ಮೊಳಕಾಲ್ಮೂರು: ಪಟ್ಟಣದ ಹೊರ ವಲಯದಲ್ಲಿರುವ ಮೊರಾರ್ಜಿ ವಸತಿ ಶಾಲೆಯ ಬಳಿಯಲ್ಲಿ 2.75 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬಾಲಕಿಯರ ಬಿಸಿಎಂ ಹಾಸ್ಟೆಲ್ ಕಟ್ಟಡವು ವಿದ್ಯಾರ್ಥಿಗಳ ಬಳಕೆಗೆ ಬಾರದೆ ನಿರುಪಯುಕ್ತವಾಗಲಿದೆ.
Advertisement
ಪಟ್ಟಣದಿಂದ ಸುಮಾರು 3 ಕಿಮೀಗೂ ಹೆಚ್ಚಿನ ದೂರದಲ್ಲಿರುವ ನಿರ್ಮಾಣವಾಗುತ್ತಿರುವ ನೂತನ ಸರ್ಕಾರಿ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ಕಾಲೇಜ್ ಹಾಸ್ಟೆಲ್ ಕಟ್ಟಡವು ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಉಪಯೋಗಕ್ಕೆ ಬಾರದೆ ವ್ಯರ್ಥವಾಗುವ ಸಾಧ್ಯತೆ ಹೆಚ್ಚಾಗಿದೆ.
Related Articles
Advertisement
ನಿರ್ಮಾಣ ಹಂತದಲ್ಲಿರುವ ಬಾಲಕಿಯರ ಬಿಸಿಎಂನ ಕಾಲೇಜು ಹಾಸ್ಟೆಲ್ ಕಟ್ಟಡವು ಹತ್ತಿರದ ಮೊರಾರ್ಜಿ ವಸತಿ ಶಾಲೆಯ ಬಳಿಯಲ್ಲಿದ್ದರೂ ಯಾವುದೇ ರಕ್ಷಣೆಯಿಲ್ಲದೆ ಗುಡ್ಡಗಾಡು ಪ್ರದೇಶಕ್ಕೆ ಪ್ರೌಢಾವಸ್ಥೆಯಲ್ಲಿರುವ ಬಾಲಕಿಯರನ್ನು ಕಳುಹಿಸುವುದು ಅಪಾಯಕಾರಿಯಾಗಿದೆ.
ಈಗಾಗಲೇ ಬಾಲಕಿಯರ ಬಿ.ಸಿ.ಎಂ ಕಾಲೇಜು ಹಾಸ್ಟೆಲ್ ಹೆಚ್ಚಿನ ಜನಸಂದಣಿಯಲ್ಲಿರುವ ಪಟ್ಟಣದ ದಾಸರಹಟ್ಟಿಯಲ್ಲಿ ಖಾಸಗಿ ಕಟ್ಟಡದಲ್ಲಿರುವುದರಿಂದ ಯಾವುದೇ ಅನಾಹುತಗಳಾಗದಂತೆ ತಡೆಯಬಹುದಾಗಿದೆ. ಆದರೆ 3 ಕಿಮೀ ದೂರದಲ್ಲಿರುವ ಮೊರಾರ್ಜಿ ವಸತಿ ಶಾಲೆಯ ಬಳಿಯಲ್ಲಿ ನಿರ್ಮಾಣವಾಗಲಿರುವ ಬಾಲಕಿಯರ ಬಿಸಿಎಂನ ಕಾಲೇಜು ಹಾಸ್ಟೆಲ್ ನಿಂದ ಪಟ್ಟಣದಲ್ಲಿರುವ ಕಾಲೇಜುಗಳಿಗೆ ಹೆಣ್ಣು ಮಕ್ಕಳು ಹೋಗಿ ಬರುವಾಗ ಎಂತಹ ದುಷ್ಕೃತ್ಯಗಳು ಸಂಭವಿಸಬಹುದೆಂದು ಊಹಿಸಿಕೊಳ್ಳುವುದು ಅಸಾಧ್ಯ.
ಒಂದು ವೇಳೆ ಜಾಗದ ಕೊರತೆ ನೆಪವೊಡ್ಡಿ ಇಲ್ಲಿಯೇ ಬಾಲಕಿಯರ ಬಿ.ಸಿ.ಎಂ ನ ಕಾಲೇಜು ಹಾಸ್ಟೆಲ್ ನಿರ್ಮಿಸಿ ಪ್ರಾರಂಭಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಆಗುವ ದುರ್ಘಟನೆಗಳಿಗೆ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೇ ನೇರ ಹೊಣೆಗಾರರಾಗುವ ಸಾಧ್ಯತೆ ಇದೆ. ಶಾಸಕರು, ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಬಾಲಕಿಯರ ಬಿಸಿಎಂ ಕಾಲೇಜು ಹಾಸ್ಟೆಲ್‌ನ್ನು ಪಟ್ಟಣ ವ್ಯಾಪ್ತಿಯಲ್ಲಿಯೇ ನಿರ್ಮಾಣ ಮಾಡಲು ತೀರ್ಮಾನ ಕೈಗೊಳ್ಳಬೇಕಾಗಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.