Advertisement

ಗುರುಪೀಠಕ್ಕೆ 10 ಕೋಟಿ ಅನುದಾನ

03:42 PM Feb 01, 2020 | Naveen |

ಮೊಳಕಾಲ್ಮೂರು: ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಭಾಗದ ರೇಷ್ಮೆ ಸೀರೆ ನೇಕಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಸ್ವಕುಳಸಾಳಿ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳ ಗಮನಕ್ಕೆ ಸ್ವಕುಳಸಾಳಿ ಗುರುಪೀಠಕ್ಕೆ 10 ಕೋಟಿ ರೂ. ಅನುದಾನವನ್ನು ಕಲ್ಪಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಭರವಸೆ ನೀಡಿದರು.

Advertisement

ಪಟ್ಟಣದ ಹಾನಗಲ್‌ ರಸ್ತೆಯ ಪಿ.ಟಿ.ಹಟ್ಟಿ ಬಳಿಯ ಜಿಹ್ವೇಶ್ವರಾನಂದ ಭಾರತಿ ಸ್ವಾಮಿಗಳು ಸ್ವಕುಳಸಾಳಿ ಗುರುಪೀಠದ ಪ್ರಥಮ ಪಟ್ಟಾಧಿಕಾರ ಮಹೋತ್ಸವ ಮತ್ತು ಸ್ವಕುಳಸಾಳಿ ಸಮಾಜದ ಸಮಾವೇಶದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬರದ ನಾಡಿನಲ್ಲಿ ಸ್ಥಾಪನೆಯಾಗಿರುವ ಸ್ವಕುಳಸಾಳಿ ಸಮಾಜದ ಗುರುಪೀಠಕ್ಕೆ ಗುರುಗಳಾಗಿ ಯಾರು ಬರುವವರು ಎಂಬುದು ಯಕ್ಷಪ್ರಶ್ನೆಯಾಗಿ ಕಾಡುತ್ತಿದ್ದ ಸಂದರ್ಭದಲ್ಲಿ ಹರಿದ್ವಾರದ ಯೋಗ ಗುರು ಶ್ರೀ ಸ್ವಾಮಿ ಬಾಬಾ ರಾಮದೇವ್‌ ಅವರ ಶಿಷ್ಯರಾಗಿ ಹಿಮಾಲಯದಲ್ಲಿ ತಪಸ್ಸು ಮಾಡಿ ಸಾಕಷ್ಟು ಪಾಂಡಿತ್ಯ ಪಡೆದು, ಸರ್ವ ವಿದ್ಯೆಗಳನ್ನು ಕಲಿತು ಸ್ಥಳೀಯರಾದ ಗುರುಪೀಠಾಧ್ಯಕ್ಷರಾಗಿರುವ ಶ್ರೀ ಜಿಹ್ವೇಶ್ವರಾನಂದ ಭಾರತಿ ಸ್ವಾಮಿಗಳಿಗೆ ಇಡೀ ರಾಜ್ಯದ ಪರವಾಗಿ ಹೆಚ್ಚಿನ ಆರ್ಥಿಕ ನೆರವು ಕಲ್ಪಿಸಲು ಶ್ರಮಿಸಲಾಗುವುದು.

ಗುರುಪೀಠಾಧ್ಯಕ್ಷರಾಗುವುದು ಸುಲಭದ ಕೆಲಸವಾಗಿರದೆ ಕಠಿಣವಾದ ಕಾಯಕವಾಗಿದ್ದು, ಎಲ್ಲೋ ಗುರುಗಳಾಗದೆ ಪ್ರಥಮವಾಗಿ ಗುರುಪೀಠವನ್ನು ಅಲಂಕರಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಭಾಗದಲ್ಲಿ ಹೆಚ್ಚು ನೇಕಾರ ಸಮಾಜದವರಿದ್ದು, ಈ ನೇಕಾರರ ಏಳ್ಗೆಗೆ ಶ್ರಮಿಸಲಾಗುವುದು. ಕಳೆದ 2008-09ರಲ್ಲಿ ನೇಕಾರ ಇಲಾಖೆಯ ಸಚಿವರಾಗಿದ್ದಾಗ ಲಕ್ಷ್ಮಿನಾರಾಯಣ ಸಲಹೆ ಪಡೆದು ನೇಕಾರರ ಸಮಸ್ಯೆ ಪರಿಹರಿಸುವ ಕಾರ್ಯಕೈಗೊಳ್ಳಲಾಗಿತ್ತು.

