Advertisement
ನನ್ನ ಕುಟುಂಬದ ಸದಸ್ಯರೊಂದಿಗೆ ಸಮಯವನ್ನು ಕಳೆಯಲು, ಕಾಲೇಜಿನ ಪರೀಕ್ಷೆ ಮುಗಿದ ಮರುದಿನವೇ ಗೋವಾಕ್ಕೆ ತೆರಳಿದ್ದೆವು. ಪರೀಕ್ಷೆ ನಡೆಯುತ್ತಿರುವ ದಿನಗಳಿಂದಲೂ ಮನೆಯಲ್ಲಿ ಅಲ್ಲಿ ಯಾವ ರೀತಿ ಮೋಜು-ಮಸ್ತಿ ಮಾಡಬಹುದೆಂಬ ಆಲೋಚನೆ ಇದ್ದೇ ಇತ್ತು. ಆ ಕ್ಷಣವನ್ನು ನೆನೆದಾಗ ಇಡೀ ರಾತ್ರಿ ನಿದ್ದೆ ಬಾರದೆ ಕಾಡಿದ್ದು ಇದೆ.
Related Articles
Advertisement
ಅನಂತರದಲ್ಲಿ ತಾಜ್ ಬೀಚ್‌ಗೆ ಹೋದೆವು. ಶ್ರೀಮಂತ ವ್ಯಕ್ತಿಗಳು ಹೋಗುವ ಬೀಚ್ ಎಂದೇ ಪ್ರಸಿದ್ಧಿ ಹೊಂದಿದ್ದು ಹಾಗೂ ಇಲ್ಲಿನ ಒಂದು ಕಲ್ಲಿನಲ್ಲಿ ಕೋಟೆಯಲ್ಲಿ, ಕಟ್ಟಿರುವ ಸ್ಮಾರಕದಲ್ಲಿ ಹಲವಾರು ಸಿನೆಮಾ ಶೂಟಿಂಗ್‌ಗಳು ಕೂಡ ಇಲ್ಲಿ ನಡೆದಿದೆ ಎಂದು ಟೂರಿಸ್ಟ್ ಗೈಡ್ ಹೇಳಿದರು.
ಅನಂತರದಲ್ಲಿ ನಾವು ಸ್ನೋ ಪಾರ್ಕಿಗೆ ಹೋಗಿದ್ದೆವು. ಅಲ್ಲಿ ಹೊರಗೆ ನೋಡುವಾಗಲೇ ಜನಸಾಗರ ಹಾಗೂ ಅಲ್ಲಿ 5 ಸೆಲ್ಸಿಯಸ್ ತಾಪಮಾನ ಇರುವುದರಿಂದ ಎಲ್ಲರಿಗೂ ಜಾಕೆಟ್, ಗ್ಲೌಸ್, ಟೋಪಿ, ಶೂಗಳನ್ನು ನೀಡಿದರು. ಅದರ ಒಳಗೆ ಹೋದಾಗ ಮಂಜುಗಡ್ಡೆಯನ್ನು ಮಾಡಿದ ಕಲಾ ಕೃತಿಗಳು, ಡಿಜೆ, ಲೈಟ್‌ಗಳು ವಿಭಿನ್ನ ಬಗೆಯ ಸಂಗೀತಗಳು ನಮ್ಮನ್ನು ಅಲ್ಲಿಂದ ಹೊರಗೆ ತೆರಳಲು ಬಿಡುತ್ತಿರಲಿಲ್ಲ.
ಆದರೆ ಭಾಗ ಬೀಚ್ ನೋಡಲು ಇದ್ದ ಕಾರಣ ಆತುರವಾಗಿ ತುಂಬಾ ಹತ್ತಿರಲಿದ್ದ, ಹತ್ತು ನಿಮಿಷಗಳ ದಾರಿ, ಸಮುದ್ರವನ್ನು ನೋಡಿ ಬಾದಾಮಿ ಕುಲ್ಫಿಯನ್ನು ಸವಿದೆವು.
ಅನಂತರ ಮಾಂಡವಿ ನದಿಯಲ್ಲಿ ಕ್ಯೂಸ್ ನಲ್ಲಿ ಹೋದೆವು. ಅದು ತುಂಬಾ ಅದ್ಭುತವಾಗಿತ್ತು. ಕ್ಯೂಸ್ ನಲ್ಲಿ ನಿಂತು ಸಮುದ್ರ ನೋಡಿದಾಗ ನೀರಿನ ಮೇಲೆ ಅಲೆಗಳ ಮೇಲೆ ನಿಂತ ಅನುಭವ ನೀಡಿತು ಹಾಗೂ ಕ್ಯೂಸ್ ನಲ್ಲಿ ಹಲವಾರು ರೀತಿಯ ಗೋವಾದ ಸಾಂಪ್ರದಾಯಿಕ ನೃತ್ಯ ಪ್ರಕಾರಗಳ ಬಗ್ಗೆ ಕಲಾವಿದರು ರಂಜಿಸಿದರು. ಒಂದು ಗಂಟೆಗಳ ಕಾಲ ಆ ಕ್ಯೂಸ್ ನಲ್ಲಿ ಆನಂದದ ಕ್ಷಣಗಳನ್ನು ಕಳೆದು ತದನಂತರ ಹೋಟೆಲ್ ಗೆ ಹೋದೆವು.
