Advertisement

ಸೋಮವಾರದ ರಾಶಿ ಫಲ : ಹೆಚ್ಚಿದ ಜವಾಬ್ದಾರಿಯಿಂದ ಆರೋಗ್ಯದಲ್ಲಿ ಏರುಪೇರು

07:44 AM Oct 24, 2022 | Team Udayavani |

ಮೇಷ: ಆರೋಗ್ಯ ಗಮನಿಸಿ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ. ಉತ್ತಮ ವರಮಾನ. ಅವಿವಾಹಿತರಿಗೆ ಯೋಗ್ಯ ಸಂಬಂಧ ಒದಗುವ ಸಮಯ. ಗುರುಹಿರಿಯರಿಂದ ಸಂತೋಷ ವೃದ್ಧಿ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ.

Advertisement

ವೃಷಭ: ನೂತನ ಜನರ ಭೇಟಿ. ದೀರ್ಘ‌ ಪ್ರಯಾಣ ದೂರದ ವ್ಯವಹಾರಗಳಲ್ಲಿ ಪ್ರಗತಿ. ಗೃಹದಲ್ಲಿ ಸಂತಸದ ವಾತಾವರಣ. ನಿರೀಕ್ಷಿತ ಧನ ಸಂಪತ್ತು ಪ್ರಾಪ್ತಿ. ಅಧ್ಯಯನಶೀಲರಿಗೆ ಪ್ರಯಾಣ ಸಂಭವ. ದಾಂಪತ್ಯ ಸುಖ ವೃದ್ಧಿ.

ಮಿಥುನ: ಹೆಚ್ಚಿದ ಜವಾಬ್ದಾರಿಯಿಂದ ಆರೋಗ್ಯದಲ್ಲಿ ಏರುಪೇರು. ದೇಹಾಯಾಸ ಸಂಭವ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ. ಗುರುಹಿರಿಯರಿಂದ ಸರಿಯಾದ ಮಾರ್ಗದರ್ಶನ. ಸಾಂಸಾರಿಕ ಸುಖ ಮಧ್ಯಮ. ಹಣಕಾಸಿನಲ್ಲಿ ಶಿಸ್ತು ಇರಲಿ.

ಕರ್ಕ: ಉತ್ತಮ ಆರೋಗ್ಯ. ನೂತನ ಮಿತ್ರರ ಭೇಟಿ. ಪಾಲುದಾರಿಕಾ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ. ನಿರೀಕ್ಷೆಯಂತೆ ಧನಾಗಮ ಪ್ರಾಪ್ತಿ. ಗುರುಹಿರಿಯರೊಂದಿಗೆ ನಿಷ್ಠುರಗೊಳ್ಳದಿರಿ. ಮನೋರಂಜನೆಯಲ್ಲಿ ಸಮಯ ಕಳೆಯುವಿಕೆ.

ಸಿಂಹ: ಆರೋಗ್ಯ ವೃದ್ಧಿ. ನಿರೀಕ್ಷಿಸಿದಂತೆ ಕೆಲಸ ಕಾರ್ಯಗಳಲ್ಲಿ ಸಫ‌ಲತೆ. ಸರಕಾರೀ ವ್ಯವಹಾರಗಳಲ್ಲಿ ಪ್ರಗತಿ. ಉದ್ಯೋಗದಲ್ಲಿ ಪರರ ಸಹಕಾರದಿಂದ ಗುರಿ ಸಾಧನೆ. ಹಣಕಾಸಿನ ವಿಚಾರದಲ್ಲಿ ಸರಿಯಾದ ಪತ್ರ ದಾಖಲೆಯಿಂದ ನೆಮ್ಮದಿ.

Advertisement

ಕನ್ಯಾ: ವಿದ್ಯಾರ್ಜನೆಯಲ್ಲಿ ತಲ್ಲೀನತೆ. ಉತ್ತಮ ವಾಕ್‌ಪಟುತ್ವ. ಭೂಮ್ಯಾದಿ ವ್ಯವಹಾರಗಳಲ್ಲಿ ಪ್ರಗತಿ. ದಾಂಪತ್ಯದಲ್ಲಿ ಚರ್ಚೆಗೆ ಆಸ್ಪದ ನೀಡದಿರಿ. ಧಾರ್ಮಿಕ ಕಾರ್ಯಗಳಲ್ಲಿ ಪರಿಶ್ರಮ. ಆದಾಯಕ್ಕೆ ಸರಿಯಾಗಿ ಉಳಿತಾಯ ಸಂಭವ.

