Advertisement

ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ 74 ವರ್ಷದ ಅಜ್ಜಿ!

02:40 PM Sep 06, 2019 | Nagendra Trasi |

ಹೈದರಾಬಾದ್: 74 ವರ್ಷದ ಅಜ್ಜಿ ಮತ್ತೆ ತಾಯಿಯಾಗಲು ಸಾಧ್ಯವಿದೆಯಾ? ಬಹುತೇಕ ಉತ್ತರ ಇಲ್ಲ ಎಂದೇ ಆಗಿರುತ್ತೆ. ಆದರೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ 74 ವರ್ಷದ ಅಜ್ಜಿ ಗುರುವಾರ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ!

Advertisement

ಗುಂಟುರು ಎರ್ರಮಟ್ಟಿ ಮಂಗಮ್ಮಾ(74ವರ್ಷ) ಮತ್ತು ಆಕೆಯ ಪತಿ ಎರ್ರಮಟ್ಟಿ ರಾಜಾ ರಾವ್ (80ವರ್ಷ) ದಂಪತಿ ಇದೀಗ ಮೊದಲ ಬಾರಿಗೆ ಪೋಷಕರಾದ ಖುಷಿಯಲ್ಲಿದ್ದಾರೆ. ಇವರು 1962ರ ಮಾರ್ಚ್ 22ರಂದು ವಿವಾಹವಾಗಿದ್ದರು.

ಮಕ್ಕಳಿಲ್ಲ ಎಂಬ ಚಿಂತೆಯಲ್ಲಿದ್ದ ದಂಪತಿ ಚಿಕಿತ್ಸೆಗಾಗಿ ಹಲವಾರು ವೈದ್ಯರನ್ನು ಸಂಪರ್ಕಿಸಿದ್ದರು. ಆದರೆ ಯಾವ ಚಿಕಿತ್ಸೆಯೂ ಇವರಿಗೆ ಫಲಕಾರಿಯಾಗಿರಲಿಲ್ಲವಾಗಿತ್ತು ಎಂದು ವರದಿ ತಿಳಿಸಿದೆ.

ಏತನ್ಮಧ್ಯೆ 2018ರ ನವೆಂಬರ್ ನಲ್ಲಿ ದಂಪತಿ ಗುಂಟೂರು ಸಮೀಪದ ಅಹಲ್ಯಾ ನರ್ಸಿಂಗ್ ಹೋಮ್ ನಲ್ಲಿರುವ ವೈದ್ಯರನ್ನು ಭೇಟಿಯಾಗಿದ್ದರು. ಅಲ್ಲಿ ಡಾ.ಶಾನಾಕ್ಕಾಯಾಲಾ ಉಮಾಶಂಕರ್ ಅವರು ಈ ವೈದ್ಯಕೀಯ ಕೇಸ್ ಅನ್ನು ಸವಾಲಾಗಿ ಸ್ವೀಕರಿಸಿರುವುದಾಗಿ ವರದಿ ವಿವರಿಸಿದೆ.

Advertisement

ಮಂಗಮ್ಮಾಗೆ ಬಿಪಿ, ಶುಗರ್ ಹಾಗೂ ವಂಶವಾಹಿ ಯಾವುದೇ ರೀತಿಯ ಸಮಸ್ಯೆ ಇರಲಿಲ್ಲವಾಗಿತ್ತು. ಬಳಿಕ ತಜ್ಞ ವೈದ್ಯರು ತಪಾಸಣೆ ನಡೆಸಿ, ಸಂತಾನ ಪಡೆಯುವ ಪ್ರಕ್ರಿಯೆಗೆ ಮುಂದಾಗಿದ್ದರು. ತದನಂತರ ಐವಿಎಫ್ ಮೂಲಕ ಮಗುವನ್ನು ಪಡೆಯಲು ಸಲಹೆ ನೀಡಿದ್ದು, ಅದು ಫಲಕಾರಿಯಾಗಿದೆ ಎಂದು ಡಾ.ಉಮಾಶಂಕರ್ ಜೀ ನ್ಯೂಸ್ ಗೆ ತಿಳಿಸಿದ್ದಾರೆ.

ಮಂಗಮ್ಮಾಗೆ ಮುಟ್ಟು ನಿಂತು ಹಲವು ವರ್ಷಗಳೇ ಆಗಿದ್ದರೂ, ಬೇರೆ ಮಹಿಳೆಯ ಅಂಡಾಣು ಮತ್ತು ಅವರ ಪತಿಯ ವೀರ್ಯಾಣು ಪಡೆದು ಭ್ರೂಣ ಸಂಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next