ಮರುದಿನ ವಿವಿಧ ರೀತಿಯ ಮೀನಿನ ಸಂಗ್ರಹಾಲಯಕ್ಕೆ ಹೋದೆವು. ಅದರಲ್ಲಿ ವಿವಿಧ ಬಗೆಯ ಮೀನುಗಳು, ವಿವಿಧ ರೀತಿಯ ಭಯವನ್ನು ಹುಟ್ಟಿಸುವ ಭೂತಗಳ ವಿವಿಧ ಬಗೆಯ ವಿನ್ಯಾಸಗಳು ಅಲ್ಲಿದ್ದವು.
ಕೆಲವೊಂದು ವಿನ್ಯಾಸವನ್ನು ಹೆದರಿಸಿದರೆ, ಕೆಲವೊಂದು ಟಿವಿ, ಸಿನೆಮಾದಲ್ಲಿ ನೋಡಿದ ಅನುಭವ ನೀಡಿತು. ಅದೇ ಸಂಗ್ರಹಾಲಯದಲ್ಲಿ ಒಂದು ವೀಡಿಯೋ ತೋರಿಸಿದರು. ಮೊದಲು ಕುಳಿತುಕೊಳ್ಳುವಾಗ ಸೀಟ್ ಬೆಲ್ಟ್ ಹಾಗೂ ಕ್ಲಾಸ್ ನೀಡಿದರು. ಅದೇ ರೀತಿ ಕುಳಿತುಕೊಳ್ಳುವ ಆಸನಗಳ ಚಲನೆಗಳು ಮುಂದೆ ಬರುವ ಅನುಭವ ಒಮ್ಮೆ ಭಯ ನೀಡಿದರೂ ಉತ್ಸಾಹಭರಿತವಾಗಿತ್ತು.
ತದನಂತರದಲ್ಲಿ ಪೊಂಡದ ಮರಗಳ ವಿವಿಧ ಮಾಹಿತಿಗಳ ಬಗ್ಗೆ ತಿಳಿಸಲು ಇರುವ ಶಹಕರಿ ಸ್ಪೀಸ್ ಫಾರ್ಮ್ ಗೆ ಹೋದೆವು. ಬಿಗ್ ಫೂಟ್ ಎಂಬ ಮ್ಯೂಸಿಯಂ ಗೆ ಹೋಗಿದ್ದೆವು. ಹಾಗೂ ಸಂತರ ದೇವಾಲಯ, ಗೋವಾದ ಕಲೆಗಳು, ಸಂಸ್ಕೃತಿಗಳನ್ನು ಬಿಂಬಿಸುವ ಕಲಾ ಮೂರ್ತಿಗಳು, ಇದು ಹಿಂದಿನ ಕಾಲದ ಕಲಾ ನೈಜತೆಯನ್ನು ನೀಡಿದವು. ಗೋವಾದ ಪುರಾತನ ಚರ್ಚಿನಲ್ಲಿ ಫಾರ್ದ ಪ್ರಾಸ್ಸಿಸ್ ಸೇವಿರ್ಯ ಅವರ ಮೃತ ದೇಹವನ್ನು ವೀಕ್ಷಣೆ ಮಾಡಿ ಹೊಸ ಚರ್ಚ್‌ಅನ್ನು ವೀಕ್ಷಣೆ ಮಾಡಿದೆವು.
ಹಿಂದೆ ಯಾವ ರೀತಿ ವಸ್ತುಗಳನ್ನು ಬಳಸುತ್ತಿದ್ದರು ಪ್ರವಾಸಿಗರಿಗೆ ವೀಕ್ಷಣೆಗೆ ತೆರೆದಿಟ್ಟಿದ್ದರು. ಕೊಲ್ವ ಬೀಚಿನಲ್ಲಿ ಆಟ ಆಡಿದೆವು. ಮರುದಿನ ಗೋವಾದಿಂದ ಪ್ರವಾಸದ ಹಲವಾರು ನೆನಪುಗಳನ್ನು ಹೊತ್ತು ಉಡುಪಿಗೆ ಬಂದೆವು.
-ದೇವಿಶ್ರೀ ಶಂಕರಪುರ
ಆಳ್ವಾಸ್, ಮೂಡುಬಿದಿರೆ