ತುಲಾ: ಆರೋಗ್ಯ ವೃದ್ಧಿ. ಧಾರ್ಮಿಕ ಕೆಲಸಕ್ಕೆ ಪ್ರಯಾಣ. ಗೌರವದ ಧನ ಸಂಪಾದನೆ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿ. ಆಸ್ತಿ ವಿಚಾರದಲ್ಲಿ ಪ್ರಗತಿ. ಸಾಂಸಾರಿಕ ಸುಖ ತೃಪ್ತಿಕರ. ವಿದ್ಯಾರ್ಥಿಗಳಿಗೆ ಹೆಚ್ಚಿದ ಸಂಭ್ರಮ. ಗುರುಹಿರಿಯರಿಂದ ಉತ್ತಮ ಮಾರ್ಗದರ್ಶನ.

ವೃಶ್ಚಿಕ: ವಾಕ್‌ಚತುರತೆಯಿಂದ ಕೂಡಿದ ಕಾರ್ಯಶೈಲಿ. ಉದ್ಯೋಗ ವ್ಯವಹಾರದಲ್ಲಿ ಆಶಾದಾಯಕ ಬದಲಾವಣೆ. ಅಧಿಕ ಧನಾರ್ಜನೆ. ಆಸ್ತಿ ವಿಚಾರಗಳಲ್ಲಿ ಮುನ್ನಡೆ. ದಾಂಪತ್ಯ ಸುಖ ಮಧ್ಯಮ. ಗಣ್ಯರ ಭೇಟಿ.ಧಾರ್ಮಿಕ ಕಾರ್ಯಕ್ಕೆ ಧನ ವ್ಯಯ.

ಧನು: ಆರೋಗ್ಯದಲ್ಲಿ ಸಮಾದಾನ. ಚಿಕ್ಕ ಪ್ರಯಾಣ ಸಂಭವ. ಮಾನಸಿಕವಾಗಿ ಸಂಭ್ರಮಿಸುವ ಕಾಲ. ವಿದ್ಯಾರ್ಥಿಗಳಿಗೆ ಉತ್ತಮ ಸ್ಥಾನ ಸುಖ. ಉದ್ಯೋಗಿ ವ್ಯವಹಾರಸ್ಥರಿಗೆ ಅಧಿಕ ಜವಾಬ್ದಾರಿ ಹಾಗೂ ಉತ್ತಮ ಬದಲಾವಣೆಯ ಅವಕಾಶ. ಸಾಂಸಾರಿಕ ಸುಖ ಮಧ್ಯಮ.

ಮಕರ: ಆರೋಗ್ಯದಲ್ಲಿ ವೃದ್ಧಿ. ಪರಊರ ಮಿತ್ರರ ಭೇಟಿ. ದೂರದ ಆಸ್ತಿ ವಿಚಾರದಲ್ಲಿ ಅಭಿವೃದ್ಧಿಯ ನಡೆ. ಪಾಲುದಾರಿಕಾ ಕ್ಷೇತ್ರದವರಿಗೆ ಪರಸ್ಪರ ಸಹಕಾರದಿಂದ ಉನ್ನತಿ. ಮೇಲಧಿಕಾರಿಗಳ ಗಣ್ಯರ ಮಾರ್ಗದರ್ಶನದ ಸಹಾಯ.

ಕುಂಭ: ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಸ್ಥಾನ ಗೌರವಾದಿ ಸುಖ. ಅತ್ಯುತ್ತಮ ಧನಾರ್ಜನೆ. ಉತ್ತಮ ವಾಕ್‌ ಚತುರತೆ. ಮನೋರಂಜನೆಯಿಂದ ಕೂಡಿದ ಸಮಯ. ಮನೆಯಲ್ಲಿ ಸಂಭ್ರಮ. ದೂರದ ವ್ಯವಹಾರಗಳಲ್ಲಿ ಅಭಿವೃದ್ಧಿ.

ಮೀನ: ಧಾರ್ಮಿಕ ಕಾರ್ಯಗಳ ನೇತೃತ್ವ. ದಾನ ಧರ್ಮಾದಿಗಳಲ್ಲಿ ಪಾಲ್ಗೊಳ್ಳುವಿಕೆಯಿಂದ ಮನಃ ಸಂತೋಷ. ಜನಮನ್ನಣೆ. ದೈರ್ಯ ಉತ್ಸಾಹದಿಂದ ಕೂಡಿದ ಕಾರ್ಯ ವೈಖರಿ. ಆರೋಗ್ಯದ ಬಗ್ಗೆ ಉದಾಸೀನತೆ ಬೇಡ. ಸಾಂಸಾರಿಕ ಸುಖ ತೃಪ್ತಿದಾಯಕ. ಗುರುಹಿರಿಯರ ಆರೋಗ್ಯ ಸುದೃಢ.

Advertisement

Udayavani is now on Telegram. Click here to join our channel and stay updated with the latest news.

Next