Advertisement
.ನಿನ್ನ ದಿನ ಪ್ರಶಾಂತವಾಗಿ ಶುರುವಾಗಲಿ. ಎದ್ದ ಕೂಡಲೇ, ಇದ್ದಬದ್ಧ ಟೆನ್ಸ್ ನ್‌ಗಳನ್ನೆಲ್ಲ ತಲೆಮೇಲೆ ಎಳೆದುಕೊಳ್ಳಬೇಡ..ಬೆಳಗ್ಗೆ ಅರ್ಧ ಗಂಟೆಯನ್ನು ಧ್ಯಾನ-ವ್ಯಾಯಾಮಕ್ಕೆ ಮೀಸಲಿಡು.
.ಎಷ್ಟೇ ಕೆಲಸವಿದ್ದರೂ, ಸಮಯಕ್ಕೆ ಸರಿಯಾಗಿ ಊಟ-ತಿಂಡಿ ತಿನ್ನಲು ಮರೆಯಬೇಡ.
.ವಾರದಲ್ಲಿ ಎರಡು ಬಾರಿಯಾದರೂ ಮುಖಕ್ಕೆ ಮಸಾಜ್ ಮಾಡು. ಕಣ್ಣು, ಕೆನ್ನೆ, ಹಣೆಗೆ ಮಸಾಜ್ ಮಾಡಿದರೆ, ರಕ್ತಸಂಚಾರ ಸರಾಗವಾಗಿ ಒತ್ತಡವನ್ನು ತಗ್ಗಿಸುತ್ತದೆ.
.ದಿನಾ ಧೂಳಿನಲ್ಲಿ ಪ್ರಯಾಣಿಸಬೇಕಾದಾಗ, ತ್ವಚೆಯ ಕಡೆಗೆ ಗಮನ ಕೊಡು. ಆಗಾಗ ತಣ್ಣೀರಿನಲ್ಲಿ ಮುಖ ತೊಳೆದುಕೋ.
.ವಾರಕ್ಕೊಮ್ಮೆಯಾದರೂ, ನಿನ್ನ ಪಾದಗಳಿಗೆ ಆರಾಮ ನೀಡು. ಒಂದು ಬಕೆಟ್‌ನಲ್ಲಿ ಉಗುರು ಬೆಚ್ಚಗಿನ ನೀರು ಮತ್ತು ಉಪ್ಪು ಹಾಕಿ, ಕಾಲನ್ನು ಅದ್ದಿ ಕುಳಿತುಕೋ.
.ಟಿವಿ ನೋಡುವ, ಓದುವ, ಹಾಡು ಕೇಳುವಂಥ ಹವ್ಯಾಸಗಳಿಗಾಗಿ ದಿನದ ಕೆಲ ಗಂಟೆಗಳನ್ನು ಮೀಸಲಿಡು.
.ಮುಂಗೈ ಮಣಿಕಟ್ಟು , ಬೆರಳಿನ ಗಂಟುಗಳಲ್ಲಿರುವ ಅಕ್ಯುಪ್ರಷರ್ ಬಿಂದುಗಳನ್ನು ಗುರುತಿಸಿ, ಒತ್ತಿಕೊಳ್ಳುವುದರಿಂದ ಒತ್ತಡ ನಿವಾರಣೆಯಾಗುತ್ತದೆ.
.ತಿಂಗಳಿನ ಆ ಮೂರು ದಿನಗಳಲ್ಲಾದರೂ ಕೆಲಸ ಕಡಿಮೆ ಮಾಡು.
.ಹಳೆ ಗೆಳತಿಯರಿಗೆ ಆಗಾಗ್ಗೆ ಫೋನ್ ಮಾಡು. ಮೂರ್ನಾಲ್ಕು ತಿಂಗಳಿಗೊಮ್ಮೆಯಾದರೂ ಅವರನ್ನು ಭೇಟಿಯಾಗು.
.ಆರು ತಿಂಗಳಿಗೊಮ್ಮೆ ವೈದ್ಯರ ಬಳಿ ಹೋಗಿ ಆರೋಗ್ಯ ತಪಾಸಣೆ ಮಾಡಿಸಿಕೋ.