Advertisement

ಕೃಷಿ ಇಲಾಖೆ ಸೌಲಭ್ಯ ಸದ್ಭಳಕೆಯಾಗಲಿ

06:03 PM Mar 04, 2020 | Naveen |

ಮೊಳಕಾಲ್ಮೂರು: ರೈತರು ಕೃಷಿ ಇಲಾಖೆಯಿಂದ ಸಿಗುವ ಕೃಷಿ ಸಲಕರಣೆ ಮತ್ತು ಇನ್ನಿತರ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕೇ ವಿನಃ ಬೇರೆಯವರಿಗೆ ಮಾರಿಕೊಳ್ಳಬಾರದು ಎಂದು ಪಟ್ಟಣ ಪಂಚಾಯತ್‌ ಮಾಜಿ ಅಧ್ಯಕ್ಷ ಜಿ. ಪ್ರಕಾಶ್‌ ಹೇಳಿದರು.

Advertisement

ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಳೆಯಿಂದ ವಂಚಿತವಾದ ಮೊಳಕಾಲ್ಮೂರು ತಾಲೂಕಿನ ರೈತರು ಕೃಷಿ ಸಲಕರಣೆಗಳನ್ನು ಹಾಗೂ ಹೆಚ್ಚಿನ ಸೌಲಭ್ಯಗಳನ್ನು ಕೃಷಿ ಚಟುವಟಿಕೆಗಳಿಗಾಗಿ ಬಳಸಿಕೊಳ್ಳಬೇಕೇ ಹೊರತು ಬೇರೊಬ್ಬರಿಗೆ ಮಾರಿಕೊಂಡು ತಪ್ಪು ಸಂದೇಶ ರವಾನೆಯಾಗದಂತೆ ಎಚ್ಚರಿಕೆ ವಹಿಸಿಕೊಳ್ಳಬೇಕು. ಸರ್ಕಾರ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವ ಮೂಲಕ ಹೆಚ್ಚಿನ ರೈತರು ಸ್ವಾವಲಂಬಿಗಳಾಗಿ ಬದುಕಲು ಸಹಕಾರ ನೀಡಬೇಕು ಎಂದರು.

ಯಾರಾದರು ರೈತರು ಆಂಧ್ರಪ್ರದೇಶದ ತಮ್ಮ ಜಮೀನುಗಳಿಗೆ ಕೃಷಿ ಪರಿಕರಗಳನ್ನು ಸಾಗಿಸಿದಲ್ಲಿ ಅದಕ್ಕೆ ಅಧಿಕಾರಿಗಳು ಹೊಣೆಗಾರರಲ್ಲ. ಸ್ಥಳೀಯ ರೈತರ ದಾಖಲೆಗಳನ್ನು ಪಡೆದು ಕೃಷಿ ಪರಿಕರಗಳನ್ನು ನೀಡಲಾಗುತ್ತಿದೆ. ಆದರೆ ಅಧಿಕಾರಿಗಳು ಕೃಷಿ ಪರಿಕರಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ವರದಿ ಮಾಡಿರುವುದು ಸತ್ಯಕ್ಕೆ ದೂರವಾದುದು. ಇದು ಒಳ್ಳೆಯ ಬೆಳವಣಿಗೆಯಲ್ಲ. ಇಂತಹ ವರದಿಯಿಂದ ಕೃಷಿ ಇಲಾಖೆಗೆ ಸೌಲಭ್ಯಗಳು ಹಾಗೂ ಅನುದಾನಗಳು ಕಡಿತವಾಗಿ ರೈತರಿಗೆ ಅನ್ಯಾಯವಾಗಬಾರದು. ಮುಂದಿನ ದಿನಗಳಲ್ಲಿ ರೈತರು ತಾಲೂಕಿನಿಂದ ಸಿಗುವ ಸೌಲಭ್ಯಗಳನ್ನು ಬೇರೆಯವರಿಗೆ ಮಾರಾಟ ಮಾಡಬಾರದೆಂದು ನಿರ್ಧಾರ ಕೈಗೊಂಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ರಂಗಸ್ವಾಮಿ, ತಾಂತ್ರಿಕ ಅಧಿಕಾರಿ ಹೇಮಂತ್‌ ಕುಮಾರ್‌, ತಾಂತ್ರಿಕ ವ್ಯವಸ್ಥಾಪಕ ನಿರಂಜನಮೂರ್ತಿ, ಪ್ರಗತಿಪರ ರೈತರಾದ ಪಾಪಯ್ಯ, ಧರಣೇಂದ್ರಪ್ಪ, ಪಿ.ಎಸ್‌. ಮಂಜಪ್ಪ ನಾಯಕ, ಬಸಣ್ಣ, ಶಿವು, ಮಂಜುನಾಥ, ರಂಗಣ್ಣ, ಚಿತ್ತಯ್ಯ, ಆನಂದ, ಓಬಣ್ಣ, ನಾಗೇಂದ್ರ, ತಿಪ್ಪೇಸ್ವಾಮಿ, ಸಣ್ಣಪಾಪಯ್ಯ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next