ಕಣ್ಣಲ್ಲಿ ನೋಡಿಯೇ ಅಡುಗೆ ರುಚಿ ಹೇಗಿದೆ ಅಂತ ಹೇಳ್ತಾರೆ ನನ್ನಮ್ಮ. ಕುಟುಂಬದ ಹೆಚ್ಚಿನ ಸಮಾರಂಭಗಳಿಗೆ ಅಡುಗೆ ಭಟ್ಟರು ಬೇಡವೇ ಬೇಡ. ಎಲ್ಲರಿಗೂ ಅಮ್ಮನ ಅಡುಗೆಯೇ ಅಚ್ಚುಮೆಚ್ಚು. ಚುರುಕಾಗಿ, ಸ್ವಾದಿಷ್ಟವಾಗಿ ಹಾಗೂ ಆರೋಗ್ಯಕರವಾಗಿ ಅಡುಗೆ ಮಾಡೋದ್ರಲ್ಲಿ ಅಮ್ಮನದ್ದೇ ಮೇಲುಗೈ. ಬಿರಿಯಾನಿ, ವೆಜ್ ಪಲಾವ್, ಟೊಮೆಟೊ ಗೊಜ್ಜು, ರೊಟ್ಟಿ, ಶ್ಯಾವಿಗೆ, ಸಬ್ಬಕ್ಕಿ ಪಾಯಸ, ಹಲ್ವಾ… ಹೀಗೆ ಹಲವು ಬಗೆಯ ವೆಜ್, ನಾನ್‌ವೆಜ್ ಅಡುಗೆ ಮಾಡೋದಷ್ಟೇ ಅಲ್ಲದೆ, ಮಕ್ಕಳಿಗೆ ಗೊತ್ತಾಗದಂತೆ ತರಕಾರಿಗಳನ್ನು ವಿವಿಧ ವಿಭಿನ್ನ ಅಡುಗೆಯ ಮೂಲಕ ಹೊಟ್ಟೆ ಸೇರುವಂತೆ ಮಾಡ್ತಾ ಇದ್ರು. ನಾಲ್ವರು ಮಕ್ಕಳ ಬಾಯಿರುಚಿಗೆ ತಕ್ಕಂತೆ ಅಡುಗೆ ಮಾಡುತ್ತಿದ್ದ ಅಮ್ಮ, ಈಗ ಮೊಮ್ಮಗಳಿಗೆ ಇಷ್ಟವಾಗುವ ಈಗಿನ ಟ್ರೆಂಡ್‌ನ ಅಡುಗೆಯನ್ನೂ ಕಲಿತುಬಿಟ್ಟಿದ್ದಾರೆ. ಮೊಮ್ಮಗಳು ಕೇಳಿದಾಗೆಲ್ಲಾ, ಫಿಂಗರ್ ಚಿ±Õ…, ಮಸಾಲ ಚಿ±Õ…, ಪಿಜ್ಜಾ, ಎಗ್ ರೋಲ…, ಚಿಕನ್ ರೋಲ…, ಬರ್ಗರ್ ಮಾಡೋದರಲ್ಲಿಯೂ ಎಕÕ…ಪರ್ಟ್..ಅಮ್ಮನೇ ಕಲಿಸಿದ ಮಸಾಲ ಆಲೂ ಪಲ್ಯದ ರೆಸಿಪಿ ಇಲ್ಲಿದೆ.
ಮಸಾಲ ಆಲೂ ಪಲ್ಯ
ಬೇಕಾಗುವ ಪದಾರ್ಥ: ಆಲೂಗಡ್ಡೆ 5-6, ಈರುಳ್ಳಿ 2, ಕರಿಬೇವು, ಕೊತ್ತಂಬರಿ ಸೊಪ್ಪು, ಶುಂಠಿ, ಬೆಳ್ಳುಳ್ಳಿ ಪೇÓr…- 1/2 ಚಮಚ, ದನಿಯಾ ಪುಡಿ 1/2 ಚಮಚ, ಜೀರಿಗೆ ಪುಡಿ 1/4 ಚಮಚ, ಸೋಂಪು 1/4 ಚಮಚ, ಅರಿಶಿನ ಪುಡಿ, ಎಣ್ಣೆ, ರುಚಿಗೆ ಉಪ್ಪು, ಚಕ್ಕೆ, ಲವಂಗ ಪುಡಿ 1/4 ಚಮಚ, ಹಸಿಮೆಣಸು.
ಮಾಡುವ ವಿಧಾನ: ಮೊದಲಿಗೆ ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆದು ಕಿವುಚಿ ಇಟ್ಟುಕೊಳ್ಳಿ. ಒಂದು ಬಾಣಲಿಗೆ ಎಣ್ಣೆ ಹಾಕಿ, ಕಾದ ನಂತರ ಕರಿಬೇವು, ಜೀರಿಗೆ, ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಬೇಕು. ನಂತರ ಶುಂಠಿ, ಬೆಳ್ಳುಳ್ಳಿ ಪೇÓr… ಹಾಕಿ ಫ್ರೈ ಮಾಡಿ. ನಂತರ ಅರಿಶಿನ, ಹೆಚ್ಚಿದ ಮೆಣಸಿನ ಕಾಯಿ, ಚಕ್ಕೆ-ಲವಂಗ ಪುಡಿ, ಸೋಂಪು, ಜೀರಿಗೆ ಪುಡಿ, ದನಿಯಾ ಪುಡಿ ಹಾಕಿ ಕಡಿಮೆ ಉರಿಯಲ್ಲಿ ಹುರಿಯಿರಿ. ನಂತರ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಆಲೂಗಡ್ಡೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ಮಸಾಲ ಆಲೂ ಪಲ್ಯ ಸಿದ್ಧ.
– ಮೈನಾ, ಬೆಂಗಳೂರು