಳ ವೈವಾಹಿಕ ಸಂಬಂಧದ ಬಗ್ಗೆ ಮಾತುಕತೆಗಳು ನಡೆದು ಫ‌ಲಪ್ರದವಾಗಲಿದೆ. ಆರೋಗ್ಯವು ಉತ್ತಮಗೊಳ್ಳಲಿದೆ. ಹಿತಶತ್ರುಗಳು ಯಾ ಸಹೋದ್ಯೋಗಿಗಳಿಂದ ಪದೇಪದೇ ಕಾರ್ಯ ಹಾನಿ ಸಂಭವಿಸಲಿದೆ.

ಕುಂಭ: ಮಾತುಕತೆಗೆ ಬಂದಿದ್ದ ವೈವಾಹಿಕ ಸಂಬಂಧಗಳು ಸ್ಥಗಿತಗೊಂಡಾವು. ನೂತನ ವೃತ್ತಿ ಲಾಭಕ್ಕೂ ವಿಳಂಬ ಗೋಚರಿಸಲಿದೆ. ಮಡದಿಯ ಮುನಿಸು ಅಸಮಾಧಾನಕ್ಕೆ ಕಾರಣವಾಗಲಿದೆ. ತಾಳ್ಮೆ ಹಾಗೂ ಸಮಾಧಾನವಿರಲಿ.

ಮೀನ: ಸಂಪಾದನೆಯನ್ನು ವರ್ಧಿಸಿಕೊಳ್ಳುವ ಮಾರ್ಗವನ್ನು ಹುಡುಕಿಕೊಂಡರೆ ಆರ್ಥಿಕವಾಗಿ ಸಮತೋಲನವನ್ನು ಸಾಧಿಸುವಿರಿ. ಹಿರಿಯರ ಅಪಚಾರ ಹಾಗೂ ಮನಕ್ಲೇಷಕ್ಕೆ ಎಡೆಯಿದೆ. ನೌಕರ ವರ್ಗದವರಿಗೆ ಮುಂಭಡ್ತಿ ಭಾಗ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next