Advertisement
ಇದನ್ನೂ ಓದಿ:ಕೆರೆ ಹಾವಿನೊಂದಿಗೆ ಮೂರು ವರ್ಷದ ಬಾಲಕನ ಆಟ : ವಿಡಿಯೋ ವೈರಲ್
ಅಮೆರಿಕ ಮೂಲದ ಬಯೋಟೆಕ್ನಾಲಜಿ ಕಂಪೆನಿ ರಿಡ್ಜ್ ಬ್ಯಾಕ್ ಬಯೋಥೆರಪಾಟಿಕ್ಸ್ ಹಾಗೂ ಫಾರ್ಮಾ ದಿಗ್ಗಜ ಮೆರ್ಕ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಮೊದಲ ಆ್ಯಂಟಿ ವೈರಲ್ ಕೋವಿಡ್-19 ಮಾತ್ರೆಯಿದು. ಈಗ ಭಾರತದ 13 ಔಷಧ ತಯಾರಿಕ ಕಂಪೆನಿಗಳು ಈ ಮಾತ್ರೆಯ ತಯಾರಿಕೆಯಲ್ಲಿ ತೊಡಗಿವೆ. ಕೊರೊನಾ ಸೋಂಕು ತಗಲಿರುವ ವಯಸ್ಕರ ಚಿಕಿತ್ಸೆಗೆ ಈ ಮಾತ್ರೆ ನೀಡಲು ಅನುಮತಿ ಸಿಕ್ಕಿದೆ. ಏನು ಮಾಡುತ್ತದೆ?
ಈ ಮಾತ್ರೆಯು ಸಾರ್ಕ್-ಕೋವ್-2 ವೈರಸ್‌ನ ವಂಶವಾಹಿ ಕೋಡ್ ನಲ್ಲಿ ಬದಲಾವಣೆ ತರುವ ಮೂಲಕ, ವೈರಸ್‌ನ ಸಂತಾನೋತ್ಪತ್ತಿಯನ್ನು ತಡೆಯುತ್ತದೆ. ಹೀಗಾಗಿ ಶರೀರದಲ್ಲಿ ವೈರಸ್ ದ್ವಿಗುಣಗೊಳ್ಳುವುದು ನಿಲ್ಲುತ್ತದೆ ಹಾಗೂ ಸೋಂಕಿನ ಗಂಭೀರತೆ ತಗ್ಗುತ್ತದೆ.
Related Articles
200 ಮಿಲಿ ಗ್ರಾಂನ 4 ಮೊಲ್ನುಪಿರವಿರ್ ಕ್ಯಾಪ್ಸೂಲ್ ಗಳನ್ನು ಸತತ 5 ದಿನಗಳ ಕಾಲ ಪ್ರತೀ 12 ಗಂಟೆಗೆ ಒಮ್ಮೆ ಸೇವಿಸಬೇಕು. ಅಂದರೆ ಒಟ್ಟು 40 ಮಾತ್ರೆಗಳನ್ನು ಸೋಂಕಿತರಿಗೆ ನೀಡಲಾಗುತ್ತದೆ. ಆದರೆ 5ಕ್ಕಿಂತ ಹೆಚ್ಚು ದಿನಗಳ ಕಾಲ ಇದನ್ನು ನೀಡುವಂತಿಲ್ಲ. ಅನುಮತಿ ಸಿಕ್ಕಿರುವ ದೇಶಗಳು ಯುನೈಟೆಡ್ ಕಿಂಗ್ ಡಂ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಅನುಮತಿ ಸಿಕ್ಕಿದೆ.
Advertisement
ಯಾರಿಗೆ ನೀಡಬಾರದು?ಮಕ್ಕಳಿಗೆ ಈ ಮಾತ್ರೆ ನೀಡುವಂತಿಲ್ಲ. ಏಕೆಂದರೆ ಇದು ಅವರ ಮೂಳೆಗಳ ಬೆಳವಣಿಗೆಗೆ ಅಡ್ಡಿ ಉಂಟು ಮಾಡಬಹುದು. ಗರ್ಭಿಣಿಯರಿಗೆ ನೀಡುವುದರಿಂದ ಹುಟ್ಟುವ ಮಗುವಿಗೆ ಸಮಸ್ಯೆಯಾಗುವ ಸಾಧ್ಯತೆಯಿರುತ್ತದೆ. ಅಡ್ಡ ಪರಿಣಾಮಗಳೇನು?
ಈ ಮಾತ್ರೆಯು ವೈರಲ್ ಆರ್ ಎನ್ ಎಯನ್ನೇ ರೂಪಾಂತರಗೊಳಿಸುತ್ತದೆ. ಪ್ರಾಣಿಗಳ ಮೇಲೆ ಅಧ್ಯಯನ ನಡೆಸಿದಾಗ, ಮೊಲ್ನುಪಿರವಿರ್ ನೀಡಿದ ಕೋಶದಲ್ಲೇ ರೂಪಾಂತರ ಆಗಿರುವುದು ಕಂಡು ಬಂದಿದೆ. ಹೀಗಾಗಿ ಈ ಔಷಧದಿಂದ ಕ್ಯಾನ್ಸರ್ ಅಥವಾ ಹುಟ್ಟುವ ಮಗುವಿನಲ್ಲಿ ತೊಂದರೆ ಕಾಣಿಸುವ ಆತಂಕವನ್ನೂ ತಜ್ಞರು ವ್ಯಕ್ತಪಡಿಸಿದ್ದಾರೆ. ಆದರೆ ಈವರೆಗಿನ ಮಾಹಿತಿಯ ಪ್ರಕಾರ ಈ ಔಷಧದಿಂದ ಮಾನವರಲ್ಲಿ ಗಂಭೀರ ಅಡ್ಡ ಪರಿಣಾಮಗಳು ಕಂಡು ಬಂದಿಲ್ಲ.