Advertisement
-ನಿನ್ನ ದಿನ ಪ್ರಶಾಂತವಾಗಿ ಶುರುವಾಗಲಿ. ಎದ್ದ ಕೂಡಲೇ, ಇದ್ದಬದ್ದ ಟೆನ್ಸ್ ನ್‌ಗಳನ್ನೆಲ್ಲ ತಲೆ ಮೇಲೆ ಎಳೆದುಕೊಳ್ಳಬೇಡ.– ಬೆಳಗ್ಗೆ ಅರ್ಧ ಗಂಟೆಯನ್ನು ಧ್ಯಾನ-ವ್ಯಾಯಾಮಕ್ಕೆ ಮೀಸಲಿಡು.
– ಎಷ್ಟೇ ಕೆಲಸವಿದ್ದರೂ, ಸಮಯಕ್ಕೆ ಸರಿಯಾಗಿ ಊಟ-ತಿಂಡಿ ತಿನ್ನುವುದನ್ನು ಮರೆಯಬೇಡ.
– ವಾರದಲ್ಲಿ ಎರಡು ಬಾರಿಯಾದರೂ ಮುಖಕ್ಕೆ ಮಸಾಜ್ ಮಾಡು. ಕಣ್ಣು, ಕೆನ್ನೆ, ಹಣೆಗೆ ಮಸಾಜ್ ಮಾಡಿದರೆ, ರಕ್ತ ಸಂಚಾರ ಸರಾಗವಾಗಿ ಒತ್ತಡವನ್ನು ತಗ್ಗಿಸುತ್ತದೆ.
– ದಿನಾ ಧೂಳಿನಲ್ಲಿ ಪ್ರಯಾಣಿಸಬೇಕಾದಾಗ, ತ್ವಚೆಯ ಕಡೆಗೆ ಗಮನ ಕೊಡು. ಆಗಾಗ ತಣ್ಣೀರಿನಲ್ಲಿ ಮುಖ ತೊಳೆದುಕೋ.
– ವಾರಕ್ಕೊಮ್ಮೆಯಾದರೂ, ನಿನ್ನ ಪಾದಗಳಿಗೆ ಆರಾಮ ನೀಡು. ಒಂದು ಬಕೆಟ್‌ನಲ್ಲಿ ಉಗುರು ಬೆಚ್ಚಗಿನ ನೀರು ಮತ್ತು ಉಪ್ಪು ಹಾಕಿ, ಕಾಲನ್ನು ಅದ್ದಿ ಕುಳಿತುಕೋ.
– ಟಿ.ವಿ. ನೋಡುವ, ಓದುವ, ಹಾಡು ಕೇಳುವಂಥ ಹವ್ಯಾಸಗಳಿಗಾಗಿ ದಿನದ ಕೆಲ ಗಂಟೆಗಳನ್ನು ಮೀಸಲಿಡು.
-ಮುಂಗೈ ಮಣಿಕಟ್ಟು, ಬೆರಳಿನ ಗಂಟುಗಳಲ್ಲಿರುವ ಅಕ್ಯುಪ್ರಷರ್ ಬಿಂದುಗಳನ್ನು ಗುರುತಿಸಿ, ಒತ್ತಿಕೊಳ್ಳುವುದರಿಂದ ಒತ್ತಡ ನಿವಾರಣೆಯಾಗುತ್ತದೆ.
-ಬೆಳಗ್ಗೆಯಿಂದ ದುಡೀತೀಯ. ದೇಹ ದಣಿದಿರುತ್ತೆ. ಸಂಜೆ ಅರ್ಧಗಂಟೆಯಾದರೂ ನಿದ್ರೆ ಮಾಡು.
– ತಿಂಗಳಿನ ಆ ಮೂರು ದಿನಗಳಲ್ಲಾದರೂ ಕೆಲಸ ಕಡಿಮೆ ಮಾಡು.
-ನಿನ್ನ ಶಾಲೆ-ಕಾಲೇಜು ಗೆಳತಿಯರಿಗೆ ಆಗಾಗ್ಗೆ ಫೋನ್ ಮಾಡುತ್ತಿರು. ಮೂರ್ನಾಲ್ಕು ತಿಂಗಳಿಗೊಮ್ಮೆಯಾದರೂ ಅವರನ್ನು ಭೇಟಿಯಾಗು.
-ಆರು ತಿಂಗಳಿಗೊಮ್ಮೆ ವೈದ್ಯರ ಬಳಿ ಹೋಗಿ ಆರೋಗ್ಯ ತಪಾಸಣೆ ಮಾಡಿಸಿಕೋ.