ವಿಜಯಪುರ, ಬಾಗಲಕೋಟೆ, ಬೆಳಗಾವಿ ಭಾಗದಲ್ಲಿನ ನೇಕಾರರು ಒಂದೇ ಕುಟುಂಬದಲ್ಲಿ 10 ರಿಂದ 20 ಮಂದಿ ಜೀವನ ಮಾಡುತ್ತಿರುವ ಕಷ್ಟ ಹೇಳತೀರದಾಗಿದೆ. ಇತ್ತೀಚಿನ ದಿನಗಳಲ್ಲಿ ಪವರ್‌ ಲೂಮ್ಸ್‌ ಬಂದಿದ್ದು, ಜತೆಗೆ ರೇಷ್ಮೆ ಸೀರೆ ನೇಕಾರಿಕೆಗೆ ಹೆಚ್ಚಿನ ಹೆಸರು ಮಾಡುತ್ತಿರುವ ಮೊಳಕಾಲ್ಮೂರು ತಾಲೂಕಿನಲ್ಲಿ ಟೆಕ್ಸ್‌ಟೈಲ್‌ ಪಾರ್ಕ್‌ ನಿರ್ಮಾಣ ಮಾಡಬೇಕಾಗಿದೆ. ನೇಕಾರಿಕೆ ಸಮುದಾಯವು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಬೆಳೆಯಬೇಕಾಗಿದೆ. ನಿರ್ಮಾಣವಾದ ಗುರುಪೀಠದ ಸ್ವಕುಳ ಸಾಳಿ ಸಮಾಜದಲ್ಲಿ ಹುಟ್ಟದಿದ್ದರೂ ನಮ್ಮ ಗೌರವವನ್ನು ಹೆಚ್ಚಿಸಲು ಕೈಗೊಂಡಿರುವ ಗುರುಗಳ ಕಾಯಕಕ್ಕೆ ನಾವುಗಳು ಭಕ್ತರಾಗಿ ಆಶೀರ್ವಾದ ಪಡೆದು ಜವಾಬ್ದಾರಿಯಿಂದ ಗುರುಪೀಠದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು. ಈ ಭಾಗದ ಸರ್ವಸಮುದಾಯಗಳು ದುಶ್ಚಟಗಳನ್ನು ತೊರೆದು ಉತ್ತಮ ಜೀವನ ಪಡೆಯಬೇಕಾಗಿದೆ. ಈ ಭಾಗದ ನೇಕಾರರಿಗೆ ಅಪೇರಿಯಲ್‌ ಪಾರ್ಕ್‌
ಸೇರಿದಂತೆ ಹೆಚ್ಚಿನ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಶ್ರಮಿಸಲಾಗುವುದು ಎಂದು ತಿಳಿಸಿದರು.
ಸ್ವಕುಳ ಸಾಳಿ ಸಮಾಜದ ಗುರುಪೀಠಾಧ್ಯಕ್ಷ ಶ್ರೀ ಜಿಹ್ವೇಶ್ವರಾನಂದ ಭಾರತಿ ಸ್ವಾಮಿಗಳು, ಸ್ವಕುಳ ಸಾಳಿ ಸಮಾಜದ ರಾಜ್ಯಾಧ್ಯಕ್ಷ ಚಂದ್ರಕಾಂತ ಎನ್‌.ಭಂಡಾರೆ, ನೇಕಾರ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ಡಿ.ಲಕ್ಷ್ಮಿನಾರಾಯಣ, ಅ.ಭಾ.ಸ್ವಕುಳಸಾಳಿ ಸಮಾಜದ ಅಧ್ಯಕ್ಷ ರಮೇಶ್‌ ಎ.ಚಿಲ್ಲಾಳ, ಗುರುಪೀಠ ಸ್ಥಾಪನಾ ಸಮಿತಿಯ ಅಧ್ಯಕ್ಷ ನೀಲಕಂಠಪ್ಪ ಎಸ್‌. ರೋಖಡೆ, ಅ.ಭಾ.ಸ್ವಕುಳಸಾಳಿ ಮಹಿಳಾ ಮಂಡಳಿಯ ಅಧ್ಯಕ್ಷೆ ಶಶಿಕಲಾ ಚೌಧರಿ, ಗೌರವಾಧ್ಯಕ್ಷೆ ಡಾ.ಪುಷ್ಪಾ ಕ್ಷೀರಸಾಗರ, ರಾಜ್ಯಾಧ್ಯಕ್ಷೆ ಭಾರತಿ ಜಿಂದೆ, ಸ್ವಕುಳಸಾಳಿ ಸಮಾಜದ ತಾಲೂಕು ಅಧ್ಯಕ್ಷ ಡಿ.ಎಂ.ಈಶ್ವರಪ್ಪ, ಶ್ರೀದುರ್ಗಾದೇವಿ ಮಹಿಳಾ ಮಂಡಳಿಯ ಗೌರವಾಧ್ಯಕ್ಷೆ ರಾಧಾಮಣಿ ಸ್ವಾಮಿದೇವ್‌ ಗಾಯಕವಾಡ್‌, ಬಿ.ಜೆ.ಪಿ.ಯ ಮಂಡಲಾಧ್ಯಕ್ಷ ಡಾ.ಪಿ.ಎಂ. ಮಂಜುನಾಥ, ವೈದ್ಯರಾದ ಡಾ.ಬಿ.ಜಿ.ಜ್ಞಾನದೇವ್‌, ಡಾ.ಪದ್ಮಾವತಿ, ವಿನೋದ್‌ ಎಸ್‌.ಸರೋಧೆ , ಪ.ಪಂ.ನ ಸದಸ್ಯರಾದ ಶುಭ ಡಿಶ್‌ ರಾಜು, ಸವಿತಾ ಅರ್ಜುನ, ಸಮಾಜದ ಮುಖಂಡರಾದ ಜ್ಞಾನದೇವ್‌, ನರೇಂದ್ರದೇವ್‌, ಗಂಗಾಧರಪ್ಪ, ಅಶೋಕ್‌, ಗಿರೀಶ್‌ ಹಾಗೂ ಸ್ವಕುಳಸಾಳಿ ಸಮಾಜದ ಬಾಂಧವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next